ADVERTISEMENT

‘ಮಾಚಿದೇವ ಇತಿಹಾಸದ ಬೆಳ್ಳಿ ಚುಕ್ಕೆ’

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2018, 9:11 IST
Last Updated 3 ಫೆಬ್ರುವರಿ 2018, 9:11 IST

ರಾಣೆಬೆನ್ನೂರು: ‘12ನೇ ಶತಮಾನದ ಬಸವಾದಿ ಶರಣರ ಇತಿಹಾಸದಲ್ಲಿ ಮಡಿವಾಳ ಮಾಚಿದೇವ ಬೆಳ್ಳಿ ಚುಕ್ಕೆಯಂತಿದ್ದು, ಸಮಾಜವನ್ನು ತಿದ್ದುವ ಕೆಲಸವನ್ನು ಮಾಡಿದ್ದಾರೆ’ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಏಕನಾಥ ಭಾನುವಳ್ಳಿ ಹೇಳಿದರು.

ನಗರದ ಅಗಸರ ಮಠದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಮಡಿವಾಳ ಸಮಾಜದ ತಾಲ್ಲೂಕು ಘಟಕದ ಸಹಯೋಗದಲ್ಲಿ  ಗುರುವಾರ ಆಯೋಜಿಸಿದ್ದ ‘ಮಡಿವಾಳ ಮಾಚಿದೇವರ ಜಯಂತಿ’ ಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಗರಸಭೆ ಅಧ್ಯಕ್ಷೆ ಆಶಾ ಗುಂಡೇರ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಧರ ಎನ್. ಹಾಗೂ ಉಪನ್ಯಾಸಕಿ ಸಾಯಿಲತಾ ಮಡಿವಾಳರ ಮಾತನಾಡಿದರು.

ಅದ್ಧೂರಿ ಮೆರವಣಿಗೆ: ಪೂರ್ಣಕುಂಭ ಹಾಗೂ ಸಕಲ ವಾದ್ಯಮೇಳಗಳೊಂದಿಗೆ ನಗರದ ಅಗಸರ ಮಠದಿಂದ ಪ್ರಮುಖ ರಸ್ತೆಗಳಲ್ಲಿ ಮಡಿವಾಳ ಮಾಚಿದೇವನ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶ ಕೋಳಿವಾಡ, ತಹಶೀಲ್ದಾರ್‌ ಬಿ.ರಾಮಮೂರ್ತಿ, ಬಿಬಿಎಂಪಿ ಮಾಜಿ ಉಪಮೇಯರ್ ಆರ್. ಶಂಕರ ಇದ್ದರು.

ADVERTISEMENT

ಸಭಾ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ನೀಲಕಂಠಪ್ಪ ಕುಸಗೂರ, ಉಪಾಧ್ಯಕ್ಷೆ ಚೈತ್ರಾ ಮಾಗನೂರ, ಸದಸ್ಯರಾದ ಜ್ಯೋತಿ ಗಂಜಾಮದ, ಭರಮಪ್ಪ ಉರ್ಮಿ, ಗ್ರೇಡ್–2 ತಹಶೀಲ್ದಾರ್‌ ಬಿ.ವಿ.ಗಿರೀಶಬಾಬು, ನಗರಸಭೆ ಉಪಾಧ್ಯಕ್ಷೆ ವಸಂತಮ್ಮ ಮೇದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.