ADVERTISEMENT

400 ಹೆಕ್ಟೇರ್ ‘ನಗರೀಕರಣ’ಕ್ಕೆ ಆದೇಶ

​ಪ್ರಜಾವಾಣಿ ವಾರ್ತೆ
Published 23 ಮೇ 2015, 9:14 IST
Last Updated 23 ಮೇ 2015, 9:14 IST

ಹಾವೇರಿ: ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರವು ತಪ್ಪು ಅನುಮೋದನೆ ನೀಡಿದ ಪರಿಣಾಮ ವ್ಯವಸಾಯ ವಲಯ ದಲ್ಲಿ (ಹಸಿರು ಪಟ್ಟಿ) ಕೆಲವರು ವಿನ್ಯಾಸ ಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಅವು ಗಳನ್ನು ಸಕ್ರಮಗೊಳಿಸುವ ಸಲುವಾಗಿ ಹಾವೇರಿಯ ನಗರೀಕರಣ ಪ್ರದೇಶ (ಹಳದಿ ಪಟ್ಟಿ)ವನ್ನು ವಿಸ್ತರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಹೊಸದಾಗಿ ‘ಮಹಾ ಯೋಜನೆ ನಕ್ಷೆ’ಯನ್ನು ರೂಪಿಸಿ, ಅನು ಮೋದನೆಗೆ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆಯು ಪ್ರಾಧಿಕಾರಕ್ಕೆ ಸೂಚಿಸಿದೆ.

ಹಾವೇರಿ ನಗರಾಭಿವೃದ್ಧಿ ಪ್ರಾಧಿ ಕಾರದ ಆಯುಕ್ತರಿಗೆ ಪತ್ರ ಬರೆದಿರುವ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ವಿ. ರಾಜೇಂದ್ರ, ‘ಪ್ರಾಧಿ ಕಾರದ ವತಿಯಿಂದಲೇ ತಪ್ಪಾಗಿರುವ ಕಾರಣ ಅಭಿವೃದ್ಧಿಪಡಿಸಿದ ವಿನ್ಯಾಸ ಗಳನ್ನು ಸಂರಕ್ಷಿಸಬೇಕಾಗಿದೆ. ಈ ನಿಟ್ಟಿನಲ್ಲಿ ಹೊಸ ಮಹಾಯೋಜನೆ ನಕ್ಷೆಯನ್ನು ರೂಪಿಸಬೇಕು’ ಎಂದು ಆದೇಶಿಸಿದ್ದಾರೆ.

ಭೂಮಿಯ ಉಪಯೋಗಕ್ಕೆ ವಿರುದ್ಧ ವಾಗಿ ನೀಡಿರುವ ಎಲ್ಲ ಅನುಮೋ ದನೆಗಳನ್ನು ರದ್ದುಗೊಳಿಸಬೇಕು. ಮಹಾ ಯೋಜನೆ ಅನುಮೋದನೆ ಗೊಂಡ ನಂತರ ಹೊಸ ಪ್ರಸ್ತಾವಗಳನ್ನು ಸ್ವೀಕರಿಸಿ, ಶುಲ್ಕವನ್ನು ಪಾವತಿಸಿಕೊಂಡು ವೈಯಕ್ತಿಕ ಆಸ್ತಿಗಳಿಗೆ ಅನುಮೋದನೆ ನೀಡಬೇಕು. ನಗರದ ಪ್ರಸ್ತುತ ಗಡಿ ಭಾಗದಿಂದ  400 ಹೆಕ್ಟೇರ್‌ನಷ್ಟು ಹೊರ ಪ್ರದೇಶವನ್ನು ನಗ ರೀಕರಣ ಗೊಳಿಸಬೇಕು. ಆದರೆ, ಈ ಮಧ್ಯದಲ್ಲಿ ಎಲ್ಲೂ ಭೂಮಿ ನಗರೀಕರಣಗೊಳ್ಳದೇ ಉಳಿಯಬಾ ರದು. ವಲಯ ನಿಯಮಾವಳಿಗಳಲ್ಲಿ ಸಂರಕ್ಷಣೆಯ ಉಪನಿಯಮ ಗಳನ್ನು ಅಳವಡಿಸಿಕೊಂಡು, ಸಾರ್ವಜ ನಿಕವಾಗಿ ಯಾವುದೇ ತೊಂದರೆ ಉಂಟಾಗದಂತೆ ಅನುಮೋದನೆ ನೀಡ ಬೇಕು. ಆದರೆ, ಕಾನೂನು ಬಾಹಿರ ರಚನೆಗಳಿಗೆ ಅನು ಮೋದನೆ ನೀಡಬಾರದು. ಅಲ್ಲದೇ, ಹೈಟೆನ್‌್ಶನ್‌ ವಿದ್ಯುತ್‌ ಲೈನ್‌್ ಕೆಳಗೆ, ಹಳ್ಳ, ನಾಲೆಗಳು, ಉದ್ಯಾನಕ್ಕೆ ನೀಡಿರುವ ಭೂಮಿಯಲ್ಲಿ ಅಭಿವೃದ್ಧಿ ಪಡಿಸಿದ ರಚನೆ ಗಳನ್ನು ರದ್ದುಪಡಿಸಬೇಕು. ಅಂತಹ ಪ್ರಕರಣವನ್ನು ಮರಪರಿಶೀಲಿಸಲೂ ಅವ ಕಾಶ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

