ADVERTISEMENT

ಕಾರಂಜಿ ಉದ್ಯಾನಕ್ಕೆ ಭೂಮಿಪೂಜೆ

₹ 2.40 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2017, 10:16 IST
Last Updated 6 ಮಾರ್ಚ್ 2017, 10:16 IST
ಕಾರಂಜಿ ಉದ್ಯಾನಕ್ಕೆ ಭೂಮಿಪೂಜೆ
ಕಾರಂಜಿ ಉದ್ಯಾನಕ್ಕೆ ಭೂಮಿಪೂಜೆ   
ಕುಶಾಲನಗರ: ಹಾರಂಗಿ ಜಲಾಶಯದ ಮುಂಭಾಗದ ಉದ್ಯಾನದಲ್ಲಿ ₹ 2.40 ಕೋಟಿ  ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿ ಸಿರುವ ಕಾರಂಜಿ ಉದ್ಯಾನ  ಕಾಮಗಾ ರಿಗೆ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ಭೂಮಿಪೂಜೆ ನೆರವೇರಿಸಿದರು.
 
ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಸಚಿವ ಎಂ.ಆರ್. ಸೀತಾರಾಂ, ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ವಿಶೇಷ ಒತ್ತು ನೀಡಿದೆ. ಈ ಹಿಂದೆ ₹ 4.5 ಕೋಟಿ ವೆಚ್ಚದಲ್ಲಿ ಹಾರಂಗಿಯಲ್ಲಿ ಕೆ.ಆರ್‌. ಎಸ್‌ನ ಬೃಂದಾವನ ಮಾದರಿಯಲ್ಲಿ ಸುಂದರ ಉದ್ಯಾನವನ್ನು ನಿರ್ಮಿಸಲಾ ಗಿತ್ತು. ಅದೇ ರೀತಿ ಈ ಉದ್ಯಾನವನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸರ್ಕಾರ ಕಾರಂಜಿ ಉದ್ಯಾನ ನಿರ್ಮಾ ಣಕ್ಕಾಗಿ ₹ 2.4 ಕೋಟಿ ಹೆಚ್ಚುವರಿ ಅನುದಾನವನ್ನು ಒದಗಿಸಿದೆ ಎಂದರು. 
 
ಹಾರಂಗಿ ಜಲಾಶಯ ವ್ಯಾಪ್ತಿಯಲ್ಲಿ ನಡೆಯುವ ವಿವಿಧ ಕಾಮಗಾರಿಗಳ ಗುಣಮಟ್ಟದ ಕುರಿತು ಗ್ರಾಮಸ್ಥರು ನಿಗಾವಹಿಸಬೇಕು. ಕಳಪೆ ಕಾಮಗಾರಿ ಕಂಡುಬಂದಲ್ಲಿ ಕೂಡಲೇ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸಚಿವರು ಹೇಳಿದರು.
 
ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ಹಾರಂಗಿ ಜಲಾಶಯದ ಮುಂಭಾಗದಲ್ಲಿ ಉದ್ಯಾನ ನಿರ್ಮಾಣ ಮಾಡಬೇಕು ಎಂಬ ಬಹುದಿನಗಳ ಬೇಡಿಕೆಯನ್ನು ಹಿಂದಿನ ಬಿಜೆಪಿ ಸರ್ಕಾರ ಈಡೇರಿಸಿತ್ತು. ಈಗ ರಾಜ್ಯ ಸರ್ಕಾ ಕಾರಂಜಿ ಉದ್ಯಾನಕ್ಕೆ ವಿಶೇಷ ಅನು ದಾನ ಒದಗಿಸಿ ಮತ್ತಷ್ಟು ಮೆರಗು ನೀಡು ತ್ತಿರುವುದು ಸಂತಸ ತಂದಿದೆ ಎಂದರು.
 
ರಸ್ತೆ ಅಭಿವೃದ್ಧಿಗೆ ಚಾಲನೆ :  ತೀರಾ ಹದಗೆಟ್ಟಿದ್ದ ಹಾರಂಗಿ- ಯಡವನಾಡು ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ₹ 1.40 ಕೋಟಿ ಅನುದಾನ ಬಿಡುಗಡೆ ಗೊಂಡಿದ್ದು,  ಕಾಮಗಾರಿಗೆ ಸಚಿವ ಸೀತಾರಾಂ ಇದೇ ಸಂದರ್ಭ ಚಾಲನೆ ನೀಡಿದರು.
 
ಜಿ.ಪಂ. ಸದಸ್ಯೆ ಕೆ.ಆರ್.ಮಂಜುಳಾ, ತಾ.ಪಂ.ಉಪಾಧ್ಯಕ್ಷ ಅಭಿಮಾನ್ಯು ಕುಮಾರ್, ಸದಸ್ಯ ಡಿ.ಎಸ್.ಗಣೇಶ್, ಬಸವನಹಳ್ಳಿ ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ಎಸ್.ಎನ್.ರಾಜಾರಾವ್, ಗ್ರಾ.ಪಂ. ಸದಸ್ಯರಾದ ಎಂ.ಎಸ್.ಶಿವಾನಂದ, ಸಾವಿತ್ರಿ, ನೀರಾವರಿ ಇಲಾಖೆ ಕಾರ್ಯ ಪಾಲಕ ಎಂಜಿನಿಯರ್ ರಂಗನಾಥ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಧರ್ಮರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.