ADVERTISEMENT

ಚಿಂಚೋಳಿ: ವಾರಕ್ಕೊಮ್ಮೆ ಜನಸಂಪರ್ಕ ಸಭೆ

ಸಂಸದೀಯ ಕಾರ್ಯದರ್ಶಿ ಡಾ. ಉಮೇಶ ಜಾಧವ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2017, 11:39 IST
Last Updated 14 ಜನವರಿ 2017, 11:39 IST
ಚಿಂಚೋಳಿ: ಸರ್ಕಾರದ ಯೋಜನೆ ಗಳನ್ನು ಜನ ಸಾಮಾನ್ಯರಿಗೆ ತಲುಪಿಸಲು ಅಧಿಕಾರಿಗಳನ್ನೂ ಹಳ್ಳಿಗಳಿಗೆ ಕರೆದೊ ಯ್ಯಲು ಗ್ರಾಪಂ ಮಟ್ಟದಲ್ಲಿ ವಾರ ಕ್ಕೊಮ್ಮೆ ಜನ ಸಂಪರ್ಕ ಸಭೆ ನಡೆಸ ಲಾಗುತ್ತಿದೆ ಎಂದು ಸಂಸದೀಯ ಕಾರ್ಯ ದರ್ಶಿ ಡಾ. ಉಮೇಶ ಜಾಧವ್‌ ತಿಳಿಸಿದರು.
 
ತಾಲ್ಲೂಕಿನ ಚಂದನಕೇರಾ ಗ್ರಾಮ ಪಂಚಾಯಿತಿಯ ಆವರಣದಲ್ಲಿ ಶುಕ್ರ ವಾರ ಹಮ್ಮಿಕೊಂಡ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.
 
ಈಗಾಗಲೇ ರುಮ್ಮನಗೂಡ ಗ್ರಾಮ ದಲ್ಲಿ ಇಂತಹ ಸಭೆ ನಡೆಸಲಾಗಿದ್ದು ನಂತರ ಚೇಂಗಟಾದಲ್ಲಿ ಜನಸಂಪರ್ಕ ಸಭೆ ನಡೆಸಿ ನೂರಾರು ಜನರ ಸಮಸ್ಯೆ ಗಳಿಗೆ ಪರಿಹಾರ ಕಲ್ಪಿಸಲಾಗಿದೆ. ಹೀಗಾಗಿ ಇಂದು ಚಂದನಕೇರಾದಲ್ಲಿ ಸಭೆ ನಡೆಸುತ್ತಿದ್ದೇವೆ.
 
ಅಧಿಕಾರಿಗಳನ್ನು ಹಳ್ಳಿಗಳಿಗೆ ಕರೆದೊ ಯ್ಯುವುದರಿಂದ ಆಡ ಳಿತವೇ ಹಳ್ಳಿಯಲ್ಲಿ ಸೇರಿರುತ್ತದೆ. ಯಾವುದೇ ಇಲಾಖೆ ಯಿಂದ ಆಗಬೇಕಾದ ಕೆಲಸ ಕಾರ್ಯ ಬೇಗ ಮಾಡಿಕೊಡಲು ಸಹಕಾರಿ ಯಾಗು ತ್ತದೆ ಎಂದು ಅವರು ತಿಳಿಸಿದರು.
 
ಪ್ರತಿ ಶನಿವಾರ ಇಲ್ಲವೇ ವಾರ ಕ್ಕೊಂದು ಜನರ ಕುಂದು ಕೊರತೆ ಆಲಿ ಸುವ ಸಭೆ ನಡೆಸಲಾಗುತ್ತಿದೆ ಎಂದರು.
 
ಸಭೆಯಲ್ಲಿ ಸಾಮಾಜಿಕ ಭದ್ರತಾ ಯೋಜನೆಯ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನ, ಆರೋಗ್ಯ ಸಮಸ್ಯೆ, ಉಚಿತ ಚಿಕಿತ್ಸೆ ವ್ಯವಸ್ಥೆ, ಹಿರಿಯ ನಾಗರಿಕರಿಗೆ ರಿಯಾಯಿತಿ ಬಸ್‌ ಪಾಸ್‌, ವಿಕಲ ಚೇತನರಿಗೆ ಬಸ್‌ ಪಾಸ್‌, ಪಹಣಿ ತಿದ್ದುಪಡಿ, ಜಮೀನಿನ ಹಕ್ಕು ವರ್ಗಾ ವಣೆ, ಮನೆಗಳ ಹಕ್ಕು ವರ್ಗಾವಣೆ, ಅವಿವಾಹಿತ ಮಹಿಳೆಯರಿಗೆ ಮೈತ್ರೇಯಿ ಯೋಜನೆ ಅಡಿಯಲ್ಲಿ ಮಾಸಾಶನ ಹಾಗೂ ಪಡಿತರ ಚೀಟಿಯ ಸಮಸ್ಯೆ ಪರಿಹರಿಸಲಾಗುವುದು ಎಂದರು.
 
