ADVERTISEMENT

12 ತಂಡಗಳು ಮುಂದಿನ ಸುತ್ತಿಗೆ

ಹಾಕಿ; ಟೂರ್ನಿಯ ಮೊದಲ ಮಹಿಳಾ ಗೋಲ್‌ ಸ್ಕೋರರ್‌ ಲೀಲಾವತಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 9:40 IST
Last Updated 21 ಏಪ್ರಿಲ್ 2018, 9:40 IST
ನಾಪೋಕ್ಲುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಲ್ಲೇಟಿರ ಕಪ್ ಹಾಕಿ ಉತ್ಸವದ ಶುಕ್ರವಾರದ ಪಂದ್ಯಗಳಲ್ಲಿ ಕುಟ್ಟಂಡ ಮತ್ತು ನೆರ್ಪಂಡ ತಂಡಗಳ ನಡುವಿನ ನಡೆದ ಸೆಣೆಸಾಟ
ನಾಪೋಕ್ಲುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಲ್ಲೇಟಿರ ಕಪ್ ಹಾಕಿ ಉತ್ಸವದ ಶುಕ್ರವಾರದ ಪಂದ್ಯಗಳಲ್ಲಿ ಕುಟ್ಟಂಡ ಮತ್ತು ನೆರ್ಪಂಡ ತಂಡಗಳ ನಡುವಿನ ನಡೆದ ಸೆಣೆಸಾಟ   

ನಾಪೋಕ್ಲು: ಇಲ್ಲಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಲ್ಲೇಟಿರ ಕಪ್ ಹಾಕಿ ಉತ್ಸವದ ಶುಕ್ರವಾರದ ಪಂದ್ಯಗಳಲ್ಲಿ ಮಲ್ಲಮಡ ತಂಡದ ಲೀಲಾವತಿ ಕೊರವಂಡ ತಂಡದ ವಿರುದ್ಧ ಮೊದಲ ಗೋಲು ದಾಖಲಿಸಿ ಟೂರ್ನಿಯ ಮೊದಲ ಮಹಿಳಾ ಗೋಲ್‌ ಸ್ಕೋರರ್‌ ಗೌರವಕ್ಕೆ ಪಾತ್ರರಾಗಿದ್ದಾರೆ.

ಈ ಪಂದ್ಯದಲ್ಲಿ ಮಲ್ಲಮಡ ತಂಡವು ಕೊರವಂಡ ತಂಡದ ವಿರುದ್ಧ 2–0 ಅಂತರದ ಗೆಲುವು ಸಾಧಿಸಿತು. ಉಳಿದಂತೆ ಶುಕ್ರವಾರದ ಪಂದ್ಯಗಳಲ್ಲಿ ಅಮ್ಮಾಟಂಡ, ಮುದ್ದಿಯಡ, ನಾಮೆರ, ನಂದಿನೆರವಂಡ, ಮನೆಯಪಂಡ, ಕುಟ್ಟಂಡ, ಕೇಚೆಟ್ಟಿರ, ಪೊನ್ನೋಲತಂಡ, ಚೆರುಮಂದಂಡ, ಅಲ್ಲುಮಡ, ಐಚಂಡ ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.

ಕುಟ್ಟಂಡ ಮತ್ತು ನೆರಪಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕುಟ್ಟಂಡ ತಂಡವು ನೆರಪಂಡ ತಂಡವನ್ನು 1-0 ಗೋಲಿನ ಅಂತರದಿಂದ ಸೋಲಿಸಿತು. ಕುಟ್ಟಂಡ ತಂಡದ ಪರ ಧನು ಬೋಪಯ್ಯ ಒಂದು ಗೋಲು ದಾಖಲಿಸಿದರು.

ADVERTISEMENT

ಪುತ್ತರೀರ ಮತ್ತು ಕೇಚೆಟ್ಟಿರ ತಂಡಗಳ ನಡುವಿನ ಪಂದ್ಯದಲ್ಲಿ ಕೇಚೆಟ್ಟಿರ ತಂಡವು ಪುತ್ತರೀರ ತಂಡವನ್ನು 2-0 ಗೋಲಿನ ಅಂತರದಿಂದ ಪರಾಭವಗೊಳಿಸಿತು. ತಂಡದ ಪರ ವಿಜಯ್ ಉತ್ತಯ್ಯ ಎರಡು ಗೋಲು ದಾಖಲಿಸುವುದರ ಮೂಲಕ ತಂಡದ ಗೆಲುವಿಗೆ ಕಾರಣರಾದರು.

