ADVERTISEMENT

ರಾಜಾಸೀಟ್‌ ಚಿತ್ರಕಲಾ ಪ್ರದರ್ಶನದ ಮೆರುಗು

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 6:03 IST
Last Updated 16 ಏಪ್ರಿಲ್ 2017, 6:03 IST

ಮಡಿಕೇರಿ: ವಿಶ್ವಕಲಾ ದಿನದ ಅಂಗವಾಗಿ ಜಿಲ್ಲಾ ಜಾನಪದ ಪರಿಷತ್ ಮತ್ತು ಮಡಿಕೇರಿ ತಾಲ್ಲೂಕು ಜಾನಪದ ಪರಿಷತ್ ಜಂಟಿಯಾಗಿ ಮಡಿಕೇರಿಯ ರಾಜಾಸೀಟ್‌ನಲ್ಲಿ ಕಲಾದಿನವನ್ನು ಗ್ರಾಮೀಣ ಜಾನಪದ ಸಾರುವ ಚಿತ್ರಕಲಾ ವೈಭವದ ದಿನವಾಗಿ ಆಚರಿಸಿತು.ವಿರಾಜಪೇಟೆಯ ಚಿತ್ರ ಕಲಾವಿದ ಬಿ.ಆರ್.ಸತೀಶ್ ಕುಂಚದಲ್ಲಿ ವೈವಿಧ್ಯಮಯ ಚಿತ್ರಗಳು ಅರಳುತ್ತಿದ್ದಂತೆಯೇ ವಿರಾಜಪೇಟೆಯ ಗಾಯಕ ಟಿ.ಡಿ.ಮೋಹನ್ ಗಾನ ಸುಧೆಯ ಮೂಲಕ ಚಿತ್ರಕ್ಕೆ ಮತ್ತಷ್ಟು ಮೆರುಗು ನೀಡಿದರು. ಚಿತ್ರಕ್ಕೆ ಬಣ್ಣ ತುಂಬುವ ಮೂಲಕ ಮಡಿಕೇರಿ ಎಪಿಎಂಸಿ ಅಧ್ಯಕ್ಷ ಕಾಂಗೀರ ಸತೀಶ್ ಉದ್ಘಾಟಿಸಿದರು.

ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ, ಮಡಿಕೇರಿ ತಾಲ್ಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ., ಜಿಲ್ಲಾ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್, ಖಚಾಂಚಿ ಎಸ್.ಎಸ್.ಸಂಪತ್ ಕುಮಾರ್ ಹಾಜರಿದ್ದರು.ವಿಶ್ವಕಲಾ ದಿನದ ಅಂಗವಾಗಿ ಆಯೋಜಿತ ಮಕ್ಕಳಿಗಾಗಿನ ಚಿತ್ರಕಲಾ ಪ್ರದರ್ಶನವನ್ನು ವಿರಾಜಪೇಟೆಯ ರಿಮಾ ಬ್ರಿಜೇಶ್ ಉದ್ಘಾಟಿಸಿದರು. ಜಿಲ್ಲೆಯ ವಿವಿಧ ಊರುಗಳಿಂದ 63 ವಿದ್ಯಾರ್ಥಿಗಳು ಚಿತ್ರಕಲೆಯನ್ನು ರೂಪಿಸಿದರು.

ಚಿತ್ರಕಲಾ ಸ್ಪರ್ಧೆ ವಿಜೇತರು:  3ರಿಂದ 5 ವರ್ಷದೊಳಗಿನ ಚಿತ್ರಕಲಾ ಸ್ಪರ್ದೆಯಲ್ಲಿ ಪ್ರಥಮ ಬಹುಮಾನವನ್ನು- ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ಎಂ.- ಶ್ರೀಯಾ ಕಿರಣ್, ಯೂರೋ ಕಿಡ್ಸ್ ಟಿ.ಜೆ. ಪ್ರಣೀತ್ (ದ್ವಿತೀಯ), -ಟಿ.ಜೆ.ಪ್ರಣವ್ (ತೃತೀಯ), ಬಾಲಕಿಯರ ಬಾಲಮಂದಿರದ ಭೂಮಿಕಾ (ಸಮಾಧಾನಕರ ಬಹುಮಾನ)  - 6ರಿಂದ 10 ವರ್ಷದೊಳಗಿನ ವಿಭಾಗದಲ್ಲಿ ಸೇಂಟ್‌ ಜೊಸೇಫರ ಕಾನ್ವೆಂಟ್ ಶಾಲೆಯ ಆರ್.ಸಾತ್ವಿಕ್ ಅಣ್ವೇಕರ್ (ಪ್ರಥಮ)-, ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ದುರ್ಗ ಪ್ರಸಾದ್ (ದ್ವಿತೀಯ),- ಸಂತ ಜೋಸೇಫರ ಕಾನ್ವೆಂಟ್ ಶಾಲೆಯ ದೀಪಿಕಾ ಎಚ್.ಅಣ್ವೇಕರ್ -(ತೃತೀಯ), -ಭಾರತೀಯ ವಿದ್ಯಾಭವನ ಶಾಲೆಯ ಎಂ.ಎನ್.ಶ್ರೇಯಾ (ಸಮಾಧಾನಕರ)11 ರಿಂದ 15 ವರ್ಷದೊಳಗಿನ ವಿಭಾಗದಲ್ಲಿ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ಪಿ.ಆರ್.ಆರ್ಯ (ಪ್ರಥಮ), ನವೋದಯ ವಿದ್ಯಾಲಯದ ಮೇಹ ಬಿ.ಎನ್.- (ದ್ವಿತೀಯ), ಸೇಂಟ್‌ ಮೈಕಲರ ಶಾಲೆಯ ದಿಲನ್ ಚಂಗಪ್ಪ- (ತೃತೀಯ), ಸಮಾಧಾನಕರ ಬಹುಮಾನವನ್ನು ಗೋಣಿಕೊಪ್ಪಲು ಲಯನ್ಸ್ ಸ್ಕೂಲ್ ಸಚಿತಾ ಬಿಪಿನ್ ಪಡೆದರು -

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.