ಈ ನಿಟ್ಟಿನಲ್ಲಿ ಪ್ರಾಧಿಕಾರವು ಕಾನೂನು,  ಸುಪ್ರೀಂ ಕೋರ್ಟ್‌ಗಳ ನಿರ್ದೇಶನದ ಅನ್ವಯ ನಾಲಾ, ಕೆರೆ, ಉದ್ಯಾನ, ರಸ್ತೆಗಳಲ್ಲಿರುವ ರಚನೆಗಳನ್ನು ತೆರವುಗೊಳಿಸಿ, ಸಾರ್ವಜನಿಕ ಆಸ್ತಿಯನ್ನು ಸಂರಕ್ಷಿಕೊಳ್ಳಬೇಕು. ಉಳಿದಂತೆ ಹಸಿರು ಪಟ್ಟಿಯಲ್ಲಿರುವ (ಎನ್‌ಎ ಆಗದ) ರಚನೆಗಳಿಗೆ ಪ್ರಾಧಿಕಾರವು ಎನ್‌ಎ ನೀಡ ಬಹುದಾಗಿದೆ. ಅಕ್ರಮ–ಸಕ್ರಮ ಮಾದರಿ ಯಲ್ಲಿ ಈ ಪ್ರಕ್ರಿಯೆ ನಡೆಯಲಿದೆ ಎಂದು ತಜ್ಞರು ಆದೇಶದ ಬಗ್ಗೆ ಪ್ರತಿ ಕ್ರಿಯಿಸಿದ್ದಾರೆ.

ಹಾವೇರಿ, ಇಜಾರಿಲಕ್ಮಾಪುರ, ಜಂಗ ಮರಕೊಪ್ಪ, ದೇವಗಿರಿ, ದೇವಗಿರಿ ಯಲ್ಲಾಪುರ, ಆಲದಕಟ್ಟಿ, ತೋಟದ ಯಲ್ಲಾಪುರ ವ್ಯಾಪ್ತಿಗೆ ಸೇರಿದ ಒಟ್ಟು 140 ಮಾಲೀಕರು ಕೈಗಾರಿಕೆ, ವಸತಿ, ಸಾರಿಗೆ, ಕೃಷಿ, ವಸತಿ, ಉದ್ಯಾನ, ಸಾರ್ವಜನಿಕ, ವಸತಿ ಮತ್ತಿತರ ಮೀಸಲಾದ ಜಮೀನಿಗೆ ವಾಣಿಜ್ಯ, ವಸತಿ, ಕೈಗಾರಿಕೆ, ಶೈಕ್ಷಣಿಕ ಕಾರಣಕ್ಕಾಗಿ ಬಳಸಲು ಅನುಮೋದನೆ ನೀಡುವಂತೆ ಕೋರಿದ್ದಾರೆ. ಈ ಪೈಕಿ ಉದ್ಯಾನದ ಭೂಮಿಯನ್ನು ಸಕ್ರಮ ಗೊಳಿಸಲು ಸೂಕ್ತವಾಗಿಲ್ಲ ಎಂದು ಕಂದಾಯ ಇಲಾಖೆ ಈ ಹಿಂದೆ ನಡೆ ಸಿದ ಸರ್ವೆ ಸಂದರ್ಭದಲ್ಲಿ  ಷರಾ ಬರೆದಿದೆ.

ಹೊಸ ನಕ್ಷೆಯನ್ನು ಸಲ್ಲಿಸಲು ಸೂಚಿಸಿರು ವುದು ಸ್ವಾಗತಾರ್ಹ. ಆದರೆ, ಹೊಸ ದಾಗಿ ಶುಲ್ಕ ಸ್ವೀಕರಿಸುವ  ಮೊದಲು, ಹಿಂದೆ ಪಾವತಿಸಿದ ಹಣವನ್ನು ತಪ್ಪಿತಸ್ಥ ರಿಂದ ಭರಿಸಿ, ಮರುಪಾವತಿಸಲಿ
ನಿವೇಶನ ಮಾಲೀಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.