ಪೊನ್ನೋಲತಂಡ ಮತ್ತು ನೆಲ್ಲಿರ ತಂಡಗಳ ನಡುವಿನ ಪಂದ್ಯದಲ್ಲಿ ಪೊನ್ನೋಲತಂಡ ತಂಡವು ನೆಲ್ಲಿರ ತಂಡವನ್ನು 4-0 ಗೋಲಿನಿಂದ ಮಣಿಸಿತು. ಪೊನ್ನೋಲತಂಡ ತಂಡದ ಪರ ಶಿವಾಜಿ ಎರಡು, ಅಶ್ವತ್ ಹಾಗೂ ನಾಣಯ್ಯ ತಲಾ ಒಂದೊಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು.

ಚೆರುಮಂದಂಡ ಮತ್ತು ಪುಚ್ಚಿಮಾಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೆರುಮಂದಂಡ ತಂಡವು ಪುಚ್ಚಿಮಾಡ ತಂಡವನ್ನು 2-1 ಗೋಲಿನ ಅಂತರದಿಂದ ಸೋಲಿಸಿತು. ಚೆರುಮಂದಂಡ ತಂಡದ ಪರ ಮನು ಅಚ್ಚಯ್ಯ ಹಾಗೂ ಸೋಮಣ್ಣ ತಲಾ ಒಂದೊಂದು ಗೋಲು ಹಾಗೂ ಪುಚ್ಚಿಮಾಡ ತಂಡದ ಪರ ಯಶ್ವಿನ್ ಒಂದು ಗೋಲು ದಾಖಲಿಸಿದರು.

ಅಲ್ಲುಮಡ ಮತ್ತು ಬೊಳಂದಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಲ್ಲುಮಡ ತಂಡವು ಬೊಳಂದಂಡ ತಂಡವನ್ನು 5-0 ಗೋಲಿನ ಅಂತರದಿಂದ ಮಣಿಸಿತು. ತಂಡದ ಪರ ತಿಮ್ಮಯ್ಯ ಎರಡು ಗೋಲು, ಕರಣ್ ಮೇದಪ್ಪ, ರತನ್, ಶರತ್ ತಲಾ ಒಂದೊಂದು ಗೋಲು ದಾಖಲಿಸುವದರ ಮೂಲಕ ತಂಡದ ಗೆಲುವಿಗೆ ಕಾರಣರಾದರು.

ಐಚಂಡ ಮತ್ತು ಐಯ್ಯಮಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಐಚಂಡ ತಂಡವು ಐಯ್ಯಮಡ ತಂಡವನ್ನು 3-0 ಗೋಲಿನಿಂದ ಮಣಿಸಿತು. ತಂಡದ ಪರ ನಿರಾನ್ ನಾಣಯ್ಯ ಎರಡು ಹಾಗೂ ಸುನಿಲ್ ಪೊನ್ನಪ್ಪ ಒಂದು ಗೋಲು ದಾಖಲಿಸಿದರು.

ಮಾದೆಯಂಡ ಮತ್ತು ಅಮ್ಮಾಟಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಮ್ಮಾಟಂಡ ತಂಡವು ಮಾದೆಯಂಡ ತಂಡವನ್ನು 4-0 ಗೋಲಿನಿಂದ ಸೋಲಿಸಿತು. ತಂಡದ ಪರ ಮೇದಪ್ಪ ಎರಡು, ಬೋಪಯ್ಯ ಮತ್ತು ದೇವಯ್ಯ ತಲಾ ಒಂದೊಂದು ಗೋಲು ದಾಖಲಿಸಿದರು.

ಮುದ್ದಿಯಂಡ ಮತ್ತು ಕಬ್ಬಚ್ಚಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮುದ್ದಿಯಂಡ ತಂಡವು ಕಬ್ಬಚ್ಚಿರ ತಂಡವನ್ನು 2-1 ಗೋಲಿನಿಂದ ಪರಾಭವಗೊಳಿಸಿತು. ತಂಡದ ಪರ ಬೋಪಣ್ಣ ಎರಡು ಗೋಲು ದಾಖಲಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾದರು.

