ADVERTISEMENT

ವೃದ್ಧಾಶ್ರಮಗಳ ಹೆಚ್ಚಳ: ಕಳವಳ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 6:51 IST
Last Updated 16 ಫೆಬ್ರುವರಿ 2017, 6:51 IST
ಚಿಂಚೋಳಿ: ಸಮಾಜದಲ್ಲಿ ವೃದ್ಧಾಶ್ರಮ ಗಳು ಹೆಚ್ಚಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಇದು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಗೆ ಮಾರಕವಾಗಿದೆ ಎಂದು ಭಾರತ ಸ್ವಾಭಿಮಾನ ಟ್ರಸ್ಟ್‌ನ ಜಿಲ್ಲಾ ಪ್ರಭಾರಿ ಶಿವಾನಂದ ಸಾಲಿಮಠ ತಿಳಿಸಿದರು.
 
ಇಲ್ಲಿನ ಚಂದಾಪುರದಲ್ಲಿರುವ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಆವರಣ ದಲ್ಲಿ ಪತಂಜಲಿ ಯೋಗ ಸಮಿತಿ ಬುಧ ವಾರ ಹಮ್ಮಿಕೊಂಡಿದ್ದ ಉಚಿತ ಯೋಗ ಮತ್ತು ಪ್ರಾಣಾಯಾಮ ತರಬೇತಿ ಶಿಬಿ ರದ ಸಮಾರೋಪದಲ್ಲಿ ಮಾತನಾಡಿದರು.
 
ಪಾಶ್ಚಾತ್ಯ ಸಂಸ್ಕೃತಿಯ ಪರಿಣಾಮ ವಾಗಿ ಮಾನವೀಯ ಸಂಬಂಧಗಳು ಹಾಗೂ ಮೌಲ್ಯಗಳಿಂದ ದೂರಾಗುತ್ತಿ ದ್ದೇವೆ. ಐದು ಸಾವಿರ ವರ್ಷಗಳ ಚರಿತ್ರೆ ಹೊಂದಿರುವ ಭಾರತೀಯ ಸಂಸ್ಕೃತಿಕ ಪರಂಪರೆ ಮತ್ತೆ ಅತ್ಯುನ್ನತ ಸ್ಥಿತಿ ತಲುಪಲು ಪ್ರತಿಯೊಬ್ಬರು ಯೋಗ ಮತ್ತು ಪ್ರಾಣಾಯಾಮದ ಮೊರೆ ಹೋಗಬೇಕು ಎಂದರು.
 
ತಹಶೀಲ್ದಾರ್ ಪ್ರಕಾಶ ಕುದರಿ ಮಾತನಾಡಿ, ಅಜ್ಞಾನದಿಂದ ದುಶ್ಚಟಗಳ ದಾಸರಾಗುತ್ತಿರುವ ಯುವಜನ ತಮ್ಮ ಅಮೂಲ್ಯ ಜೀವನ ಹಾಳು ಮಾಡಿಕೊ ಳ್ಳುತ್ತಿದ್ದಾರೆ. ಯೋಗ ಮತ್ತು ಪ್ರಾಣಾ ಯಾಮ ಸ್ವಸ್ಥ ಸಮಾಜ ನಿರ್ಮಾಣಕ್ಕೆ ವರದಾನವಾಗಿದ್ದು, ವ್ಯಕ್ತಿಗತ ಆರೋ ಗ್ಯದ ಜತೆಗೆ ಸಾಮಾಜಿಕ ಆರೋಗ್ಯ ಕಾಪಾಡಲು ಯೋಗ ಪೂರಕ ಎಂದರು.
 
ಡಿವೈಎಸ್‌ಪಿ ಯು.ಶರಣಪ್ಪ, ಸಹಾ ಯಕ ಸರ್ಕಾರಿ ಅಭಿಯೋಜಕ ರವಿಕುಮಾರ ಬಾಚೆಹಾಳ, ರಮೇಶ ಮಹೇಂದ್ರಕರ್‌, ಮಚ್ಛೇಂದ್ರನಾಥ ಮೂಲಗೆ, ಯೋಗ ಪ್ರಶಿಕ್ಷಣಾರ್ಥಿ ಗೌರಿಶಂಕರ ಉಪ್ಪಿನ ಅವರು ಮಾತನಾಡಿದರು. 
 
ತಾಲ್ಲೂಕು ಸಮಿತಿಯ ಪ್ರಭಾರಿಗ ಳಾದ ಶ್ರೀನಿವಾಸ ಪಾಟೀಲ, ಡಾ.ಪ್ರಕಾಶ ಗೌನಳ್ಳಿ, ಚಂದ್ರಶೇಖರ ಪಲ್ಲೇದ, ಭಾಸ್ಕರ್‌ ಕುಲಕರ್ಣಿ, ರೇವಣಸಿದ್ದ ಮೋಘಾ ಇದ್ದರು. ನಾಗಪ್ಪ ಮೈಲ್ವಾರ್‌ ನಿರೂಪಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.