ADVERTISEMENT

ಕೊಪ್ಪಳ: 343 ಪ್ರಕರಣಗಳ ಇತ್ಯರ್ಥ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2017, 12:48 IST
Last Updated 12 ಫೆಬ್ರುವರಿ 2017, 12:48 IST
ಕೊಪ್ಪಳ ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ಜನತಾ ಅದಾಲತ್‌ ನಡೆಯಿತು
ಕೊಪ್ಪಳ ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ಜನತಾ ಅದಾಲತ್‌ ನಡೆಯಿತು   

ಕೊಪ್ಪಳ: ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ನಡೆದ ಜನತಾ ಅದಾಲತ್‌ನಲ್ಲಿ ಬಾಕಿ ಇದ್ದ ವಿವಿಧ ರೀತಿಯ 343 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಯಿತು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ನ್ಯಾಯಾಲಯದ ಆವರಣದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ವಿಜಯಲಕ್ಷ್ಮಿ ಉಪನಾಳ, ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಬಿ. ದಶರಥ ಹಾಗೂ ನ್ಯಾಯಾಧೀಶ ವಿಜಯಕುಮಾರ ಕನ್ನೂರು ಅವರು ವಾದಿ ಮತ್ತು ಪ್ರತಿವಾದಿಗಳನ್ನು ರಾಜಿ ಮಾಡಿಸುವ ಮೂಲಕ ಪ್ರಕರಣಗಳನ್ನು ಇತ್ಯರ್ಥಗೊಳಿಸಿದರು.

ಅದಾಲತ್‌ನಲ್ಲಿ ಬಹಳ ದಿನದಿಂದ ಬಗೆಹರಿಯದ ಹಾಗೂ ಸಿವಿಲ್, ಕ್ರಿಮಿನಲ್, ಕೌಟುಂಬಿಕ, ಚೆಕ್‌ಬೌನ್ಸ್‌ ಹಾಗೂ ಅಪಘಾತ ಪ್ರಕರಣಗಳು ಸೇರಿದಂತೆ ಒಟ್ಟು 423 ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥಗೊಳಿಸಲು ಪ್ರಯತ್ನಿಸಲಾಯಿತು. ಇವುಗಳಲ್ಲಿ 206 ಸಿವಿಲ್, 94 ಕ್ರಿಮಿನಲ್, 33 ಚೆಕ್‌ಬೌನ್ಸ್‌ ಹಾಗೂ ಚೀಟಿಂಗ್, 10 ಅಪಘಾತ ಪ್ರಕರಣಗಳು ಸೇರಿ ಒಟ್ಟು 343 ಪ್ರಕರಣಗಳು ಯಶಸ್ವಿಯಾಗಿ ಇತ್ಯರ್ಥಗೊಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.