ADVERTISEMENT

‘ಮಾವನ ಹೋರಾಟಕ್ಕೆ ಬೆಂಬಲವಾಗಿ ನಿಲ್ಲುವೆ’

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2017, 6:26 IST
Last Updated 6 ಸೆಪ್ಟೆಂಬರ್ 2017, 6:26 IST
ಮೃತ ಡಿವೈಎಸ್‌ಪಿ ಎಂ.ಕೆ. ಗಣಪತಿ
ಮೃತ ಡಿವೈಎಸ್‌ಪಿ ಎಂ.ಕೆ. ಗಣಪತಿ   

ಮಡಿಕೇರಿ: ‘ಕುಟುಂಬದವರ ಹೋರಾಟಕ್ಕೆ ಅರ್ಧ ನ್ಯಾಯ ಸಿಕ್ಕಂತಾಗಿದೆ. ಗಣಪತಿ ಸಾವಿಗೂ ಮೊದಲು ಮಾಡಿದ್ದ ಆರೋಪಗಳೆಲ್ಲಾ ಸತ್ಯವಾಗಿದ್ದವು. ಅದಕ್ಕೆ ನ್ಯಾಯ ಸಿಗಬೇಕು ಎಂಬುದಷ್ಟೇ ನಮ್ಮ ಬೇಡಿಕೆಯಾಗಿತ್ತು’ –ಹೀಗೆ ಪ್ರತಿಕ್ರಿಯಿಸಿದವರು ಮೃತ, ಡಿವೈಎಸ್‌ಪಿ ಎಂ.ಕೆ.ಗಣಪತಿ ಪತ್ನಿ ಕೆ.ಕೆ.ಪಾವನಾ.

ಪ್ರಕರಣವನ್ನು ಸುಪ್ರೀಂ ಕೋರ್ಟ್‌ ಸಿಬಿಐಗೆ ವಹಿಸಿದ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ಯೊಂದಿಗೆ ಮಂಗಳವಾರ ಮಾತನಾಡಿದ ಅವರು, ‘ಪತಿ ಆತ್ಮಕ್ಕೆ ಶಾಂತಿ ಸಿಗಬೇಕೆಂದು ಆರಂಭದಿಂದಲೂ ಸಿಬಿಐ ತನಿಖೆಗೆ ಆಗ್ರಹಿಸಿದ್ದೆವು. ಆದರೆ, ಕೆಲವು ತಿಂಗಳ ಬಳಿಕ ಯಾರೂ ನಮ್ಮ ಬೆಂಬಲಕ್ಕೆ ನಿಲ್ಲಲಿಲ್ಲ; ಅರ್ಧದಲ್ಲಿಯೇ ಕೈಬಿಟ್ಟರು.

ಎಂ.ಕೆ.ಮಾಚಯ್ಯ (ಗಣಪತಿ ಸಹೋದರ) ಹಾಗೂ ಎಂ.ಕೆ.ಕುಶಾಲಪ್ಪ (ತಂದೆ) ಅವರ ಹೋರಾಟಕ್ಕೆ ನಾನೂ ಬೆಂಬಲವಾಗಿ ನಿಲ್ಲುತ್ತೇನೆ. ಕುಟುಂಬದ ಇತರೆ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಸಿಐಡಿ ತಂಡವು ದಾಖಲೆಗಳನ್ನು ಅಳಿಸಿ ಹಾಕಿತು ಎಂದು ಆರೋಪಿಸಲು ನಾನೇನು ತನಿಖಾ ಸಂಸ್ಥೆಯಲ್ಲ. ಸಾಕ್ಷ್ಯ ನಾಶದ ಬಗ್ಗೆಯೂ ಗೊತ್ತಿಲ್ಲ. ಗಣಪತಿ ಅವರು ಮನೆಗೆಂದೂ ಲ್ಯಾಪ್‌ಟಾಪ್‌ ತಂದವರಲ್ಲ. ಕಚೇರಿ ವಿಚಾರವಾಗಿಯೂ ಅಷ್ಟಾಗಿ ಚರ್ಚಿಸುತ್ತಿರಲಿಲ್ಲ. ಆದರೆ, ಕೆಲವರು ಕಿರುಕುಳ ನೀಡುತ್ತಿದ್ದರು ಎಂಬುದನ್ನು ಮಾತ್ರ ಪದೇ ಪದೇ ಪ್ರಸ್ತಾಪಿಸುತ್ತಿದ್ದರು. ಅದನ್ನೇ ಮಾಧ್ಯಮ ಮುಂದೆಯೂ ನುಡಿದಿದ್ದರು; ಅದಕ್ಕೆ ನ್ಯಾಯ ಸಿಗಬೇಕು’ ಎಂದು ಹೇಳಿದರು.

‘ಸಿಐಡಿ ತನಿಖೆ ವೇಳೆಯೇ ಸಾಕಷ್ಟು ತ್ಯಾಗ ಮಾಡಿದ್ದೇನೆ. ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆ ಆಗಿತ್ತು. ಅದೇ ಕಾರಣಕ್ಕೆ ಖಾಸಗಿ ದೂರಿನಿಂದ ಹಿಂದೆ ಸರಿದಿದ್ದೆವು’ ಎಂದು ಸ್ಪಷ್ಟಪಡಿಸಿದರು.

‘ಹದಿನೈದು ದಿನಗಳ ಹಿಂದೆಯಷ್ಟೇ ನನ್ನ ತಾಯಿ ನಿಧನರಾಗಿದ್ದು, ಒತ್ತಡದಲ್ಲಿರುವೆ. ಪ್ರಕರಣ ಸಂಬಂಧ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಪಾವನಾ ತಿಳಿಸಿದರು.
ಪ್ರಕರಣದಿಂದ ನೀವು ಹಿಂದೆ ಸರಿದ ಬಳಿಕ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವ ವಿಚಾರದಲ್ಲಿ ನಿಮ್ಮೊಂದಿಗೆ ಕುಟುಂಬಸ್ಥರು ಚರ್ಚಿಸಿದ್ದರೆ ಎಂಬ ಪ್ರಶ್ನೆಗೆ ಉತ್ತರಿಸಲಿಲ್ಲ.

‘ಅಣ್ಣನಿಗೆ ಯಾರು ಕಿರುಕುಳು ನೀಡಿದ್ದರು ಎಂಬುದರ ಬಗ್ಗೆ ಸರಿಯಾದ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಸಿಐಡಿ ಅಧಿಕಾರಿಗಳು ಆರೋಪಿಗಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ವರದಿ ಸಲ್ಲಿಸಿದ್ದರು. ಪೊಲೀಸ್‌ ಇಲಾಖೆಯಲ್ಲಿ ಸಾಕಷ್ಟು ಪ್ರಾಮಾಣಿಕ ಅಧಿಕಾರಿಗಳಿದ್ದು, ಅವರೂ ತೊಂದರೆಗೆ ಸಿಲುಕಿದ್ದಾರೆ. ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾದರೆ ಇತರರಿಗೂ ನ್ಯಾಯ ಸಿಕ್ಕಂತೆ. ಈಗ ಯಾರ ರಾಜೀನಾಮೆಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.