ADVERTISEMENT

ಆಡೂರು: ಕುಡಿವ ನೀರಿಗೆ ಪರದಾಟ

​ಪ್ರಜಾವಾಣಿ ವಾರ್ತೆ
Published 21 ಮೇ 2017, 6:27 IST
Last Updated 21 ಮೇ 2017, 6:27 IST

ಕುಕನೂರು: ಇಲ್ಲಿನ ರಾಜೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಆಡೂರು ಗ್ರಾಮದಲ್ಲಿ ಕಳೆದು ಒಂದು ತಿಂಗಳಿಂದ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗದೆ ಇರುವುದರಿಂದ ಗ್ರಾಮಸ್ಥರು ನೀರಿಗಾಗಿ ಪರದಾಡುವಂತಾಗಿದೆ.  

ತೋಟಗಳಿಗೆ ಅಲೆದಾಟ: ಕುಡಿಯುವ ನೀರು ಸರಿಯಾಗಿ ಬಾರದೇ ಇರುವುದರಿಂದ ನಿವಾಸಿಗಳು ಸಮೀಪದ ತೋಟ, ಹಳ್ಳದ ನೀರು, ಬಾವಿಗಳಿಗೆ ತೆರಳಿ ನೀರು ತರುತ್ತಿದ್ದಾರೆ. ಬೇಸಿಗೆ ರಜೆ ಕಳೆಯಬೇಕಾದ ಗ್ರಾಮದ ಶಾಲಾ ಮಕ್ಕಳು ನೀರು ತರುವ ಕಾಯಕದಲ್ಲಿ ನಿರತರಾಗಿದ್ದಾರೆ ಎಂದು ಗ್ರಾಮದ ಶಂಕ್ರಪ್ಪ ಹೊಸಮನಿ ಅವರು ಅಳಲು ತೋಡಿಕೊಂಡರು.

ಪಂಚಾಯಿತಿ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ನೀರು ಪೂರೈಕೆ ಮಾಡುವಲ್ಲಿ ವಿಫಲವಾಗಿದ್ದಾರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರು ಪೂರೈಸಬೇಕು ಎಂದು ನಿವಾಸಿಗಳಾದ ಬಸವರಾಜ ಮುತ್ತಾಳ, ಪ್ರಭುರಾಜ ಮುತ್ತಾಳ, ಈರಣ್ಣ ಚೌಡಿ, ಸಂಗಪ್ಪ ಮುತ್ತಾಳ, ಭೀಮಪ್ಪ ಮುತ್ತಾಳ, ಭೀಮಣ್ಣ ನಾಗೋಜಿ ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.