ADVERTISEMENT

ವಿವಿಧೆಡೆ ಯೋಗ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2017, 8:51 IST
Last Updated 22 ಜೂನ್ 2017, 8:51 IST

ಸಿದ್ದಾಪುರ: ಚೆಟ್ಟಳ್ಳಿ ಹಾಗೂ ಸಿದ್ದಾಪುರದ ಪ್ರೌಢಶಾಲೆಗಳಲ್ಲಿ ವಿಶ್ವ ಯೋಗದಿನಾಚರಣೆಯನ್ನು ಬುಧವಾರ ಆಚರಿಸಲಾಯಿತು. ಚೆಟ್ಟಳ್ಳಿಯ ಪ್ರೌಢಶಾಲಾ ವಿಧ್ಯಾರ್ಥಿಗಳು ಸಿದ್ದಾಪುರ ರಸ್ತೆಯಲ್ಲಿ ಜಾಥಾ ಮುಖಾಂತರ ಅರಿವು ಮೂಡಿಸಿದರು.

ಸಂಚಾಲಕ ಮುಳ್ಳಂಡ ರತ್ತುಚಂಗಪ್ಪ, ಮುಖ್ಯೋಪಾಧ್ಯಾಯರಾದ ಶ್ರೀಮತಿ ತಿಲಕ್‌, ಕೊಡವ ಮಕ್ಕಡ ಕೂಟದ ಪ್ರಮುಖರಾದ ಪುತ್ತರಿರಕರುಣ್ ಕಾಳಯ್ಯ ಕಾರ್ಯಕ್ರವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳು ಸಾಮೂಹಿಕವಾಗಿ ಶ್ಲೋಕವನ್ನು ಹೇಳಿದರು. ದಿನದ ವಿಶೇಷತೆ ಬಗ್ಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಪೂಳಂಡ ಎಸ್‌. ಮಾಚಯ್ಯ ಮಾತನಾಡಿದರು.

ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು, ಶಿಕ್ಷಕರು, ಶಾಲಾ ಸಂಚಾಲಕರು ಯೋಗಾಸನಗಳನ್ನು ಮಾಡಿದರು. ಲೂಯಿಸ್, ಶಾಲಾ ಶಿಕ್ಷಕರು, ಸಿಬ್ಬಂದ, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಿದ್ದಾಪುರ ಪ್ರೌಡಶಾಲೆಯಲ್ಲಿ ಎನ್.ಸಿ.ಸಿ ಅಧಿಕಾರಿ ರಘುವೀರ್ ನಾಯಕ್ ನೇತೃತ್ವದಲ್ಲಿ ಯೋಗ ದಿನ ಆಚರಿಸಲಾಯಿತು.

ADVERTISEMENT

ಶಾಲಾ ಮುಖ್ಯೋಪಾಧ್ಯಾಯ ಬಾಬು ನಾಯಕ್, ದೈಹಿಕ ಶಿಕ್ಷಣ ಶಿಕ್ಷಕ ಅಶೋಕ್, ಶಿಕ್ಷಕರಾದ ರಾಜ್‌ಕುಮಾರ್ ಹಾಗೂ ಸುರೇಶ್ ವಿದ್ಯಾರ್ಥಿಗಳಿಗೆ ಯೋಗಾಸನದ ಕುರಿತು ಮಾಹಿತಿ ನೀಡಿದರು.

ಭಾರತೀಯರ ಕೊಡುಗೆ
ಸುಂಟಿಕೊಪ್ಪ: ಅಷ್ಟಾಂಗ ಯೋಗಾಭ್ಯಾಸಗಳನ್ನು ಕರಗತ ಮಾಡಿಕೊಂಡು ಸದೃಢ ಆರೋಗ್ಯವನ್ನು ಹೊಂದಿ ಎಂದು ಸುಂಟಿಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಸೋಮಚಂದ್ರ ಸಲಹೆ ನೀಡಿದರು.ವಿಶ್ವ ಯೋಗ ದಿನಾಚರಣೆ ಅಂಗವಾಗಿ ಬುಧವಾರ ಇಲ್ಲಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಅವರು ಮಾತನಾಡಿದರು.

ಭಾರತೀಯರು ವಿಶ್ವಕ್ಕೆ ನೀಡಿರುವ ಮಹಾನ್ ಕೊಡುಗೆ ಯೋಗವಿಜ್ಞಾನ ಎಂದು ಅವರು ಹೇಳಿದರು. ಉಪನ್ಯಾಸಕ ಈಶ ಮಾತನಾಡಿ, ಪ್ರತಿ ಹೋಬಳಿ ಘಟಕಗಳಲ್ಲೂ ಯೋಗ ತರಬೇತಿ ಕೇಂದ್ರ ಸ್ಥಾಪನೆ ಅವಶ್ಯ ಎಂದು ಹೇಳಿದರು. ಕಾಲೇಜಿನ ಉಪನ್ಯಾಸಕರಾದ  ಫಿಲಿಪ್ ವಾಸ್, ಕೆ.ಸಿ.ಕವಿತಾ, ಕವಿತಾ ಭಕ್ತ್, ಮಂಜುಳಾ, ದಮಯಂತಿ, ಸುಕನ್ಯಾ, ಚೈತ್ರಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.