ADVERTISEMENT

ಗಂಗಾವತಿ: ನಾಪತ್ತೆಯಾದ ಬಾಲಕಿ ಪತ್ತೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2017, 9:48 IST
Last Updated 14 ಏಪ್ರಿಲ್ 2017, 9:48 IST

ಗಂಗಾವತಿ: ತಾಲ್ಲೂಕಿನ ಚಿಕ್ಕಡಂಕ ನಕಲ್ ಗ್ರಾಮದಿಂದ  ಕಾಣೆಯಾಗಿದ್ದ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಗುರು ವಾರ ಪತ್ತೆಯಾಗಿದ್ದು,  ಆಕೆ ಅದೇ ಗ್ರಾಮದ ಯುವಕನೊಂದಿಗೆ ಮದುವೆಯಾದ ಸಂಗತಿ ಬೆಳಕಿಗೆ ಬಂದಿದೆ.

ಗ್ರಾಮದ ಹನುಮಂತಪ್ಪ ಲಚುಮಪ್ಪ ಸಿರವಾರ, ಬಾಲಕಿಯನ್ನು ಕರೆದೊಯ್ದು ಸಿಂಧನೂರಿನ ದೇವಸ್ಥಾನವೊಂದರಲ್ಲಿ ಮದುವೆ ಯಾಗಿದ್ದಾನೆ. ಅವರನ್ನು ವಶಕ್ಕೆ ಪಡೆದು ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಗ್ರಾಮೀಣ ಠಾಣೆ ಪಿಎಸ್ಐ ಪ್ರಕಾಶ ಮಾಳೆ ತಿಳಿಸಿದ್ದಾರೆ.

ಘಟನೆಯ ವಿವರ: ಮಗಳು ನಾಪತ್ತೆ ಯಾಗಿದ್ದು, ಹುಡುಕಿ ಕೊಡಿ ಎಂದು ಬಾಲಕಿಯ ದೊಡ್ಡಪ್ಪ ಬಾಲಪ್ಪ ಪಂಪಣ್ಣ ಎಂಬುವವರು ಗಂಗಾವತಿ ಗ್ರಾಮೀಣ ಠಾಣೆಗೆ ದೂರು ನೀಡಿದ್ದರು. ಬಾಲಕಿ ಹಾಗೂ ಯುವಕ ಪರಸ್ಪರ ಒಪ್ಪಿ  ಮದುವೆ ಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯನ್ನು ಮದುವೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವ ಕನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ನ್ಯಾಯಾಂಗದ ವಶಕ್ಕೆ ನೀಡ ಲಾಗಿದೆ.

ಬಾಲಕಿಯನ್ನು ಕರೆ ದೊಯ್ಯಲು ಪಾಲಕರು ನಿರಾಕರಿಸಿದ್ದು, ಮಕ್ಕಳ ಕಲ್ಯಾಣ ಸಮಿತಿ ಮೂಲಕ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT