ADVERTISEMENT

ಬಾಗವಾನ ಮನೆ ಮೇಲೆ 2ನೇ ದಿನವೂ ಮುಂದುವರಿದ ಐಟಿ ದಾಳಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2017, 6:43 IST
Last Updated 8 ಸೆಪ್ಟೆಂಬರ್ 2017, 6:43 IST
ಇಲಿಯಾಸ ಸೇಠ್‌ ಭಾಗವಾನ
ಇಲಿಯಾಸ ಸೇಠ್‌ ಭಾಗವಾನ   

ಕಲಬುರ್ಗಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಇಲಿಯಾಸ ಸೇಠ್‌ ಬಾಗವಾನ ಅವರ ಮನೆ ಹಾಗೂ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಗುರುವಾರವೂ ಪರಿಶೀಲನೆ ನಡೆಸಿದರು.

‘25 ಜನ ಅಧಿಕಾರಿಗಳ ತಂಡ ಇಲಿಯಾಸ ಅವರಿಗೆ ಸೇರಿದ ಶಾಲೆ–ಕಾಲೇಜು, ಪೆಟ್ರೋಲ್‌ ಬಂಕ್‌, ಕಚೇರಿ, ಶೀತಲೀಕರಣ ಘಟಕಗಳಲ್ಲಿ ಪರಿಶೀಲನೆ ನಡೆಸಿದರು’ ಎಂದು ಮೂಲಗಳು ತಿಳಿಸಿವೆ.

ಈ ಅಧಿಕಾರಿಗಳು ಬುಧವಾರ ಬೆಳಿಗ್ಗೆಯಿಂದ ತಡ ರಾತ್ರಿಯ ವರೆಗೂ ಪರಿಶೀಲನೆ ನಡೆಸಿದ್ದರು. ದೊರೆತ ಆಸ್ತಿ ಪಾಸ್ತಿಯ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.