ಗೋಣಿಕೊಪ್ಪಲು: ಇಲ್ಲಿಗೆ ಸಮೀಪದ ಬಾಳೆಲೆಯ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ನಡೆಯುತ್ತಿರುವ ಅರಮಣಮಾಡ ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿಯ ಬುಧವಾರದ ಪಂದ್ಯಗಳಲ್ಲಿ ಪರುವಂಡ ತಂಡದ ಬ್ಯಾಟ್ಸ್‌ಮನ್‌ಗಳು ರನ್‌ಗಳ ಹೊಳೆಯನ್ನೇ ಹರಿಸಿದರು.
ಈ ತಂಡವು ಯಾವುದೇ ವಿಕೆಟ್ ಕಳೆದುಕೊಳ್ಳದೇ ನಿಗದಿತ 8 ಓವರ್‌ಗಳಲ್ಲಿ ಗಳಿಸಿದ್ದು ಬರೋಬರಿ 144 ರನ್‌ಗಳು. ಇದಕ್ಕೆ ಉತ್ತರವಾಗಿ ಬಲ್ಯಂಡ ತಂಡವು 9 ವಿಕೆಟ್‌ಗಳನ್ನು ಕಳೆದುಕೊಂಡು ಗಳಿಸಿದ್ದು ಕೇವಲ 31 ರನ್‌ಗಳು ಮಾತ್ರ. ಬರೋಬರಿ 113 ರನ್‌ಗಳ ಗೆಲುವು ಪರುವಂಡ ತಂಡಕ್ಕೆ ಒಲಿಯಿತು. ಇದು ದಿನದ ಅತ್ಯಾಕರ್ಷಣೆಯಾಗಿ ನೋಡುಗರಿಗೆ ಸಂಭ್ರಮ ತಂದಿತು.
ಕುಟ್ಟಂಡ (ಅಮ್ಮತ್ತಿ) ತಂಡ ಮತ್ರಂಡ ವಿರುದ್ಧ 9 ವಿಕೆಟ್‌ಗಳ ಜಯ ದಾಖಲಿಸಿತು. ಮತ್ರಂಡ ನೀಡಿದ್ದ 77 ರನ್‌ಗಳ ಗುರಿಯನ್ನು ಬೆನ್ನತ್ತಿದ ಕುಟ್ಟಂಡ ಕೇವಲ 1 ವಿಕೆಟ್ ಕಳೆದುಕೊಂಡು 78 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಓಡಿಯಂಡ ತಂಡವು ಬಲ್ಲಿಮಾಡ ತಂಡದ ವಿರುದ್ಧ 48 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತು. ಓಡಿಯಂಡ ನೀಡಿದ 98 ರನ್‌ಗಳ ಗುರಿಯನ್ನು ತಲುಪಲಾಗದ ಬಲ್ಲಿಮಾಡ 50 ರನ್ ಗಳಿಸಲಷ್ಟೇ ಶಕ್ತವಾಯಿತು.
ಬಾಳೆಯಡ ತಂಡವು ಪೊನ್ನಿಮಾಡ ತಂಡವನ್ನು 44 ರನ್‌ಗಳಿಂದ ಮಣಿಸಿತು. ಬಾಳೆಯಡ ತಂಡದ 93 ರನ್‌ಗಳ ಗುರಿ ಬೆನ್ನತ್ತಿದ ಪೊನ್ನಿಮಾಡ ತಂಡ ಕೇವಲ 50 ರನ್ ಗಳಿಸಿ ಸೋಲಪ್ಪಿಕೊಂಡಿತು.
ಮಂಡುವಂಡ ತಂಡವು ಮಾಪಣಮಾಡ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಮಾಪಣಮಾಡ ನೀಡಿದ 38 ರನ್‌ಗಳ ಗುರಿಯನ್ನು ಯಾವುದೇ ವಿಕೆಟ್ ಕಳೆದುಕೊಳ್ಳದೇ ಮಂಡುವಂಡ ತಂಡ ಸುಲಭದಲ್ಲಿ ತಲುಪಿತು.
ಮೊಣ್ಣಂಡ ತಂಡವು ಚಟ್ಟಿಯಾರಂಡ ವಿರುದ್ಧ 6 ವಿಕೆಟ್‌ಗಳ ಜಯ ಪಡೆಯಿತು. ಚಟ್ಟಿಯಾರಂಡ ನೀಡಿದ 46 ರನ್‌ಗಳ ಗುರಿಯನ್ನು ಮೊಣ್ಣಂಡ 4 ವಿಕೆಟ್ ಕಳೆದುಕೊಂಡು ತಲುಪಿತು.
