ADVERTISEMENT

ಆಕರ್ಷಣೆಯ ಕೇಂದ್ರವಾದ ತೊಗರಿ ಬೆಳೆ ಜಮೀನು

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 8:44 IST
Last Updated 9 ನವೆಂಬರ್ 2017, 8:44 IST
ಮಾಲೂರು ತಾಲ್ಲೂಕಿನ ಬುವನಹಳ್ಳಿ ಗ್ರಾಮದ ರೈತ ನಾಗಪ್ಪ ಅವರ ಜಮೀನಿನಲ್ಲಿ ಸುಮಾರು 10 ಅಡಿ ಬೆಳೆದಿರುವ ತೊಗರಿ ಗಿಡಗಳು
ಮಾಲೂರು ತಾಲ್ಲೂಕಿನ ಬುವನಹಳ್ಳಿ ಗ್ರಾಮದ ರೈತ ನಾಗಪ್ಪ ಅವರ ಜಮೀನಿನಲ್ಲಿ ಸುಮಾರು 10 ಅಡಿ ಬೆಳೆದಿರುವ ತೊಗರಿ ಗಿಡಗಳು   

ಮಾಲೂರು: ತಾಲ್ಲೂಕಿನ ಚಿಕ್ಕಕುಂತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬುವನಹಳ್ಳಿ ಗ್ರಾಮದ ರೈತ ನಾಗಪ್ಪ ಮಿಶ್ರ ಬೆಳೆ ಪದ್ಧತಿಯಲ್ಲಿ ಬೆಳೆದಿರುವ ತೊಗರಿ ಗಿಡಗಳು ಸುಮಾರು 10 ಅಡಿ ಎತ್ತರ ಬೆಳೆದಿದ್ದು, ಜಮೀನು ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ನಾಗಪ್ಪ ಅವರು ಜೂನ್‌ ತಿಂಗಳಲ್ಲಿ ಬಿಆರ್‌ಜಿ 1 ತಳಿಯ ತೊಗರಿ ಬಿತ್ತನೆ ಮಾಡಿದ್ದು, ಗಿಡಗಳು ಹೂವು ಮತ್ತು ಕಾಯಿ ಮೈದುಂಬಿಕೊಂಡು ನೋಡುಗರ ಮನ ಸೆಳೆಯುತ್ತಿವೆ. ತೊಗರಿ ಮಧ್ಯೆ ನೆಲಗಡಲೆ ಸಹ ಬಿತ್ತನೆ ಮಾಡಲಾಗಿದೆ. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿರುವ ಇವರು ಬೆಳೆಗಳಿಗೆ ಕೃಷಿ ಹೊಂಡದಿಂದ ನೀರು ಹಾಯಿಸುತ್ತಿದ್ದಾರೆ.

‘ತೊಗರಿ ಬಿತ್ತನೆ ಮಾಡಿದಾಗ ಮಳೆ ಕೈಕೊಟ್ಟಿತು. ವಾರಕ್ಕೆ ಒಂದು ಬಾರಿ ಕೃಷಿ ಹೊಂಡದ ನೀರು ಹಾಯಿಸಿ ಬೆಳೆ ಉಳಿಸಿಕೊಂಡೆ. ನಂತರ ಆಗಸ್ಟ್‌ನಲ್ಲಿ ನೆಲಗಡಲೆ ಬಿತ್ತನೆ ಮಾಡಿದೆ. 15 ದಿನದಲ್ಲಿ ಕಟಾವಿಗೆ ಬರಲಿವೆ’ ಎಂದು ನಾಗಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.