ADVERTISEMENT

ದುಶ್ಚಟ ಮುಕ್ತ ಗ್ರಾಮ ನಿರ್ಮಾಣ ಅಗತ್ಯ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 8:44 IST
Last Updated 17 ನವೆಂಬರ್ 2017, 8:44 IST

ಆಳಂದ: ‘ಯುವಕರು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಸಮಾಜ ಸೇವೆ ಮಾಡುವ ಗುಣ ಬೆಳೆಸಿಕೊಳ್ಳಬೇಕು. ದುಶ್ಚಟಮುಕ್ತ ಗ್ರಾಮ ನಿರ್ಮಾಣದಿಂದ ಮಾತ್ರ ಪ್ರಗತಿ ಸಾಧ್ಯ’ ಎಂದು ಶಾಸಕ ಬಿ.ಆರ್.ಪಾಟೀಲ ನುಡಿದರು.

ತಾಲ್ಲೂಕಿನ ಬಬಲೇಶ್ವರ ಗ್ರಾಮದಲ್ಲಿ ಈಚೆಗೆ ಭಗತ ಸಿಂಗ್ ಯುವಕ ಸಂಘದಿಂದ ಹಮ್ಮಿಕೊಂಡ ‘ಕನ್ನಡ ರಾಜ್ಯೋತ್ಸವ, ಕನಕದಾಸ ಮತ್ತು ಟಿಪ್ಪುಸುಲ್ತಾನ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮ ದೇಶವು ವೈವಿಧ್ಯಮಯ ಧರ್ಮ, ಸಂಸ್ಕೃತಿ ಹಾಗೂ ಆಚರಣೆಗಳಿಂದ ಕೂಡಿದೆ. ಬುದ್ಧ, ಬಸವಣ್ಣ, ಕನಕದಾಸರು, ಮಹಾತ್ಮ ಗಾಂಧೀಜಿ, ಡಾ.ಅಂಬೇಡ್ಕರ್ ಮತ್ತಿತರ ಸುಧಾರಕರ ವಿಚಾರಗಳನ್ನು ಆಚರಣೆಗೆ ತರುವುದು ಮುಖ್ಯವಾಗಿದೆ’ ಎಂದು ಹೇಳಿದರು.

ADVERTISEMENT

ಮುಖ್ಯಗುರು ದತ್ತಪ್ಪ ಪೂಜಾರಿ ಮಾತನಾಡಿ, ‘ಭಗತ್ ಸಿಂಗ್ ಸಂಘದಿಂದ ಗ್ರಾಮದ ಯುವಕರು ವಿಶಿಷ್ಟ ಜಯಂತಿ ಆಚರಣೆ ಕೈಗೊಂಡಿದ್ದು ಶ್ಲಾಘನೀಯ. ಇದರಿಂದ ಗ್ರಾಮದಲ್ಲಿ ಸಾಮರಸ್ಯ, ಸಹಕಾರ ರೂಪುಗೊಳ್ಳಲು ಸಾಧ್ಯ’ ಎಂದು ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಶಿವಪ್ಪ ವಾರಿಕ, ಪುರಸಭೆ ಮಾಜಿ ಅಧ್ಯಕ್ಷ ವಿಠಲರಾವ ಪಾಟೀಲ, ಮುಖಂಡರಾದ ಸುಭಾಷ ಚಿಚಕೋಟೆ, ಭೀಮರಾವ ಡಗೆ,ಸಂಜು ಕೊಬ್ರೆ, ಸಿದ್ದಪ್ಪ ಪಾಟೀಲ, ಮಲ್ಲಿನಾಥ ಪಾಟೀಲ, ಕರಬಸಪ್ಪ ಪಾಟೀಲ, ಬಾಬುರಾವ ಸೂರವಾಸೆ, ಮಹ್ಮದ ಶೇಖ, ಸಂಘದ ಅಧ್ಯಕ್ಷ ಮಲ್ಲಿನಾಥ ಅಪಚಂದೆ, ಅವಿನಾಶ ಕಾಂಬಳೆ, ಗೌತಮ ಕಾಂಬಳೆ, ಶ್ರೀಕಾಂತ ಖಂಡಗಾಳೆ ಇದ್ದರು.

ರಿಜ್ವಾನ್ ಶೇಖ ನಿರೂಪಿಸಿದರು. ರಾಜಕುಮಾರ ಘೋಡಕೆ ಸ್ವಾಗತಿಸಿದರು. ಮಂಜುನಾಥ ಘೋಡಕೆ ವಂದಿಸಿದರು. ಇದೇ ಸಂದರ್ಭದಲ್ಲಿ ಕಳೆದ ಎಸ್ಸೆಸ್ಸೆಲ್ಸಿ, ಪಿಯು ದ್ವಿತೀಯ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಮಾಳಪ್ಪ ಪೂಜಾರಿ, ಕಾದಂಬರಿ, ಭಾಗ್ಯಶ್ರೀ ಅಪಚಂದೆ, ಶರಣಬಸಪ್ಪ ಪಾಟೀಲ, ಪ್ರೇಮಾ ಗೋದೆ ಅವರನ್ನು ಸನ್ಮಾನಿಸಲಾಯಿತು. ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಚಟುವಟಿಕೆ ಜರುಗಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.