ADVERTISEMENT

ಸಂಸ್ಕೃತಿ, ಪರಂಪರೆಯ ಅರಿವು ಮೂಡಿಸಿ

ಕೊಡವ ಮಕ್ಕಡ ಕೂಟದಿಂದ ಆಟ್‌ಪಾಟ್‌ ಪಡಿಪು ಶಿಬಿರ ಆರಂಭ

​ಪ್ರಜಾವಾಣಿ ವಾರ್ತೆ
Published 11 ಮೇ 2017, 8:56 IST
Last Updated 11 ಮೇ 2017, 8:56 IST
ನಾಪೋಕ್ಲು:  ಈಗಿನ ಮಕ್ಕಳಿಗೆ ಸಂಸ್ಕೃತಿ, ಪದ್ಧತಿ, ಪರಂಪರೆಗಳ ಬಗ್ಗೆ ತಿಳಿವಳಿಕೆ ಮೂಡಿಸಲು ಹಲವು ಸಂಘ ಸಂಸ್ಥೆಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಡಾ.ಚೌರೀರ ಜಗತ್ ತಿಮ್ಮಯ್ಯ ಹೇಳಿದರು.
 
ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಕೊಡವ ಮಕ್ಕಡ ಕೂಟದಿಂದ ಆಯೋ ಜಿಸಿದ ಆಟ್‌ಪಾಟ್ ಪಡಿಪು ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 
 
‘ಕೊಡವ ಸಂಸ್ಕೃತಿ, ಭಾಷೆ, ಆಚಾರ - ವಿಚಾರ ಉಳಿಯಬೇಕಿದ್ದರೆ ಮಕ್ಕಳಿಗೆ ಇದನ್ನು ಸಂಪೂರ್ಣವಾಗಿ ಕಲಿಸಿ ಕೊಡುವ ಅಗತ್ಯವಿದೆ. ಈ ಕೆಲಸವನ್ನು ಕೊಡವ ಮಕ್ಕಡ ಕೂಟವು ನಡೆಸುತ್ತಾ ಬಂದಿದೆ. ಇದಕ್ಕೆ ಜನಾಂಗದ ಸರ್ವ ಪೋಷಕರು ಸಹಕಾರ ನೀಡಬೇಕು’ ಎಂದರು. 
 
ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲರಾದ ಬಡ್ಡೀರ ನಳಿನಿ, ‘ಆಧುನಿಕ ಭರಾಟೆಯಲ್ಲಿ ನಮ್ಮ ಮಕ್ಕಳು ಕೊಡವ ಸಂಸ್ಕೃತಿಯನ್ನು ಮರೆಯಬಾ ರದು. ಕೊಡವ ಸಂಸ್ಕೃತಿಯ ಬಗ್ಗೆ ಎಲ್ಲಾ ಮಕ್ಕಳು ಸಂಪೂರ್ಣವಾಗಿ ತಿಳಿದಿರ ಬೇಕು. ತಾಯಿ ಭಾಷೆ, ತಾಯಿ ನೆಲ, ಸಂಸ್ಕೃತಿಯ ಬಗ್ಗೆ ಗೌರವ ಹೊಂದಿದ್ದರೆ ಮಾತ್ರ ಅದು ಸಮೃದ್ಧವಾಗಿ ಬೆಳೆಯಲು ಸಾಧ್ಯ’ ಎಂದರು.
 
ತರಬೇತುದಾರ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ‘ಆಧುನಿಕ ಸಂಸ್ಕೃ ತಿಗೆ ಹೆಚ್ಚಿನ ಒಲವು ತೋರುತ್ತಿರುವ ಯುವ ಜನತೆ ಪೋಷಕರಿಗೆ, ಹಿರಿಯರಿಗೆ ಗೌರವ ನೀಡುತ್ತಿರುವುದು ಕಡಿಮೆಯಾಗುತ್ತಿದೆ. ತಂದೆ ತಾಯಿಯನ್ನು ಪ್ರೀತಿಯಿಂದ ಸಲಹುವುದು, ಹಿರಿಯರಿಗೆ ಗೌರವ ನೀಡುವುದು ಕೊಡವ ಸಂಸ್ಕೃತಿಯ ಪ್ರತೀಕವಾಗಿದೆ. ಇದನ್ನು ಉಳಿಸಿ, ಬೆಳೆಸಬೇಕು’ ಎಂದು ತಿಳಿಸಿದರು.
 
ಅಧ್ಯಕ್ಷತೆ ವಹಿಸಿದ್ದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜ್ಜಿರ ಅಯ್ಯಪ್ಪ  ಪ್ರಾಸ್ತಾವಿಕವಾಗಿ ಮಾತನಾಡಿ, ‘ಮಕ್ಕಳಿಗೆ ಕೊಡವ ಸಂಸ್ಕೃತಿಯ ಅರಿವು ಮೂಡಿ ಸಲು ಈ ಕಾರ್ಯಕ್ರಮವನ್ನು  ಐದು ವರ್ಷಗಳಿಂದ ನಡೆಸಿಕೊಂಡು ಬರಲಾಗು ತ್ತಿದೆ. ಇದರೊಂದಿಗೆ ಮಕ್ಕಳ ನಮ್ಮೆ ಯನ್ನು ಆಚರಿಸಲಾಗುತ್ತಿದೆ.
 
ಮುಂದಿನ ದಿನಗಳಲ್ಲಿ ಮೂರು ತಿಂಗಳಿಗೊಮ್ಮೆ ಕೊಡವ ಪುಸ್ತಕವನ್ನು ಬಿಡುಗಡೆಗೊಳಿಸಿ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡಲಾಗು ವುದು’ ಎಂದರು. 
ತರಬೇತುದಾರರಾದ ಚೀಯಕ ಪೂವಂಡ ದೇವಯ್ಯ, ಕಂಗಾಂಡ ಜಾಲಿ ಪೂವಪ್ಪ ಇದ್ದರು. ಕೊಡವ ಮಕ್ಕಡ ಕೂಟದ ಸದಸ್ಯೆ ಬಾಳೆಯಡ ದಿವ್ಯಾ ಮಂದಪ್ಪ ನಿರೂಪಿಸಿದರು. ಈ ಸಂದರ್ಭ ದಲ್ಲಿ ಕೊಡವ ಮಕ್ಕಡ ಕೂಟದಿಂದ ಕೊಡವ ಪುಸ್ತಕ ಬಿಡುಗಡೆಗೊಳಿಸ ಲಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.