ADVERTISEMENT

‘ಕೃಷಿಗೆ ಪರ್ಯಾಯ ಹೈನುಗಾರಿಕೆ’

ಶಾಸಕ ಬಸವರಾಜ ದಡೇಸೂಗೂರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2018, 13:04 IST
Last Updated 4 ಜೂನ್ 2018, 13:04 IST

ಕಾರಟಗಿ: ಈ ಭಾಗದಲ್ಲಿ ಕೃಷಿಗೆ ಹೆಚ್ಚಿನ ಪ್ರಧಾನ್ಯತೆ ಇದೆ. ನಿಸರ್ಗ ಮುನಿಸಿಕೊಂಡಾಗ ಕೈ ಹಿಡಿಯುವ ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ ಸಹಿತ ಅನೇಕ ಉದ್ಯೋಗಗಳು ಕೃಷಿಗೆ ಪರ್ಯಾಯವಾಗಿವೆ. ಜನರು ಪರ್ಯಾಯ ಉದ್ಯೋಗದತ್ತ ವಾಲಿದರೆ ನಿರಂತರ ದುಡಿಮೆ, ಆದಾಯ ನಿಶ್ಚಿತ’ ಎಂದು ಶಾಸಕ ಬಸವರಾಜ ದಡೇಸೂಗೂರ ಹೇಳಿದರು.

ಸಮೀಪದ 28ನೇ ಕಾಲುವೆ ಕ್ಯಾಂಪ್‌ನ ಪ್ರಗತಿಪರ ರೈತ ವೀರರಾಜು ಅವರ ಹೈನುಗಾರಿಕೆ ಉದ್ಯಮದ ಘಟಕಕ್ಕೆ ಈಚೆಗೆ ಭೇಟಿ ನೀಡಿ, ಮಾತನಾಡಿದರು.

’ನಮ್ಮ ಭಾಗದ ರೈತರು ಭತ್ತದ ಬೆಳೆಯೊಂದನ್ನೇ ದಾರಿದೀಪ ಎಂದುಕೊಂಡಿದ್ದಾರೆ. ಮಳೆಯ ಕೊರತೆಯಿಂದ ನೀರಿನ ಸಮಸ್ಯೆಯಾಗಿ ಭತ್ತದ ಬೆಳೆ ಪಡೆಯುವಲ್ಲಿ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಕೃಷಿಯಲ್ಲಿ ಸಾಕಷ್ಟು ಹಾನಿಯನ್ನು ಅನುಭವಿಸುತ್ತಾರೆ. ಇಂತಹ ಹಾನಿಯನ್ನು ತಪ್ಪಿಸಲು ರೈತರು ಕೃಷಿಯ ಜೊತೆ ಹೈನುಗಾರಿಕೆ, ತೋಟಗಾರಿಕೆ, ತರಕಾರಿ ಬೆಳೆ, ಕುರಿ ಸಾಕಾಣಿಕೆಯಂತಹ ಕಾರ್ಯದಲ್ಲೂ ತೊಡಗಿದರೆ ಆರ್ಥಿಕವಾಗಿ ಸಬಲರಾಗಬಹುದು’ ಎಂದರು.

ADVERTISEMENT

‘ಕೃಷಿ ಮತ್ತು ಇತರ ಪರ್ಯಾಯ ಕಸಬುಗಳಿಗೆ ಬ್ಯಾಂಕ್‌ ಸಾಲ ಹಾಗೂ ಸರ್ಕಾರದ ಸಬ್ಸಿಡಿ ಸೌಲಭ್ಯ ದೊರೆಯುತ್ತದೆ. ಉಪ ಕಸುಬುಗಳಿಂದ ಉದ್ಯೋಗ ಸೃಷ್ಟಿಯಾಗಿ ಗುಳೆ ಹೋಗುವುದು ತಪ್ಪುತ್ತದೆ’ ಎಂದರು.

ವಿಶೇಷ ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಜಿ.ಅರಳಿ, ಗಂಗಾವತಿ ಎಪಿಎಂಸಿ ಸದಸ್ಯ ಜಿ.ರಾಮಮೋಹನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರೇಶ ಸಾಲೋಣಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ನಾಗಮ್ಮ ನಾಗನಗೌಡ ಪಾಟೀಲ, ಪುರಸಭೆ ಸದಸ್ಯ ಜಿ.ತಿಮ್ಮನಗೌಡ ಪ್ರಮುಖರಾದ ಬಿ. ಕಾಶಿವಿಶ್ವನಾಥ, ಸುರೇಶಪ್ಪ ನಾಡಿಗೇರ, ಶ್ರೀಶೈಲಗೌಡ ಚೆಳ್ಳೂರು  ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.