ಗಾಂಡಂಗಡ ತಂಡವು ಚೀಂದಿರ ವಿರುದ್ಧ 9 ವಿಕೆಟ್‌ಗಳ ಜಯ ಪಡೆಯಿತು. ಚೇಂದಿರ ತಂಡವು ನೀಡಿದ 89 ರನ್‌ಗಳ ಗುರಿಯನ್ನು ಕೇವಲ ಒಂದು ವಿಕೆಟ್ ಕಳೆದುಕೊಂಡು ಗಾಂಡಂಗಡ ತಲುಪಿ, ವಿಜಯದ ನಗೆ ಬೀರಿತು.
ಚೆಟ್ಟಿಯಾರಂಡ ತಂಡವು ಬಾಚಳ್ಳಿರ ವಿರುದ್ಧ 23 ರನ್‌ಗಳ ಗೆಲುವು ಸಾಧಿಸಿತು. ಚೆಟ್ಟಿಯಾರಂಡ ನೀಡಿದ 109 ರನ್‌ಗಳ ಗುರಿಗೆ ಉತ್ತರವಾಗಿ ಬಾಚಳ್ಳಿರ ಕೇವಲ 85 ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಯಿತು.
ಮೊಣ್ಣಂಡ ತಂಡವು ಐಮುಡಿಯಂಡ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ಗಳಿಸಿತು. ಐಮುಡಿಯಂಡ ನೀಡಿದ 73 ರನ್‌ಗಳ ಗುರಿಯನ್ನು ಮೊಣ್ಣಂಡ ತಂಡವು ಯಾವುದೇ ವಿಕೆಟ್ ಕಳೆದುಕೊಳ್ಳದೇ ತಲುಪಿದ್ದು ವಿಶೇಷ ಎನಿಸಿತು.
ನಿತ್ಯವೂ ಗಮನ ಸೆಳೆಯುತ್ತಿರುವ ಕ್ರಿಕೆಟ್ ಹಲವು ತಂಡಗಳಿಗೆ ಒಲಿಯಿತು ಭರ್ಜರಿ ಜಯ ಮಹಿಳಾ ಆಟಗಾರ್ತಿಯರಿಂದ ಉತ್ತಮ ಪ್ರದರ್ಶನ
ಮಹಿಳಾ ವಿಭಾಗ
ನಾಟೋಳಂಡ ತಂಡವು ಕಾಳಿಮಾಡ ತಂಡದ ವಿರುದ್ಧ 44 ರನ್‌ಗಳ ಜಯ ಪಡೆಯಿತು. ನಾಟೋಳಂಡ ನೀಡಿದ 74 ರನ್‌ಗಳ ಗುರಿಯನ್ನು ಬೆನ್ನತ್ತಿದ ಕಾಳಿಮಾಡ ತಂಡವು ಕೇವಲ 29 ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಕೊಂಗಂಡ ತಂಡವು ಬಾಳೆಯಡ ವಿರುದ್ಧ 8 ವಿಕೆಟ್‌ಗಳ ಜಯ ಪಡೆಯಿತು. ಬಾಳೆಯಡ ನೀಡಿದ 44 ರನ್‌ಗಳ ಗುರಿಯನ್ನು ಕೊಂಗಂಡ ತಂಡವು 2 ವಿಕೆಟ್‌ಗಳನ್ನು ಮಾತ್ರವೇ ಕಳೆದುಕೊಂಡು ತಲಪಿತು. ಅಳಮೇಂಗಡ ತಂಡವು ಓಡಿಯಂಡ ತಂಡವನ್ನು 10 ವಿಕೆಟ್‌ಗಳಿಂದ ಮಣಿಸಿತು. ಓಡಿಯಂಡ ನೀಡಿದ 28 ರನ್‌ಗಳ ಗುರಿಯನ್ನು ಅಳಮೇಂಗಡ ತಂಡವು ಯಾವುದೇ ವಿಕೆಟ್‌ಗಳನ್ನು ಕಳೆದುಕೊಳ್ಳದೇ 3.2 ಓವರ್‌ಗಳಲ್ಲಿಯೇ ತಲುಪಿತು. ಕಂಬೀರಂಡ ತಂಡವು ಚಿಮ್ಮಣಮಾಡ ತಂಡವನ್ನು 17 ರನ್‌ಗಳಿಂದ ಮಣಿಸಿತು. ಕಂಬೀರಂಡ ನೀಡಿದ 35 ರನ್‌ಗಳ ಗುರಿಯನ್ನು ಬೆನ್ನತ್ತಿದ ಚಿಮ್ಮಣಮಾಡ ತಂಡವು 17 ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಮಾಳೆಟಿರ ತಂಡವು ಮೇವಡ ತಂಡದ ವಿರುದ್ಧ 9 ರನ್‌ಗಳ ಜಯ ಪಡೆಯಿತು. ಮಾಳೆಟಿರ ನೀಡಿದ 45 ರನ್‌ಗಳ ಗುರಿಯನ್ನು ಬೆನ್ನತ್ತಿದ ಮೇವಡ 35 ರನ್‌ಗಳನ್ನು ಗಳಿಸಿ ಗೆಲುವಿನ ಹೊಸ್ತಿಲಲ್ಲಿ ಎಡವಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.