ADVERTISEMENT

ಬೇಸಿಗೆ ರಜೆ: ಗರಿಗೆದರಿದ ಕ್ರೀಡಾ ತರಬೇತಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2017, 6:41 IST
Last Updated 13 ಏಪ್ರಿಲ್ 2017, 6:41 IST

ನಾಪೋಕ್ಲು: ಜಿಲ್ಲೆಯಲ್ಲಿ ಹಾಕಿ ಕ್ರೀಡೆಯ ಉತ್ಸಾಹ ಗರಿಗೆದರುತ್ತಿದೆ. ರಜಾ ಅವಧಿ ಯಲ್ಲಿ ಇಲ್ಲಿನ ಕ್ರೀಡಾಂಗಣಗಳಲ್ಲಿ ಹಾಕಿ ಉತ್ಸವದ ರಂಗೇರಲಿದೆ.
ಬಿದ್ದಾಟಂಡ ಕುಟುಂಬಸ್ಥರ ಹಾಕಿ ಉತ್ಸವಕ್ಕೆ ನಾಡು ಸಜ್ಜಾಗುತ್ತಿದೆ. ಇದ ರೊಂದಿಗೆ ಶಾಲಾ ಚಟುವಟಿಕೆಗಳಿಗೆ ವಿರಾಮ ನೀಡಿರುವ ಮಕ್ಕಳಿಗೂ ಬೇಸಿಗೆ ರಜಾ ಅವಧಿಯ ಕ್ರೀಡಾ ತರಬೇತಿಯನ್ನು ನೀಡಲಾಗುತ್ತಿದೆ.

ಅದರಲ್ಲೂ ಹಾಕಿ ಕ್ರೀಡೆಗೆ ಹೆಚ್ಚಿನ ಆದ್ಯತೆ. ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಜನರಲ್‌ ತಿಮ್ಮಯ್ಯ ಕ್ರೀಡಾಂ ಗಣದಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕ್ರೀಡಾ ಅಕಾಡೆಮಿ ತರಬೇತಿಯನ್ನು ನೀಡಲಿದೆ.ಸಮೀಪದ ಮೂರ್ನಾಡು ವಿದ್ಯಾ ಸಂಸ್ಥೆಯ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡೆ ಮತ್ತು ಆಟೋಟ ಅಕಾಡೆಮಿ ಬೇಸಿಗೆ ಕ್ರೀಡಾ ಶಿಬಿರವನ್ನು ಕೈಗೊಂಡು ಮಕ್ಕಳಿಗೆ ಹಾಕಿ ತರಬೇತಿ ನೀಡುತ್ತಿದೆ.

ಕಕ್ಕಬ್ಬೆಯ ಸ್ಟೆಪ್ಸ್ ಸಂಸ್ಥೆಯು ಏರ್ಪ ಡಿಸಲಿರುವ ಹಾಕಿ ಉಚಿತ ತರಬೇತಿ ಶಿಬಿರದಲ್ಲಿ ಗ್ರಾಮೀಣ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಕ್ರೀಡೆ ಮಾನಸಿಕ, ಭೌತಿಕವಾಗಿ ಸದೃಢವಾಗಲು ಸಹಕಾರಿ. ಶಿಬಿರಗಳು ಸ್ಪರ್ಧಾ ಮನೋಭಾವದ ಜೊತೆಗೆ ಶಿಸ್ತಿ ನಿಂದ ಮಕ್ಕಳ ಉನ್ನತಿಗೆ ದಾರಿದೀಪ ವಾಗಲಿದೆ ಎಂಬುದು ಪೋಷಕರ ಅಭಿಪ್ರಾಯ.

ADVERTISEMENT

ರಜೆಯಲ್ಲಿ ಸಮಯದ ಸದುಪ ಯೋಗ, ಗ್ರಾಮೀಣ ಮಕ್ಕಳು ಹಾಕಿ ಕ್ರೀಡೆ  ಅವಕಾಶದಿಂದ ವಂಚಿತರಾಗ ಬಾರದು ಎಂದು ಮಕ್ಕಳ ಸಮಯ ಮತ್ತು ಆರೋಗ್ಯ ನಿರ್ವಹಣೆಗೆ ಶಿಬಿರ ಆರಂಭಿಸಲಾಗಿದೆ.ಇದರಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ಕ್ರಿಯಾಶೀಲ ಗುಣವನ್ನು ಹುಟ್ಟು ಹಾಕಲು ಸಾಧ್ಯವಿದೆ ಎಂಬುದು ಸ್ಟೆಪ್ಸ್‌ ಸಂಸ್ಥೆಯ ಸಂಚಾಲಕ ಬೊಳಿ ಯಾಡಿರ ಸಂತು ಸುಬ್ರಮಣಿ ಅವರ ಅಭಿಪ್ರಾಯ.

ಮೂರ್ನಾಡು ವಿದ್ಯಾಸಂಸ್ಥೆಯ ಜನ ರಲ್ ಕೆ.ಎಸ್.ತಿಮ್ಮಯ್ಯ ಕ್ರೀಡೆ ಮತ್ತು ಆಟೋಟ ಅಕಾಡೆಮಿಯ ಶಿಬಿರದಲ್ಲಿ ಹಾಕಿ ಅಟದ ಜೊತೆಗೆ ಕ್ರಿಕೆಟ್ ಹಾಗೂ ಅಥ್ಲೆಟಿಕ್ಸ್‌ನಲ್ಲೂ ತರಬೇತಿ ನೀಡ ಲಾಗುತ್ತಿದೆ.ಪ್ರತಿ ವರ್ಷ ಅಧಿಕ ಸಂಖ್ಯೆಯ ಮಕ್ಕಳು ವಿವಿಧ ಅಕಾಡೆಮಿಗಳ ತರಬೇತಿ ಶಿಬಿರಗಳಲ್ಲಿ ಪಾಲ್ಗೊಂಡು ಹಾಕಿ ಕ್ರೀಡಾ ಪಟುಗಳಾಗಿ ಹೊರ ಹೊಮ್ಮುತ್ತಿರು ವುದು ಹೆಮ್ಮೆಯ ವಿಷಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.