ADVERTISEMENT

ಜೀವಜಲದ ಸದ್ಬಳಕೆ ಅಗತ್ಯ: ಶಾಸಕ ಹಿಟ್ನಾಳ್‌

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 8:31 IST
Last Updated 20 ಮಾರ್ಚ್ 2017, 8:31 IST

ಕೊಪ್ಪಳ: ಮನುಷ್ಯ ಜೀವಕ್ಕೆ ಅತ್ಯವಶ್ಯವಿರುವ ಜೀವ ಜಲವನ್ನು ಸದ್ಬಳಕೆ ಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್‌ ಹೇಳಿದರು.

ತಾಲ್ಲೂಕಿನ ಕಾತರಕಿ-–ಗುಡ್ಲಾನೂರ್ ಗ್ರಾಮದಲ್ಲಿ ಕೆ.ಆರ್.ಡಿ.ಎಲ್ ನಿಂದ  ನಿರ್ಮಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ಸತತ ಬರದಿಂದಾಗಿ ನದಿ ತೀರದಲ್ಲಿರುವ ಗ್ರಾಮಗಳಿಗೂ ಕೂಡ ಕುಡಿಯುವ ನೀರಿನ ತೊಂದರೆ ಉಂಟಾಗಿದೆ. ಪ್ರತಿಯೊಬ್ಬರು ನೀರಿನ ಸರಿಯಾದ ಉಪಯೋಗ ಮಾಡಿಕೊಳ್ಳಬೇಕು. ಜಾನುವಾರುಗಳಿಗೆ ಮೇವು ಹಾಗೂ ನೀರಿನ ಕೊರತೆ ಉಂಟಾಗದಂತೆ ಸರ್ಕಾರದಿಂದ ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಕ್ಷೇತ್ರದ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಈಗಾಗಲೆ ಸೂಚಿಸಲಾಗಿದೆ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜುಲ್ಲು ಖಾದರ ಖಾದ್ರಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಲಮ್ಮ ಮಾಹಾತಪ್ಪ, ತಾಲ್ಲೂಕ ಪಂಚಾಯಿತಿ ಸದಸ್ಯೆ ಗುರುದೇವಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರೆಡ್ಡಿ, ಮುಖಂಡರಾದ ವೆಂಕನಗೌಡ ಹಿರೇಗೌಡ್ರ, ಪ್ರಸನ್ನ ಗಡಾದ, ಸೋಮಣ್ಣ ಬಾರಕೇರ, ಬಾಳಪ್ಪ ಬಾರಕೇರ, ಶಂಕರಗೌಡ ಹಿರೇಗೌಡ್ರ, ಯಲ್ಲನಗೌಡ ಮಾಲಿ ಪಾಟೀಲ್, ನಾಗರಾಜ ಹುರಕಡ್ಲಿ, ಬಸವರಾಜ ಅಂಗಡಿ, ವಕ್ತಾರ ಅಕ್ಬರ್ ಪಾಷಾ ಪಲ್ಟನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.