ADVERTISEMENT

ಚಿಕ್ಕಬೆನಕಲ್‌–ಗಂಗಾವತಿ ರೈಲು ಮಾರ್ಗ ಡಿಸೆಂಬರ್‌ಗೆ ಪೂರ್ಣ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 6:07 IST
Last Updated 20 ಏಪ್ರಿಲ್ 2017, 6:07 IST

ಹುಬ್ಬಳ್ಳಿ: ‘ಚಿಕ್ಕ ಬೆನಕಲ್‌– ಗಂಗಾವತಿ ಹೊಸ ರೈಲು ಮಾರ್ಗ ಕಾಮಗಾರಿ ಡಿಸೆಂಬರ್‌ ವೇಳೆಗೆ ಪೂರ್ಣಗೊಳ್ಳಲಿದೆ’ ಎಂದು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಎ.ಕೆ. ಗುಪ್ತ ಇಲ್ಲಿ ತಿಳಿಸಿದರು.‘ಗಂಗಾವತಿ ರೈಲು ನಿಲ್ದಾಣದ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿ ಇದ್ದು, ಅದು ಕೂಡ ಡಿಸೆಂಬರ್‌ಗೆ ಪೂರ್ಣ ಆಗಲಿದೆ ಎಂದು ಅವರು ಹೇಳಿದರು.

ನಗರದ ರೈಲ್ವೆ ಅಧಿಕಾರಿಗಳ ಕ್ಲಬ್‌ನಲ್ಲಿ ನೈರುತ್ಯ ರೈಲ್ವೆ ವತಿಯಿಂದ ಮಂಗಳವಾರ ನಡೆದ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲಿ ಸಂಸದ ಕರಡಿ ಸಂಗಣ್ಣ ಅವರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

‘ಹುಬ್ಬಳ್ಳಿ– ತಿರುಪತಿ– ಹುಬ್ಬಳ್ಳಿ’ ನಡುವೆ ಪ್ರತಿನಿತ್ಯ ಸಂಚರಿಸುವ ಪ್ಯಾಸೆಂಜರ್‌ ರೈಲನ್ನು ಹಿಟ್ನಾಳ ಬಳಿ ಆರು ತಿಂಗಳ ಕಾಲ ಪ್ರಯೋಗಾರ್ಥ ನಿಲುಗಡೆ ಮಾಡುವಂತೆ ರೈಲ್ವೆ ಮಂಡಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಹುಬ್ಬಳ್ಳಿ– ಹೊಸಪೇಟೆ ಜೋಡಿ ರೈಲು ಮಾರ್ಗ ಕಾಮಗಾರಿ 2019–20ಕ್ಕೆ ಪೂರ್ಣಗೊಳ್ಳಲಿದೆ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.