ADVERTISEMENT

ವಿಷ್ಣು ಸಹಸ್ರನಾಮ ಪಾರಾಯಣ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2017, 9:21 IST
Last Updated 13 ಫೆಬ್ರುವರಿ 2017, 9:21 IST
ಜೇವರ್ಗಿಯ ಬಸವೇಶ್ವರ ನಗರದ ರಾಯರಮಠದಲ್ಲಿ ಹಂಸನಾಮ ಪಾರಾಯಣ ಸಮಿತಿ ವತಿಯಿಂದ ಶನಿವಾರ ಪಾರಾಯಣ ಪಠಣ ನಡೆಯಿತು
ಜೇವರ್ಗಿಯ ಬಸವೇಶ್ವರ ನಗರದ ರಾಯರಮಠದಲ್ಲಿ ಹಂಸನಾಮ ಪಾರಾಯಣ ಸಮಿತಿ ವತಿಯಿಂದ ಶನಿವಾರ ಪಾರಾಯಣ ಪಠಣ ನಡೆಯಿತು   

ಜೇವರ್ಗಿ: ಪಟ್ಟಣದ ಬಸವೇಶ್ವರ ನಗರದಲ್ಲಿರುವ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಶನಿವಾರ ವಿಷ್ಣು ಸಹಸ್ರನಾಮ ಪಾರಾಯಣ ಪಠಣ ಕಾರ್ಯಕ್ರಮ ಜರುಗಿತು. ಕಲಬುರ್ಗಿಯ ಹಂಸನಾಮ ಪಾರಾಯಣ ಸಮಿತಿ, ಲಕ್ಷ್ಮಿ ನಾರಾಯಣ ಪಾರಾಯಣ ಸಮಿತಿ ಸಹಯೋಗದಲ್ಲಿ ಗುರುರಾಯರ ಮಠದಲ್ಲಿ ಪಠಣ ನಡೆಯಿತು.

ತಾಲ್ಲೂಕಿನ ರಾಸಣಗಿಯ ಬಲ ಭೀಮಸೇನ್ ದೇವಸ್ಥಾನ, ನೆಲೋಗಿಯ ಹನುಮಾನ ದೇವಸ್ಥಾನ, ಕಾಸರಭೋಸ ಗಾದ ಹನುಮಾನ ದೇವಸ್ಥಾನ, ದುಮ್ಮ ದ್ರಿಯ ವರಹಳ್ಳೇ ರಾಯ ದೇವಸ್ಥಾನ ಸೇರಿದಂತೆ ಐದು ಪ್ರಮುಖ ಕ್ಷೇತ್ರಗಳಲ್ಲಿ ಪಾರಾಯಣ ಪಠಣ ನಡೆಯಿತು.

ಪಟ್ಟಣದ ರಾಯರ ಮಠದಲ್ಲಿ ವಿಷ್ಣು ಸಹಸ್ರನಾಮ, ವೆಂಕಟೇಶ್ವರ ಸ್ತೋತ್ರ, ವಾಯುಸ್ತುತಿ, ರಾಯರ ಅಷ್ಟೋತ್ತರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ನಡೆಸಲಾಯಿತು. ರಾಯರ ಮಠದಲ್ಲಿ ಕಲ್ಯಾಣರಾವ್ ಕುಲಕರ್ಣಿ ಕಣಮೇಶ್ವರ ಅವರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿಸಿದರು.

ಕಲಬುರ್ಗಿ ಹಂಸನಾಮ ಪಾರಾಯಣ ಸಮಿತಿ ಅಧ್ಯಕ್ಷ ಪದ್ಮನಾಭಾಚಾರ್ಯ ಜೋಶಿ, ಲಕ್ಷ್ಮಿ ನಾರಾಯಣ ಪಾರಾಯಣ ಸಮಿತಿ ಅಧ್ಯಕ್ಷ ರವೀಂದ್ರ ಲಾತುರಕರ್, ರಾಯರ ಮಠದ ಟ್ರಸ್ಟ್ ಕಮೀಟಿ ಅಧ್ಯಕ್ಷ ರಮೇಶಬಾಬು ವಕೀಲ, ಕಾರ್ಯದರ್ಶಿ ಶಾಮರಾವ್ ರೇವನೂರ್, ಶೇಷಾ ಚಾರ್ಯ ಜೋಶಿ, ಪತ್ರಕರ್ತ ಶೇಷ ಮೂರ್ತಿ ಅವಧಾನಿ, ದತ್ತಾತ್ರಯರಾವ್ ಕುಲಕರ್ಣಿ ಕೋಳಕೂರ, ಲಕ್ಷ್ಮಣರಾವ್ ಆಲಬಾಳ, ಅಪ್ಪಣ್ಣಗೌಡ ಕೂಟನೂರ್, ಪಾಂಡುರಂಗ ಅವರಾದ್, ಸುಧೀಂದ್ರ ವಕೀಲ, ದತ್ತಾತ್ರಯರಾವ್ ರೇವನೂರ್, ಯಾದವೇಂದ್ರ ಜೋಶಿ, ರಮೇಶ ಮಠ, ವಿಪ್ರರು, ಮಹಿಳೆಯರು ಪಾರಾಯಣ ದಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.