ADVERTISEMENT

12 ಕಾಲೇಜಿಗೆ ಶೇ 90ಕ್ಕೂ ಹೆಚ್ಚು ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 13 ಮೇ 2017, 10:42 IST
Last Updated 13 ಮೇ 2017, 10:42 IST
ಮಡಿಕೇರಿಯ ಸೇಂಟ್‌ ಮೈಕಲ್‌ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಫಲಿತಾಂಶ ವೀಕ್ಷಿಸಿದ ವಿದ್ಯಾರ್ಥಿಗಳ ಸಂಭ್ರಮ
ಮಡಿಕೇರಿಯ ಸೇಂಟ್‌ ಮೈಕಲ್‌ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಫಲಿತಾಂಶ ವೀಕ್ಷಿಸಿದ ವಿದ್ಯಾರ್ಥಿಗಳ ಸಂಭ್ರಮ   

ಮಡಿಕೇರಿ: ಜಿಲ್ಲೆಯಲ್ಲಿ ಒಟ್ಟು 58 ಪದವಿ ಪೂರ್ವ ಕಾಲೇಜುಗಳಿದ್ದು (ಸರ್ಕಾರಿ, ಅನುದಾನಿತ, ಅನುದಾನ ರಹಿತ) ಈ ಬಾರಿಯ ಪಿಯು ಫಲಿತಾಂಶದಲ್ಲಿ ಎರಡು ಕಾಲೇಜುಗಳು ಮಾತ್ರ ಶೇ 100 ಫಲಿತಾಂಶ ಪಡೆದಿವೆ. ಉಳಿದಂತೆ 12 ಕಾಲೇಜುಗಳು ಶೇ 90ಕ್ಕೂ ಹೆಚ್ಚು ಫಲಿತಾಂಶ ಲಭಿಸಿದೆ.

ಮಡಿಕೇರಿ ತಾಲ್ಲೂಕು ಚೆರಿಯಪ ರಂಬು ಮರ್ಕಜ್‌ ಪಿಯು ಕಾಲೇಜು ಹಾಗೂ ವಿರಾಜಪೇಟೆ ತಾಲ್ಲೂಕು ಪೊನ್ನಂಪೇಟೆಯ ಸೇಂಟ್‌ ಅಂಥೋಣಿ ಕಾಲೇಜುಗಳಿಗೆ ಶೇ 100 ಫಲಿತಾಂಶ ಪಡೆದು ಜಿಲ್ಲೆಯಲ್ಲಿ ಉತ್ತಮ ಸಾಧನೆ ತೋರಿವೆ.

ಮಡಿಕೇರಿ ತಾಲ್ಲೂಕಿನ ಮದೆನಾಡು ಗ್ರಾಮದ ಮದೆ ಮಹೇಶ್ವರ ಕಾಲೇಜಿಗೆ ಶೇ 90, ಭಾಗಮಂಡಲದ ಕಾವೇರಿಪದವಿ ಪೂರ್ವ ಕಾಲೇಜಿಗೆ ಶೇ 91.25, ಮಡಿಕೇರಿಯ ಸೇಂಟ್‌ ಜೋಸೆಫ್‌ ಪದವಿ ಪೂರ್ವ ಕಾಲೇಜಿಗೆ ಶೇ 91.59, ನಗರದ ರಾಜೇಶ್ವರಿ ಪದವಿಪೂರ್ವ ಕಾಲೇಜಿಗೆ ಶೇ 90, ಮೂರ್ನಾಡು ಮಾರುತಿ ಪದವಿಪೂರ್ವ ಕಾಲೇಜಿಗೆ ಶೇ 92.68, ವಿರಾಜಪೇಟೆಯ ಸೇಂಟ್‌ ಅನ್ನಮ್ಮ  ಪದವಿಪೂರ್ವ ಕಾಲೇಜಿಗೆ ಶೇ 97, ಗೋಣಿಕೊಪ್ಪಲು ಲಯನ್ಸ್‌ ಪದವಿ ಪೂರ್ವ ಕಾಲೇಜಿಗೆ ಶೇ 93, ಗೋಣಿ ಕೊಪ್ಪಲು ವಿದ್ಯಾನಿಕೇತನ ಪದವಿಪೂರ್ವ ಕಾಲೇಜಿಗೆ ಶೇ 96, ಗೋಣಿಕೊಪ್ಪಲು ಕೈಕೇರಿ ಕಾಲ್ಸ್‌ ಪಿಯು ಕಾಲೇಜು ಶೇ 92, ಕುಶಾಲನಗರದ ವಿವೇಕಾನಂದ ಕಾಲೇಜಿಗೆ ಶೇ 96, ಶನಿವಾರಸಂತೆಯ ವಿಘ್ನೇಶ್ವರ ಪದವಿಪೂರ್ವ ಕಾಲೇಜಿಗೆ ಶೇ 94.17 ಫಲಿತಾಂಶ ಲಭಿಸಿದೆ.

ADVERTISEMENT

ಕಳಪೆ ಸಾಧನೆ: ಸೋಮವಾರಪೇಟೆ ತಾಲ್ಲೂಕು ಶಾಂತಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಕಳಪೆ ಸಾಧನೆ ಮಾಡಿದ್ದು, ಅತ್ಯಂತ ಕಡಿಮೆ ಫಲಿತಾಂಶ ಪಡೆದಿದೆ.ಶೇ 43.48 ಫಲಿ ತಾಂಶ ಬಂದಿದ್ದು, ಪರೀಕ್ಷೆಗೆ ಹಾಜ ರಾಗಿದ್ದ 23 ವಿದ್ಯಾರ್ಥಿಗಳಲ್ಲಿ 13 ಮಂದಿ ಅನುತ್ತೀರ್ಣಗೊಂಡಿದ್ದಾರೆ.

ಪೊನ್ನಂಪೇಟೆಯ ಸುದೇವ ಪದವಿ ಪೂರ್ವ ಕಾಲೇಜಿಗೆ ಶೇ 44 ಫಲಿತಾಂಶ ಲಭಿಸಿದ್ದು, ಪರೀಕ್ಷೆ ಬರೆದ 16 ವಿದ್ಯಾರ್ಥಿ ಗಳಲ್ಲಿ 9 ಮಂದಿ ಅನುತ್ತೀರ್ಣ ಗೊಂಡಿದ್ದಾರೆ. ತಿತಿಮತಿ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಶೇ 46 ಫಲಿತಾಂಶ ಬಂದಿದ್ದು, ಪರೀಕ್ಷೆ ತೆಗೆದುಕೊಂಡ 41 ವಿದ್ಯಾರ್ಥಿಗಳಲ್ಲಿ 22 ಮಂದಿ ಅನುತ್ತೀರ್ಣಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.