ADVERTISEMENT

ಕುಷ್ಟಗಿ: ಜನಪದ ಸಂಗೀತ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 5:10 IST
Last Updated 19 ಜನವರಿ 2017, 5:10 IST
ಕುಷ್ಟಗಿ: ಜನಪದ ಸಂಗೀತ ಕಾರ್ಯಕ್ರಮ
ಕುಷ್ಟಗಿ: ಜನಪದ ಸಂಗೀತ ಕಾರ್ಯಕ್ರಮ   

ಕುಷ್ಟಗಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ದೊಡ್ಡಬಸವೇಶ್ವರ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ಪಟ್ಟಣದ ದುರ್ಗಾದೇವಿ ದೇವಸ್ಥಾನದಲ್ಲಿ ಈಚೆಗೆ ಜನಪದ ಸಂಗೀತ ಕಾರ್ಯಕ್ರಮ ನಡೆಯಿತು.

ದೊಡ್ಡಾಟ ಕಲಾವಿದ ಭರಮಪ್ಪ ಮಂಡಲಮರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕನ್ನಡ ಜನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಎಂದರು.
ಪುರಸಭೆ ಸದಸ್ಯ ಚನ್ನಪ್ಪ ನಾಲಗಾರ, ಕಲಾವಿದರಾದ ದೇವೇಂದ್ರಪ್ಪ ಕಮ್ಮಾರ, ಶುಕಮುನಿ ಗಡಗಿ, ಅಯ್ಯಪ್ಪ ಬಡಿಗೇರ, ಸಂಗಪ್ಪ ಪಂಚಮ, ಐ.ಡಿ. ಬಾಬು, ಶರಣಪ್ಪ ವಡಗೇರಿ ಇದ್ದರು.

ರೇಣವ್ವ ಪೂಜಾರ ಹಾಗೂ ಸಂಗಡಿಗರು ಸಂಪ್ರದಾಯ ಪದಗಳನ್ನು ಹಾಡಿದರು. ಚನ್ನಪ್ಪ ಭಾವಿಮನಿ ನಿರೂಪಿಸಿದರು.

ಸುಗಮ ಸಂಗೀತ: ಜ್ಯೋತಿ ಮಹಿಳಾ ಹಾಗೂ ಸಾಂಸ್ಕೃತಿ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ್ರಾಯೋಜಿತ ಸುಗಮ ಸಂಗೀತ ಕಾರ್ಯಕ್ರಮ ಈಚೆಗೆ ಪಟ್ಟಣದಲ್ಲಿ ನಡೆಯಿತು. ತಾಜುದ್ದೀನ ದಳಪತಿ ಕಾರ್ಯಕ್ರಮ ಉದ್ಘಾಟಿಸಿದರು.

ಜನಪದ ಕಲಾವಿದ ವಾಲ್ಮೀಕಪ್ಪ ಯಕ್ಕರನಾಳ, ಅಮೀನುದ್ದೀನ ಮುಲ್ಲಾ, ಚನ್ನಪ್ಪ ನಾಲಗಾರ, ಸಂಗಪ್ಪ ಪಂಚಮ, ಹನಮಂತಪ್ಪ ಹಳ್ಳಿ ಇದ್ದರು. ಮಲ್ಲನಗೌಡ ಅಗಸಿಮುಂದಿನ ತಂಡದವರು ಸುಗಮ ಸಂಗೀತ ಕಾರ್ಯಕ್ರಮ ನೀಡಿದರು. ಶುಕಮುನಿ ಗುಮಗೇರಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.