ADVERTISEMENT

ಮಠ– ಮಂದಿರಗಳ ಪುಣ್ಯಭೂಮಿ ಭಾರತ: ಶಾಸಕ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2018, 9:47 IST
Last Updated 10 ಫೆಬ್ರುವರಿ 2018, 9:47 IST

ಶಿಗ್ಗಾವಿ: ಮಠ– ಮಂದಿರಗಳ ಪುಣ್ಯಭೂಮಿ ನಮ್ಮದು. ಈ ಪರಂಪರೆ ಭಾರತದಲ್ಲಿ ದೇಶದಲ್ಲಿ ಮಾತ್ರ ಕಾಣುತ್ತದೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು. ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಗುರುವಾರ ಶಿರಹಟ್ಟಿ ಫಕ್ಕೀರೇಶ್ವರ ಶಾಖಾಮಠದ ಲೋಕಾರ್ಪಣೆ ಹಾಗೂ ಭಾವೈಕ್ಯ ಧರ್ಮ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮಠಮಂದಿರಗಳ ಪರಂಪರೆಯಿಂದ, ಮಾನವೀಯ ಗುಣಧರ್ಮದಿಂದ ಭಾರತ ವಿವಿಧತೆಯಲ್ಲಿ ಏಕತೆ ಕಂಡಿದ್ದು, ಹಿಂದೂ, ಬೌದ್ಧ, ಸಿಖ್, ಕ್ರೈಸ್ತ, ಮುಸ್ಲಿಂ... ಹೀಗೆ ಸರ್ವ ಧರ್ಮಗಳ ಜನರು ಸಮಾನವಾಗಿ ಬದುಕುವ ಅವಕಾಶ ಕಲ್ಪಿಸಿದೆ. ಆದರೆ, ಇಂದು ಸಂಬಂಧಗಳಲ್ಲಿ ಲಾಭ– ನಷ್ಟಗಳ ಲೆಕ್ಕಾಚಾರ ನಡೆಯುತ್ತಿದೆ. ಹೀಗಾಗಿ, ಮಾನವೀಯತೆ ಮೌಲ್ಯಗಳು ಮರೆಯಾಗುತ್ತಿವೆ’ ಎಂದು ವಿಷಾದ ವ್ಯಕ್ತಪಡಿಸಿದರು.

ಶಿರಹಟ್ಟಿಯ ಫಕ್ಕೀರಸಿದ್ಧರಾಮ ಸ್ವಾಮೀಜಿ, ಮಣಕವಾಡ ಅನ್ನದಾನೀಶ್ವರ ಮಠದ ಸಿದ್ದರಾಮ ದೇವರು, ಕುಂದಗೋಳದ ಬಸವಣ್ಣ ಸ್ವಾಮೀಜಿ, ಕೂಡಲದ ಗುರುನಂಜೇಶ್ವರಮಠದ ಗುರು ಮಹೇಶ್ವರ ಸ್ವಾಮೀಜಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.