ಕೊರವಂಡ ಮತ್ತು ಮಲ್ಲಮಾಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಲ್ಲಮಾಡ ತಂಡವು ಕೊರವಂಡ ತಂಡವನ್ನು 2-0 ಗೋಲಿನಿಂದ ಮಣಿಸಿತು. ಮಲ್ಲಮಾಡ ತಂಡದ ಪರ ಲೀಲಾವತಿ, ಕರುಂಬಯ್ಯ ತಲಾ ಒಂದೊಂದು ಗೋಲು ದಾಖಲಿಸಿದರು.

ನಾಮೆರ ಮತ್ತು ಮುಕ್ಕಾಟಿರ (ಪುಲಿಕೋಟು) ತಂಡಗಳ ನಡುವಿನ ಪಂದ್ಯದಲ್ಲಿ ನಾಮೆರ ತಂಡವು ಮುಕ್ಕಾಟಿರ ತಂಡವನ್ನು 1-0 ಗೋಲಿನಿಂದ ಸೋಲಿಸಿತು. ತಂಡದ ಪರ ವರುಣ್ ಒಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು.

ಮಾಣಿರ ಮತ್ತು ನಂದಿನೆರವಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ನಂದಿನೆರವಂಡ ತಂಡವು ಮಾಣಿರ ತಂಡವನ್ನು 2-0 ಗೋಲಿನಿಂದ ಸೋಲಿಸಿತು. ತಂಡದ ಪರ ರೋಹನ್ ಕಾವೇರಪ್ಪ, ಕರಣ್ ಕಾರ್ಯಪ್ಪ ತಲಾ ಒಂದೊಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು.

ಮನೆಯಪಂಡ ಮತ್ತು ನಂದೇಟಿರ ತಂಡಗಳ ನಡುವಿನ ಪಂದ್ಯದಲ್ಲಿ ಮನೆಯಪಂಡ ತಂಡವು ನಂದೇಟಿರ ತಂಡವನ್ನು 2-0 ಗೋಲಿನಿಂದ ಸೋಲಿಸಿತು. ತಂಡದ ಪರ ಚಂಗಪ್ಪ ಎರಡು ಗೋಲು ದಾಖಲಿಸಿ ತಂಡವನ್ನು ಗೆಲ್ಲಿಸಿದರು.

ಮೈದಾನ-1

4 ಬೆಳಿಗ್ಗೆ 9 ಗಂಟೆಗೆ ನಾಟೋಳಂಡ - ಓಟೇರಿರ

4 ಬೆಳಿಗ್ಗೆ 10ಕ್ಕೆ ಪೆಮ್ಮುಡಿಯಂಡ - ಬೊಪ್ಪಂಡ

4 ಬೆಳಿಗ್ಗೆ 11ಕ್ಕೆ ನಂಬುಡುಮಡ - ಮಾಣಿಪಂಡ

4 ಮಧ್ಯಾಹ್ನ 12ಕ್ಕೆ ಉದಿನಾಡಂಡ - ತಿರುಟೆರ

4 ಮಧ್ಯಾಹ್ನ 1ಕ್ಕೆ ಅವರೆಮಾದಂಡ - ಮಾಚಿಮಾಡ

ಮೈದಾನ-2

4 ಬೆಳಿಗ್ಗೆ 9 ಗಂಟೆಗೆ ಚೊಟ್ಟೆಯಂಡ - ನಡಿಕೇರಿಯಂಡ

4 ಬೆಳಿಗ್ಗೆ 10ಕ್ಕೆ ಅಳಮೇಂಗಡ - ಮಂದನೆರವಂಡ

4 ಬೆಳಿಗ್ಗೆ 11ಕ್ಕೆ ಹಂಚೆಟ್ಟಿರ - ಗುಡ್ಡಂಡ

4 ಮಧ್ಯಾಹ್ನ 12ಕ್ಕೆ ಗೌಡಂಡ - ಮುಂಡೋಟಿರ

4 ಮಧ್ಯಾಹ್ನ  1ಕ್ಕೆ ಮರುವಂಡ - ಕಾಟುಮಣಿಯಂಡ

4 ಮಧ್ಯಾಹ್ನ  ಕ್ಕೆ ದಾಸಂಡ - ನೆಲ್ಲಚಂಡ

ಮೈದಾನ -3

4 ಬೆಳಿಗ್ಗೆ 9 ಗಂಟೆಗೆ ಕೇಟೋಳಿರ - ಕೋಚಮಂಡ

4 ಮಧ್ಯಾಹ್ನ 1ಕ್ಕೆ ಅಪ್ಪುಮಣಿಯಂಡ - ಕೋಡಿರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.