ADVERTISEMENT

ಕವಿ, ಕಲಾವಿದರಿಗೆ ಸಮಾಜವೇ ಮೂಲ ಆಕರ: ಅಪ್ಪಗೆರೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2017, 10:24 IST
Last Updated 12 ಫೆಬ್ರುವರಿ 2017, 10:24 IST
ಕಲಬುರ್ಗಿಯ ಶನಿವಾರ ಆಯೋಜಿಸಿದ್ದ ಕಲಾವಿದ ದಿ.ಶಾಂತಲಿಂಗಪ್ಪ ಪಾಟೀಲ ನಿಂಬಾಳ ಅವರ ಕೃತಿಗಳ ಪ್ರದರ್ಶನ ಹಾಗೂ ವಿಚಾರ ಸಂಕಿರಣದಲ್ಲಿ ಶನಿವಾರ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ ಮಾತನಾಡಿದರು
ಕಲಬುರ್ಗಿಯ ಶನಿವಾರ ಆಯೋಜಿಸಿದ್ದ ಕಲಾವಿದ ದಿ.ಶಾಂತಲಿಂಗಪ್ಪ ಪಾಟೀಲ ನಿಂಬಾಳ ಅವರ ಕೃತಿಗಳ ಪ್ರದರ್ಶನ ಹಾಗೂ ವಿಚಾರ ಸಂಕಿರಣದಲ್ಲಿ ಶನಿವಾರ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ ಮಾತನಾಡಿದರು   

ಕಲಬುರ್ಗಿ: ಕವಿ ಹಾಗೂ ಕಲಾವಿದರ ಭಾವಾಭಿವ್ಯಕ್ತಿಗೆ ಸಮಾಜದ ಆಗು ಹೋಗುಗಳೆ ಮೂಲ ಆಕರವಾಗಿರುತ್ತದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿ­ದ್ಯಾ­ಲಯದ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ ಹೇಳಿದರು.

ನಗರದ ದಿ ಐಡಿಯಲ್‌ ಫೈನ್‌ ಆರ್ಟ್‌ ಸಂಸ್ಥೆಯ ಮಾತೋಶ್ರೀ ನೀಲ ಗಂಗಮ್ಮ ಗು.ಅಂದಾನಿ ಆರ್ಟ್‌ ಗ್ಯಾಲರಿಯಲ್ಲಿ ಆಯೋಜಿಸಿದ್ದ ‘ಹಿರಿಯರ ನೆನಪು ಮತ್ತು 2015ನೇ ಸಾಲಿನ ದೃಶ್ಯ ಭೂಷಣ ಪ್ರಶಸ್ತಿ ಪ್ರದಾನ, ಕಲಾವಿದ ದಿ.ಶಾಂತಲಿಂಗಪ್ಪ ಪಾಟೀಲ ನಿಂಬಾಳ ಕೃತಿಗಳ ಪ್ರದರ್ಶನ ಹಾಗೂ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಪ್ರತಿ ವ್ಯಕ್ತಿಯ ಅಂತರಾಳದಲ್ಲಿ ಕವಿ, ಕಲಾವಿದ ಇದ್ದೇ ಇರುತ್ತಾನೆ. ಬದುಕಿನ ಸೂಕ್ಷ್ಮತೆಗಳನ್ನು ಕವಿ ಅವಲೋಕಿಸಿ ಹಿಡಿದಿಡುತ್ತಾನೆ. ಕಲಾವಿದ ಕುಂಚದ ಸಹಾಯದಿಂದ ಕಲಾಕೃತಿಯನ್ನು ಬಿಡಿಸಿ ತೋರಿಸುತ್ತಾನೆ. ಮನಸ್ಸು ಧ್ಯಾನಸ್ಥ ಸ್ಥಿತಿಗೆ ಹೋಗದ ಹೊರತು ಕವಿ, ಕಲಾವಿದನಾ ಗಿರಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಆದಿವಾಸಿ, ಬುಡಕಟ್ಟು ಹಾಗೂ ಅಲೆಮಾರಿ ಸಮುದಾಯಗಳು ತಮ್ಮ ಗುಡಿಸಲುಗಳನ್ನು ಕಟ್ಟುವ ಕ್ರಮದಲ್ಲಿ, ಗ್ರಾಮೀಣರು ರಂಗೋಲಿ ಬಿಡಿಸುವ ಕ್ರಮದಲ್ಲಿ ಕಲೆಯ ಮೂಲ ಬೇರುಗಳು ಅಡಗಿವೆ ಎಂದು ಹೇಳಿದರು.

ಉಪನ್ಯಾಸಕ ಚಂದ್ರಹಾಸ ಜಾಲಿ ಹಾಳ ಅವರು ‘ಭಾವಚಿತ್ರ ಪರಂಪರೆ’ ಕುರಿತು, ಉಪನ್ಯಾಸಕ ಶಶಿಕಾಂತ ಮಾಶಾ ಳಕರ ಅವರು ‘ಡ್ರಾಯಿಂಗ್’ ಕುರಿತು ಮಾತನಾಡಿದರು. ಚಿತ್ರ ಕಲಾವಿದ ಬಸವ ರಾಜ ಉಪ್ಪಿನ ಅಧ್ಯಕ್ಷತೆ ವಹಿಸಿದ್ದರು. ಎಚ್.ವಿ.ಮಂತಟ್ಟಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.