ADVERTISEMENT

ಸ್ನಾತಕೋತ್ತರ ಕೋರ್ಸ್‌ ಪ್ರವೇಶ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2017, 6:57 IST
Last Updated 11 ಜುಲೈ 2017, 6:57 IST

ಕಲಬುರ್ಗಿ: ಇಲ್ಲಿಯ ಗುಲಬರ್ಗಾ ವಿಶ್ವ ವಿದ್ಯಾಲಯದ ವಿವಿಧ ಸ್ನಾತಕೋತ್ತರ ಕೋರ್ಸ್‌ಗಳ 2017-18ನೇ ಶೈಕ್ಷಣಿಕ ಸಾಲಿನ ಪ್ರವೇಶಕ್ಕೆ ಪ್ರವೇಶ ಪರೀಕ್ಷೆ (ಸಿಇಇ-2017) ಜುಲೈ 11 ರಿಂದ 18 ರವರೆಗೆ ವಿಶ್ವವಿದ್ಯಾಲಯದ ಜ್ಞಾನಗಂಗಾ ಆವರಣದಲ್ಲಿ ಜರುಗಲಿದೆ ಎಂದು ಕುಲಸಚಿವರು ತಿಳಿಸಿದ್ದಾರೆ.

ವಿಶ್ವವಿದ್ಯಾಲಯದ ವಿವಿಧ ಸ್ನಾತಕೋತ್ತರ ಅಧ್ಯಯನ ವಿಭಾಗಗಳು, ಬೀದರ್‌ ಮತ್ತು ರಾಯಚೂರು ಸ್ನಾತಕೋತ್ತರ ಕೇಂದ್ರಗಳು, ಸಂಲಗ್ನತೆ ಹೊಂದಿರುವ ವಿವಿಧ ಸರ್ಕಾರಿ ಮತ್ತು ಖಾಸಗಿ ಮಹಾವಿದ್ಯಾಲಯಗಳಲ್ಲಿನ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕೆ 10,200 ಅಭ್ಯರ್ಥಿಗಳು ಪ್ರವೇಶ ಪರೀಕ್ಷೆ ಬರೆಯಲಿದ್ದಾರೆ.

ಈ ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸಲು ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿಶ್ವವಿದ್ಯಾಲಯದ ಜ್ಞಾನಗಂಗಾ ಆವರಣದಲ್ಲಿ ಒಟ್ಟು 14 ವಿವಿಧ ಅಧ್ಯಯನ ವಿಭಾಗಗಳ/ ಶಾಖೆಗಳ ಕಟ್ಟಡಗಳನ್ನು ಪ್ರವೇಶ ಪರೀಕ್ಷೆಗಾಗಿ ಸಜ್ಜುಗೊಳಿಸಲಾಗಿದೆ. ಒಟ್ಟು 200 ಜನ ಸಿಬ್ಬಂದಿಯನ್ನು  ನಿಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಅಭ್ಯರ್ಥಿಗಳ  ಅನುಕೂಲಕ್ಕಾಗಿ ಜ್ಞಾನಗಂಗಾ ಆವರಣದ ಬಸ್‌ನಿಲುಗಡೆ ಸ್ಥಳದಲ್ಲಿ ಸಹಾಯ ಕೇಂದ್ರ ಸ್ಥಾಪಿಸಲಾಗಿದೆ. ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯಲ್ಲಿ 30 ನಿಮಿಷ ಮೊದಲು ಹಾಜರಿರಬೇಕು ಎಂದು ಅವರು ಹೇಳಿದ್ದಾರೆ.

ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳು ಯಾವುದೇ ರೀತಿಯ ವಿದ್ಯುನ್ಮಾನ ಉಪಕರಣ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ತಪ್ಪಿದಲ್ಲಿ ಅಂತಹ ಅಭ್ಯರ್ಥಿಯನ್ನು ತಕ್ಷಣವೇ ಪ್ರವೇಶ ಪರೀಕ್ಷೆಯಿಂದ ‘ಡಿಬಾರ್’ ಮಾಡಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು www.gug.ac.in ಸಂಪರ್ಕಿಸಬಹುದು. ಪರೀಕ್ಷೆ ನಡೆಯುವ ದಿನಾಂಕ ಮತ್ತು ವಿಷಯಗಳ ವಿವರ (ಅವಧಿ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1, ಮಧ್ಯಾಹ್ನ 3ರಿಂದ ಸಂಜೆ 5.30):

ಜುಲೈ 11: ಬೆಳಿಗ್ಗೆ ಭೌತವಿಜ್ಞಾನ, ಪ್ರಾಣಿವಿಜ್ಞಾನ. ಮಧ್ಯಾಹ್ನ ಗಣಿತ, ಸಸ್ಯವಿಜ್ಞಾನ, ಅರ್ಥಶಾಸ್ತ್ರ.
ಜುಲೈ 12: ಬೆಳಿಗ್ಗೆ ರಸಾಯನವಿಜ್ಞಾನ, ಸಮಾಜವಿಜ್ಞಾನ. ಮಧ್ಯಾಹ್ನ ಕಂಪ್ಯೂಟರ್ ಸೈನ್ಸ್, ಸೂಕ್ಷ್ಮಜೀವ ವಿಜ್ಞಾನ, ಇತಿಹಾಸ.
ಜುಲೈ 13: ಬೆಳಿಗ್ಗೆ ರಾಜ್ಯಶಾಸ್ತ್ರ, ಜೀವರಸಾಯನವಿಜ್ಞಾನ, ಮಧ್ಯಾಹ್ನ ಜೈವಿಕ ತಂತ್ರಜ್ಞಾನ, ಅನ್ವಯಿಕ ವಿದ್ಯುದ್ವಿಜ್ಞಾನ, ವಾಣಿಜ್ಯಶಾಸ್ತ್ರ.
ಜುಲೈ 14: ಬೆಳಿಗ್ಗೆ ಸಮಾಜಕಾರ್ಯ ಮತ್ತು ಮಧ್ಯಾಹ್ನ ಮಹಿಳಾ ಅಧ್ಯಯನ.
ಜುಲೈ 15: ಬೆಳಿಗ್ಗೆ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ. ಮಧ್ಯಾಹ್ನ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ.
ಜುಲೈ 16: ಬೆಳಿಗ್ಗೆ ಇಂಗ್ಲಿಷ್‌ ಮಧ್ಯಾಹ್ನ ಕನ್ನಡ, ಕನ್ನಡ ಮತ್ತು ಜಾನಪದ, ಕನ್ನಡ ಶರಣಸಾಹಿತ್ಯ.
ಜುಲೈ 17: ಬೆಳಿಗ್ಗೆ ಶಿಕ್ಷಣ (ಎಂ.ಇಡಿ) ಮತ್ತು ಮಧ್ಯಾಹ್ನ ದೈಹಿಕ ಶಿಕ್ಷಣ (ಎಂಪಿ.ಇಡ್).
ಜುಲೈ 18: ಬೆಳಿಗ್ಗೆ ಹಿಂದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.