ಪಡಿತರ ಚೀಟಿ ಸಮಸ್ಯೆ ಪರಿಹಾರಕ್ಕೆ ನವಿಕರಣಗೊಳ್ಳದ ಹಾಗೂ ರದ್ದಾಗಿರುವ ಪಡಿತರ ಚೀಟಿಗಳಿಗೆ ಪುನರ್‌ ಜನ್ಮ ನೀಡಲು ಸೂಚಿಸಲಾಗಿದೆ. ಆಹಾರ ಇಲಾಖೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಪಡಿತರ ಚೀಟಿ ಸಮಸ್ಯೆಗಳಿಗೆ ಪರಿಹಾರ ನೀಡಲಿದ್ದಾರೆ ಎಂದರು. 
 
ಕಂದಾಯ, ಶಿಕ್ಷಣ, ಕೃಷಿ, ತೋಟ ಗಾರಿಕೆ, ಶಿಶು ಅಭಿವೃದ್ಧಿ, ಜೆಸ್ಕಾಂ, ಪಂಚಾಯತ ರಾಜ್‌, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಪಶು ಪಾಲನಾ ಇಲಾಖೆ, ಸಣ್ಣ ನೀರಾ ವರಿ, ಆಹಾರ, ಭೂ ದಾಖಲೆ , ಗ್ರಾ.ಪಂ. ಮೊದಲಾದ ಇಲಾಖೆಗಳ ಅಧಿಕಾರಿಗಳು ನಿಮ್ಮ ಸಮಸ್ಯೆ ಆಲಿಸಿ ಪರಿಹಾರ ಕಲ್ಪಿಸಲಿದ್ದಾರೆ ಎಂದರು.
 
ತಾ.ಪಂ. ಅಧ್ಯಕ್ಷೆ ರೇಣುಕಾ ಅಶೋಕ ಚವ್ಹಾಣ, ಕೆ.ಎಂ. ಬಾರಿ, ತಹಶೀಲ್ದಾರ ಪ್ರಕಾಶ ಕುದರಿ, ಕುಪೇಂದ್ರರಾವ್‌ ಫತೆಪುರ, ಶರಣಗೌಡ ಪಾಟೀಲ, ದತ್ತಾತ್ರೆಯ ರಾಯಗೋಳ್‌, ಬಾಬು ಭೂಂಯಾರ್‌, ತಾ.ಪಂ. ಸದಸ್ಯ ರಾಮ ರಾವ್‌ ರಾಠೋಡ್‌, ಗ್ರಾ.ಪಂ. ಉಪಾಧ್ಯಕ್ಷ ರೇವಣಸಿದ್ದಪ್ಪ ಚಂದನ ಇದ್ದರು. ಇಒ ಅನಿಲ ರಾಠೋಡ್‌ ಪ್ರಾಸ್ತಾವಿಕ ಮಾತ ನಾಡಿದರು. ಸಿದ್ದಮಲ್ಲಪ್ಪ ಸ್ವಾಗತಿಸಿದರು.  
 
ಸಭೆಯಲ್ಲಿ 160 ವೃದ್ಧಾಪ್ಯ, 28 ಅಂಗವಿಕಲ, 42 ಸಂಧ್ಯಾ ಸುರಕ್ಷಾ, 18 ವಿಧವೆ ವೇತನ ಮಂಜೂರು ಮಾಡಿದ್ದು, 14 ಮಂದಿಗೆ ವಯಸ್ಸಿನ ದೃಢಿಕರಣ ನೀಡಲಾಗಿದೆ. 132 ಪಡಿತರ ಚೀಟಿಗಳಿಗೆ ಆಧಾರ ಲಿಂಕ್‌ ಮಾಡಲಾಗಿದೆ. 
 
ಹೊಸ ಪಡಿತರ ಚೀಟಿಗಾಗಿ 70 ಜನ ಬೇಡಿಕೆ ಸಲ್ಲಿಸಿದ್ದಾರೆ. 150 ಜನ ಹಿರಿಯ ನಾಗರಿಕರಿಗೆ ಬಸ್‌ ಪಾಸ್‌ ವಿತರಿಸ ಲಾಗಿದೆ. 2 ಭಾಗ್ಯ ಲಕ್ಷ್ಮಿ ಬಾಂಡ್‌ ವಿತರಿಸಿ ದ್ದು ಎಚ್‌ಐವಿ ಪೀಡಿತರಿಗೆ ಸಾಲ ಸೌಲಭ್ಯ 
 
ಮಂಜೂರಿಗೆ ಅರ್ಜಿ ಸ್ವೀಕರಿಸ ಲಾಗಿದೆ. ಜತೆಗೆ ಜೆಸ್ಕಾಂ ವಿದ್ಯುತ್‌ ಕಂಬ ಸ್ಥಳಾಂತರ, ವಿದ್ಯುತ್‌ ಪರಿವರ್ತಕಕ್ಕೆ ತಂತಿ ಬೇಲಿ, ಕೊಟಗಾ ರಸ್ತೆ ಒತ್ತುವರಿ ತೆರವು, ಒಳಚರಂಡಿ ನಿರ್ಮಾಣ ರುಮ್ಮನಗೂಡ ಪ್ರೌಢ ಶಾಲೆಗೆ ಆವರಣ ಗೋಡೆ ಮತ್ತು ಚಂದನಕೇರಾ ಉರ್ದು ಶಾಲೆ ಉನ್ನತೀಕರಣದ ಬೇಡಿಕೆ ಸ್ವೀಕರಿಸ ಲಾಗಿದೆ ಎಂದು ಇಒ ಅನಿಲ ರಾಠೋಡ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.