ADVERTISEMENT

ವಿವಿಧ ಬೇಡಿಕೆ: ಮೂರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2016, 10:15 IST
Last Updated 29 ಜೂನ್ 2016, 10:15 IST

ಕಲಬುರ್ಗಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಿವಿಧ ಸಂಘಟ ನೆಗಳ ಸದಸ್ಯರು ನಗರದ ಜಿಲ್ಲಾಧಿಕಾರಿ ಕಚೇರಿ ಹಾಗೂ ಜಗತ್ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ಮಾಡಿದರು.

ಕಾರ್ಮಿಕರ ಮೇಲೆ ದಬ್ಬಾಳಿಕೆ– ಖಂಡನೆ: ಕಾರ್ಮಿಕ ಸಂಘಟನೆಗಳ ಮೇಲೆ ನಡೆಸು ತ್ತಿರುವ ದಬ್ಬಾಳಿಕೆ ಖಂಡಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಜಿಲ್ಲಾ ಸಮಿತಿ ಕಾರ್ಯ ಕರ್ತರು ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

2ನೇ ಬಾರಿಗೆ ಅಧಿಕಾರಕ್ಕೆ ಬಂದ ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ಅವರು ಅಲ್ಲಿಯ ಕಾರ್ಮಿಕ ಸಂಘಟನೆಗಳು ಮತ್ತು ಅವುಗಳ ನಾಯಕರು ಮತ್ತು ಕಾರ್ಯಕರ್ತರ ಮೇಲೆ ದಬ್ಬಾಳಿಕೆ, ದಾಳಿ, ದೌರ್ಜನ್ಯ ನಡೆಸುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೆಟ್ಟು ಬಿದ್ದಿದ್ದು, ಮಮತಾ ಬ್ಯಾನರ್ಜಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಕಳೆದ ಚುನಾವಣೆ ಯಲ್ಲಿ ವಿರೋಧ ಪಕ್ಷಗಳಿಗೆ ಬೆಂಬಲ ನೀಡಿದ ಕಾರಣ ಸಂಘ–ಸಂಸ್ಥೆಗಳ ಮೇಲೆ ತೀವ್ರ ಹಲ್ಲೆ ನಡೆಸಲಾ ಗುತ್ತಿದೆ. ಎಡಪಂಥೀಯ ಸಂಘ–ಸಂಸ್ಥೆಗಳ ಕಚೇರಿ ಧ್ವಂಸಗೊಳಿಸಲಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ದೇಶದಾ ದ್ಯಂತ ಉಗ್ರ ಹೋರಾಟ ಮಾಡಲಾಗು ವುದು ಎಂದು ಎಚ್ಚರಿಕೆ ನೀಡಿದರು. ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಅಯ್ಯಪ್ಪ, ಪ್ರಧಾನ ಕಾರ್ಯದರ್ಶಿ ಎಂ. ಬಿ.ಸಜ್ಜನ್, ಖಜಾಂಚಿ ನಾಗಯ್ಯ ಸ್ವಾಮಿ, ಸದಸ್ಯ ರಾಮು ರಾಠೋಡ ಇದ್ದರು.ದರಪಟ್ಟಿ

ಪ್ರದರ್ಶನಕ್ಕೆ ಆಗ್ರಹ: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆ ಗಳ ಕಾಯ್ದೆ (ಕೆಪಿಎಂಇ)ಯಡಿ ನೋಂದ ಣಿಯಾದ ಎಲ್ಲ ಖಾಸಗಿ ಆಸ್ಪತ್ರೆಗಳ ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ದರಪಟ್ಟಿ ಪ್ರದರ್ಶಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ದಲಿತ ಮತ್ತು ಮೈನಾರಿಟೀಸ್ ಕ್ರಿಯಾ ಸಮಿತಿ ಸದಸ್ಯರು ಪ್ರತಿಭಟನೆ ಮಾಡಿದರು.

ಪರಿಶಿಷ್ಟ ಜಾತಿ ಜನಾಂಗದವರಿಗೆ ಅವಮಾನ ಮಾಡಿರುವ ಕರ್ನಾಟಕ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ ಕಾರ್ಯನಿರ್ವಾಹಕ ಎಂಜಿನಿಯರ್ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಬಡೇಪುರ ಲೇಔಟ್‌ನಲ್ಲಿ ವಾಸಿಸುತ್ತಿರುವ 52 ಮನೆಗಳ ಕುಟುಂಬಗಳಿಗೆ ಮನೆ ಹಕ್ಕು ಪ್ರಮಾಣ ಪತ್ರ ನೀಡಬೇಕು. ಪಾಲಿಕೆ ವತಿಯಿಂದ ಶೇ 24.10 ಯೋಜನೆಯಡಿ ವೈದ್ಯಕೀಯ ಬಿಲ್ ಮರುಪಾವತಿಸಬೇಕು ಎಂದರು. ಗುಲಾಮ್ ರಸೂಲ್, ಅರುಣ್ ಗಾಜರೆ, ಜಫರ್ ಪಟೇಲ್, ಬಲಭೀಮಪ್ಪ ದೊಡ್ಡ ಮನಿ, ರಾಜಕುಮಾರ ನಾಡಗೇರಿ, ರಾಜು ಸರಡಗಿ ಇದ್ದರು.

ಕೂಲಿ ಪಾವತಿಗೆ ಒತ್ತಾಯ: ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡಿರುವ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಕೂಲಿ ಜಮಾಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಸಮಿತಿ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.

ಚಿತ್ತಾಪುರ ತಾಲ್ಲೂಕಿನ ಭಂಕೂರ, ಮುಗಳಾನಾಗಾಂವ್, ಕಾಳಗಿ, ಗೋಟೂರ, ಕೊಡದೂರ, ಚಿಂಚೋಳಿ (ಎಸ್‌), ಟೆಂಗಳಿ, ರಾಜಾಪುರ, ನಾಲವಾರ, ಕಡಬೂರ ಮತ್ತು ಸೇಡಂ ತಾಲ್ಲೂಕಿನ ನೀಲಹಳ್ಳಿ, ಮಳಖೇಡ ಗ್ರಾಮ ಪಂಚಾಯಿತಿಗಳಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದಿದ್ದು, ಕೂಡಲೇ ಸರಿಪಡಿಸಲು ಒತ್ತಾಯಿಸಿದರು.
ಅಶೋಕ ಮ್ಯಾಗೇರಿ, ಜಗದೇವಿ ನಂದೂರ, ಬಾಬು ಕಂಬಾರ, ರವಿಸ್ವಾಮಿ, ದೇವಾ ಗುಂಡಮಿ, ಮಲ್ಲಮ್ಮ ಸೂಗೂರ, ಸಾಬಮ್ಮ ಕೊಂಕನಳ್ಳಿ, ಮಲ್ಲು ಮಳಖೇಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.