ADVERTISEMENT

ಚೇಂದಂಡ ತಂಡಕ್ಕೆ ಚಾಂಪಿಯನ್‌ ಪಟ್ಟ

l ಕೊಡವ ಕುಟುಂಬಗಳ ಹಾಕಿ ಉತ್ಸವ l ಪರದಂಡ ತಂಡದ ವಿರುದ್ಧ 4–1 ಗೋಲುಗಳ ಭಾರಿ ಗೆಲುವು

​ಪ್ರಜಾವಾಣಿ ವಾರ್ತೆ
Published 15 ಮೇ 2017, 7:26 IST
Last Updated 15 ಮೇ 2017, 7:26 IST
ಚೇಂದಂಡ ತಂಡಕ್ಕೆ ಚಾಂಪಿಯನ್‌ ಪಟ್ಟ
ಚೇಂದಂಡ ತಂಡಕ್ಕೆ ಚಾಂಪಿಯನ್‌ ಪಟ್ಟ   
ನಾಪೋಕ್ಲು: ಚೇಂದಂಡ ತಂಡದವರು ಇಲ್ಲಿ ನಡೆದ ಕೊಡವ ಕುಟುಂಬಗಳ ನಡುವಣ 21ನೇ ವರ್ಷದ ಬಿದ್ದಾಟಂಡ ಕಪ್‌ ಹಾಕಿ ಟೂರ್ನಿಯಲ್ಲಿ ಚಾಂಪಿಯನ್‌ ಆದರು.
 
ಇಲ್ಲಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ  ಫೈನಲ್‌ ಪಂದ್ಯದಲ್ಲಿ ಚೇಂದಂಡ ತಂಡದವರು 4–1  ಗೋಲುಗಳಿಂದ ಪರದಂಡ ತಂಡವನ್ನು ಸೋಲಿಸಿ ಈ ಸಾಧನೆ ಮಾಡಿದರು.
 
ಮಧ್ಯಾಹ್ನ 12.10ಕ್ಕೆ ಪಂದ್ಯ ಆರಂಭ ಗೊಂಡಿತು.  ಆರಂಭದಿಂದಲೇ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಉಭಯ ತಂಡಗಳು ಬಿರುಸಿನ ಆಟದಲ್ಲಿ ತೊಡಗಿದವು. 
 
ಚೇಂದಂಡ ತಂಡದ ಆಟಗಾರ ಒಲಿಂಪಿಯನ್‌ ನಿಕಿನ್ ತಿಮ್ಮಯ್ಯ ಎರಡು ಗೋಲು ಗಳಿಸಿ ಮಿಂಚಿದರು. ಪರದಂಡ ತಂಡದ ಪ್ರಯತ್ನ ಹಾಗೂ ಪ್ರತಿರೋಧ ಪ್ರಯೊಜನಕಾರಿಯಾಗದೇ ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
 
ಬಿದ್ದಾಟಂಡ ಕಪ್ ಹಾಕಿ ಉತ್ಸವ ದಲ್ಲಿ  301 ತಂಡಗಳು ಪಾಲ್ಗೊಂಡಿ ದ್ದವು. ಅದರಲ್ಲಿ ಚೇರಂಡ ತಂಡವು 21ನೇ ಕೊಡವ ಹಾಕಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.
 
ಫೈನಲ್ ಪಂದ್ಯದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿದ್ದಾಟಂಡ ಕುಟುಂ ಬದ ಪಟ್ಟೇದಾರ ಪ್ರೊ.ಬಿದ್ದಾಟಂಡ ಸಿ.ಪೊನ್ನಪ್ಪ ವಹಿಸಿದ್ದರು. ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಎಂ.ಕುಟ್ಟಪ್ಪ ಉಪಸ್ಥಿತರಿದ್ದರು. ಫೈನಲ್ ಪಂದ್ಯವನ್ನು ಲೆಫ್ಟಿನೆಂಟ್ ಕರ್ನಲ್ ಬಿ.ಕೆ.ಸುಬ್ರಮಣಿ ಉದ್ಘಾಟಿಸಿದರು.
 
ಸಚಿವ ಎಂ.ಆರ್.ಸೀತಾರಾಂ, ರಾಜ್ಯಸಭಾ ಸದಸ್ಯ ಬಿ.ಕೆ.ಹರಿ ಪ್ರಸಾದ್, ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ವಿಧಾನ ಪರಿಷತ್‌ ಸದಸ್ಯರಾದ ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ, ಕಾಂಗ್ರೆಸ್‌ ಮುಖಂಡ ವಿ.ಆರ್. ಸುದ ರ್ಶನ್, ಜಿಲ್ಲಾಧಿಕಾರಿ ಡಾ. ವಿನ್ಸೆಂಟ್ ಡಿಸೋಜ, ಜಿಲ್ಲಾ ಪೊಲೀಸ್‌ ವರಿಷ್ಠಾಧಿ ಕಾರಿ ರಾಜೇಂದ್ರ ಪ್ರಸಾದ್,  ಹಾಕಿ ಕೂರ್ಗ್‌ ಸಂಸ್ಥೆಯ ಅಧ್ಯಕ್ಷ ಪೈಕೇರ ಕಾಳಪ್ಪ, ಚೇರಂಡ ಕಿಶನ್, ಪಳಂಗಂಡ ಪೊನ್ನಪ್ಪ ಪಾಲ್ಗೊಂಡಿದ್ದರು.
 
ಸಮಾರೋಪ ಸಮಾರಂಭದಲ್ಲಿ  ನಿನಾದ ಸಂಸ್ಥೆಯ ಕಲಾವಿದರು ಸ್ವಾಗತ ನೃತ್ಯ ಪ್ರದರ್ಶಿಸಿದರು. ಮೈಸೂರಿನ ಇಂಗ್ಲೀಷ್  ಬ್ಯಾಂಡ್ ತಂಡದಿಂದ ಆಕರ್ಷಕ ಕಾರ್ಯಕ್ರಮ ಗಮನ ಸೆಳೆಯಿತು. 
 
ಕುಲ್ಲೇಟಿರ ಕುಟುಂಬಸ್ಥರಿಗೆ ಪಾಂಡಂಡ ಎಂ.ಕುಟ್ಟಪ್ಪ 2018ರ ಸಾಲಿನ ಹಾಕಿ ಉತ್ಸವದ ನೇತೃತ್ವವನ್ನು ಧ್ವಜ ಹಸ್ತಾಂತರಿಸುವ ಮೂಲಕ ವಹಿಸಿಕೊಟ್ಟರು. 
ಫೈನಲ್ ಪಂದ್ಯದ ಬಳಿಕ ಬಿಟ್ಟಂ ಗಾಲದ ಯುವಕ ಸಂಘದ ವತಿಯಿಂದ ಬೈಕ್ ಸ್ಟಂಟ್ ಕಾರ್ಯಕ್ರಮ  ಮನರಂಜಿಸಿತು.  

ವಿವಿಧೆಡೆಯಿಂದ ಬಂದಿದ್ದ ಸುಮಾರು 20 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಜನರಲ್‌ ತಿಮ್ಮಯ್ಯ ಕ್ರೀಡಾಂ ಗಣದ ಗ್ಯಾಲರಿಯಲ್ಲಿ ಪಂದ್ಯ ವಿಕ್ಷಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.