ADVERTISEMENT

ಅರ್ಥಪೂರ್ಣ ಜಯಂತ್ಯುತ್ಸವ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 9:07 IST
Last Updated 23 ಏಪ್ರಿಲ್ 2017, 9:07 IST
ಅರ್ಥಪೂರ್ಣ ಜಯಂತ್ಯುತ್ಸವ ನಿರ್ಧಾರ
ಅರ್ಥಪೂರ್ಣ ಜಯಂತ್ಯುತ್ಸವ ನಿರ್ಧಾರ   

ಕೊಪ್ಪಳ: ‘ಬಸವೇಶ್ವರ ಜಯಂತಿಯನ್ನು ಏ. 29ರಂದು ಮತ್ತು ಭಗೀರಥರ ಜಯಂತಿಯನ್ನು ಮೇ 2ರಂದು ಜಿಲ್ಲಾ ಕೇಂದ್ರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ರುದ್ರೇಶ್ ಘಾಳಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಹೇಳಿದರು. ‘ಬಸವ ಜಯಂತಿಯ ಪ್ರಯುಕ್ತ ಬೆಳಿಗ್ಗೆ 9ಕ್ಕೆ ನಗರದ ಬಸವೇಶ್ವರ ವೃತ್ತದಲ್ಲಿ ಬಸವ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಲಾಗುವುದು. ಸಂಜೆ 4ಕ್ಕೆ ಬಸವೇಶ್ವರ ಭಾವಚಿತ್ರದ ಮೆರವಣಿಗೆ ನಗರದ ಗಡಿಯಾರ ಕಂಬದಿಂದ ಜವಾಹರ ರಸ್ತೆ ಮಾರ್ಗವಾಗಿ ಗವಿಮಠ ಆವರಣದವರೆಗೆ ನಡೆಯಲಿದೆ. ಸಂಜೆ 6ಕ್ಕೆ ಗವಿಮಠದ ಆವರಣದಲ್ಲಿ ವೇದಿಕೆ ಸಮಾರಂಭ ನಡೆಯಲಿದೆ. ಸಾಹಿತಿ ರಂಜಾನ್‌ ದರ್ಗಾ ವಿಶೇಷ ಉಪನ್ಯಾಸ ನೀಡುವರು’ ಎಂದರು.

‘ಭಗೀರಥ ಜಯಂತಿಯ ಪ್ರಯುಕ್ತ ಅಂದು ಬೆಳಿಗ್ಗೆ 9-ಕ್ಕೆ ಭಗೀರಥರ ಭಾವಚಿತ್ರ ಮೆರವಣಿಗೆ ನಗರದ ಸಿರಸಪ್ಪಯ್ಯನಮಠ ಆವರಣದಿಂದ ಆರಂಭವಾಗಿ ಗಡಿಯಾರ ಕಂಬ, ಜವಾಹರ ರಸ್ತೆ, ಅಶೋಕ ವೃತ್ತದ ಮೂಲಕ ಶಾದಿಮಹಲ್‌ವರೆಗೆ ನಡೆಯಲಿದೆ. ಅಂದು ಬೆಳಿಗ್ಗೆ 11.30ಕ್ಕೆ ಇಲ್ಲಿನ ಶಾದಿಮಹಲ್‌ನಲ್ಲಿ ವೇದಿಕೆ ಸಮಾರಂಭ ನಡೆಯಲಿದೆ. ತಳಕಲ್ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಫಕೀರಪ್ಪ ವಜ್ರಬಂಡಿ ಭಗೀರಥರ ಕುರಿತು ವಿಶೇಷ ಉಪನ್ಯಾಸ ನೀಡುವರು’ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ, ಜಿಲ್ಲಾ ಪಂಚಾಯಿತಿ ಸದಸ್ಯ ನೇಮಣ್ಣ ಮೇಲಸಕ್ಕರೆ, ಸಮಾಜದ ಮುಖಂಡರಾದ ಬಸವರಾಜ ಬಳ್ಳೊಳ್ಳಿ, ಮಲ್ಲಿಕಾರ್ಜುನ ಸೋಮಲಾಪುರ, ಬಸವರಾಜಪ್ಪ, ಶಿವಕುಮಾರ ಕುಕನೂರು, ರಾಜೇಶ ಸಸಿಮಠ, ವೆಂಕನಗೌಡ ಹೊರತಟ್ನಾಳ, ಕನಕಪ್ಪ ಮುಂಡರಗಿ, ಮುದ್ದಪ್ಪ ಆರಾಳ, ಬಸವರಾಜ ಪೂಜಾರ, ವೆಂಕೋಬ, ಎಚ್‌.ಆರ್.ಪಾಟೀಲ, ಯಂಕಪ್ಪ ಹೊಸಹಳ್ಳಿ, ನಾಗರಾಜ ಚಳ್ಳೊಳ್ಳಿ, ಯಂಕಪ್ಪ ಬಿ., ಭೀಮಸಿ ಹರ್ಲಾಪುರ, ಚಂದ್ರಪ್ಪ ಮೂಲಿಮನಿ, ಮುಖಂಡರಾದ ವಿಠ್ಠಪ್ಪ ಗೋರಂಟ್ಲಿ, ಶಿವಾನಂದ ಹೊದ್ಲೂರ, ಮಂಜುನಾಥ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.