ADVERTISEMENT

ಸಾರಿಗೆ ಸಂಸ್ಥೆಯ ಬಸ್‌ನಲ್ಲೆ ಹೆರಿಗೆ; ಗಂಡು ಮಗುವಿಗೆ ಜನ್ಮವಿತ್ತ ತಾಯಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2017, 12:57 IST
Last Updated 16 ಸೆಪ್ಟೆಂಬರ್ 2017, 12:57 IST
ಸಾರಿಗೆ ಸಂಸ್ಥೆಯ ಬಸ್‌ನಲ್ಲೆ ಹೆರಿಗೆ; ಗಂಡು ಮಗುವಿಗೆ ಜನ್ಮವಿತ್ತ ತಾಯಿ
ಸಾರಿಗೆ ಸಂಸ್ಥೆಯ ಬಸ್‌ನಲ್ಲೆ ಹೆರಿಗೆ; ಗಂಡು ಮಗುವಿಗೆ ಜನ್ಮವಿತ್ತ ತಾಯಿ   

ಕಲಬುರ್ಗಿ: ಕಲಬುರ್ಗಿಯಿಂದ ಸೇಡಂಗೆ ತೆರಳುತ್ತಿದ್ದ ಎನ್‌ಇಕೆಆರ್‌ಟಿಸಿ ಬಸ್‌ನಲ್ಲೇ ಗರ್ಭಿಣಿಯೊಬ್ಬರು ಶನಿವಾರ ಗಂಡು ಮಗುವಿಗೆ ಜನ್ಮ ನೀಡಿದರು.

ಚಿಂಚೋಳಿ ತಾಲ್ಲೂಕು ಛತ್ರಸಾಲ ಗ್ರಾಮದ ಜ್ಯೋತಿ ಮಗುವಿಗೆ ಜನ್ಮ ನೀಡಿದವರು. ವಿಷಯ ಅರಿತ ಬಸ್ ಚಾಲಕ ಶಿವಾಜಿ ಹಾಗೂ ನಿರ್ವಾಹಕ ಪ್ರಶಾಂತ್ ಅವರು ಬಸ್‌ಅನ್ನು ನೇರವಾಗಿ ಆಸ್ಪತ್ರೆಯತ್ತ ಚಲಾಯಿಸಿದರು.

ತಾಯಿ, ಮಗು ಸುರಕ್ಷಿತವಾಗಿದ್ದಾರೆ. ಶಿವಾಜಿ ಹಾಗೂ ಪ್ರಶಾಂತ್ ಅವರ ಮಾನವೀಯತೆಗೆ ಪ್ರಯಾಣಿಕರು ಪ್ರಶಂಸೆ ವ್ಯಕ್ತಪಡಿಸಿದರು.

ADVERTISEMENT

‘ಕಲಬುರ್ಗಿಯಲ್ಲಿದ್ದ ಜ್ಯೋತಿ ಅವರು ಹೆರಿಗೆಗಾಗಿ ಸೇಡಂ ತಾಲ್ಲೂಕಿನ ತಾಂಡೂರಕ್ಕೆ ತೆರಳುತ್ತಿದ್ದರು. ಬಸ್‌ನಲ್ಲೇ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅಲ್ಲಿಯೇ ಮಗುವಿನ ಜನ್ಮ ನೀಡಿದರು’ ಎಂದು ಸಹ ಪ್ರಯಾಣಿಕರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.