ADVERTISEMENT

ಎಸ್‌ಪಿ, ಇನ್‌ಸ್ಪೆಕ್ಟರ್‌ಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2017, 7:30 IST
Last Updated 12 ಸೆಪ್ಟೆಂಬರ್ 2017, 7:30 IST
ಎಂ.ಕೆ. ಗಣಪತಿ
ಎಂ.ಕೆ. ಗಣಪತಿ   

ಮಡಿಕೇರಿ: ಡಿವೈಎಸ್‌ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸುಪ್ರೀಂ ಕೋರ್ಟ್‌ ಸಿಬಿಐ ತನಿಖೆಗೆ ಆದೇಶಿಸಿರುವ ಬೆನ್ನಲೇ ನ್ಯಾಯಾಂಗ ತನಿಖೆ ಕಳೆದ ವರ್ಷ ಜುಲೈ 7ರಂದು ಮಡಿಕೇರಿಯ ವಿನಾಯಕ ಲಾಡ್ಜ್‌ನಲ್ಲಿ ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಸಚಿವ ಕೆ.ಜೆ. ಜಾರ್ಜ್‌ ಸೇರಿದಂತೆ ಇಬ್ಬರು ಹಿರಿಯ ಐಪಿಎಸ್‌ ಅಧಿಕಾರಿಗಳ ವಿರುದ್ಧ ಆರೋಪ ಮಾಡಿದರು.

ಸರ್ಕಾರ ಬಳಿಕ ಸಿಐಡಿ ತನಿಖೆಗೆ ವಹಿಸಿತ್ತು. ಸಿಐಡಿ ತಂಡವು ದೋಷಮುಕ್ತಗೊಳಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ. ಸಿಬಿಐ ತನಿಖೆಗೆ ರಾಜ್ಯದಾದ್ಯಂತ ಆಗ್ರಹಗಳು ಕೇಳಿಬಂದ ಹಿನ್ನೆಲೆಯಲ್ಲಿ ಸರ್ಕಾರ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಆಯೋಗ ರಚಿಸಿತ್ತು. ನಿವೃತ್ತ ನ್ಯಾಯಮೂರ್ತಿ ಕೇಶವ ನಾರಾಯಣ ಅವರ ನೇತೃತ್ವದಲ್ಲಿ ಇದುವರೆಗೂ ಹಲವರ ವಿಚಾರಣೆ ನಡೆಸಿದ್ದು, ಈಗ ಎಸ್‌ಪಿ, ಇನ್‌ಸ್ಪೆಕ್ಟರ್‌ ಐ.ಪಿ. ಮೇದಪ್ಪ ಅವರಿಗೆ ಇದೇ 25ರ ಒಳಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿದೆ.

ಅಷ್ಟುಮಾತ್ರವಲ್ಲದೇ ವಸತಿಗೃಹದ ಸಿಬ್ಬಂದಿ, ಸಾವಿನ ಸುಳಿವು ನೀಡಿದವರು, ಶವವನ್ನು ಮೊದಲು ಸುಳಿವು ನೀಡಿದವರು, ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ಸ್ಥಳ ಮಹಜರು ಹಾಗೂ ಪಂಚನಾಮೆ ಸಾಕ್ಷಿಗಳಿಗೂ ಆಯೋಗ ನೋಟಿಸ್‌ ಜಾರಿಗೊಳಿಸಲಾಗಿದೆ.

ADVERTISEMENT

ಈಗಾಗಲೇ ಸಂದರ್ಶನ ನಡೆಸಿದ ಪತ್ರಕರ್ತರು, ಕ್ಯಾಮೆರಾಮನ್‌ಗಳೂ ಆಯೋಗದ ಎದುರು ಹಾಜರಾಗಿ ವಿಚಾರಣೆಗೆ ಒಳಗಾಗಿದ್ದಾರೆ. ‘ನಿಯಮದಂತೆ ನೋಟಿಸ್‌ ಜಾರಿಯಾಗಿದ್ದು, ತಮಗೆ ಲಭಿಸಿರುವ ಮಾಹಿತಿಯನ್ನು ಆಯೋಗಕ್ಕೆ ತಿಳಿಸುತ್ತೇನೆ’ ಎಂದು ರಾಜೇಂದ್ರ ಪ್ರಸಾದ್‌ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.