ADVERTISEMENT

‘ಮನ್‌ ಕಿ ಬಾತ್ ಮಲ್ಲಮ್ಮ ’ಅನುತ್ತೀರ್ಣ

​ಪ್ರಜಾವಾಣಿ ವಾರ್ತೆ
Published 14 ಮೇ 2017, 8:27 IST
Last Updated 14 ಮೇ 2017, 8:27 IST

ಗಂಗಾವತಿ: ವೈಯಕ್ತಿಕ ಶೌಚಾಲಯಕ್ಕಾಗಿ ಹೋರಾಟ ಮಾಡುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮನ್‌ ಕಿ ಬಾತ್‌ ವೇಳೆ ರಾಷ್ಟ್ರದ ಗಮನ ಸೆಳೆದಿದ್ದ ತಾಲ್ಲೂಕಿನ ಢಣಾಪುರ ಗ್ರಾಮದ ಸ್ವಚ್ಛತಾ ರಾಯಭಾರಿ ಮಲ್ಲಮ್ಮ, ಹತ್ತನೇ ತರಗತಿಯಲ್ಲಿ ಅನುತ್ತೀರ್ಣರಾಗಿದ್ದಾಳೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಲ್ಲಮ್ಮ, ಪರೀಕ್ಷೆ ಚೆನ್ನಾಗಿ ಮಾಡಿದ್ದೆ. ಉತ್ತಮ ಫಲಿತಾಂಶ ನಿರೀಕ್ಷಿಸಿದ್ದೆ. ಆದರೆ ಅನುತ್ತೀರ್ಣವಾಗಿದ್ದು, ಬೇಸರವಿಲ್ಲ. ಕಳೆಗುಂದುವುದಿಲ್ಲ. ಮತ್ತೆ ಪರೀಕ್ಷೆ ಬರೆದು ಪಾಸು ಮಾಡುವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾಳೆ.

ಕನ್ನಡದಲ್ಲಿ 125 ಅಂಕಕ್ಕೆ 82, ಇಂಗ್ಲೀಷ್ -51, ಹಿಂದಿ -63, ವಿಜ್ಞಾನ -59, ಸಮಾಜವಿಜ್ಞಾನ -68, ಆಂತರಿಕ ಅಂಕ (20) ಸೇರಿ ಗಣಿತದಲ್ಲಿ -36 ಅಂಕಪಡೆಯುವ ಮೂಲಕ ಮಲ್ಲಮ್ಮ ಅನುತ್ತೀರ್ಣಳಾಗಿದ್ದಾಳೆ.

ADVERTISEMENT

ಪೂರಕ ಪರೀಕ್ಷೆಗೆ 30 ರಿಂದ 45 ದಿನ ಸಮಯವಿದ್ದು, ಶಿಕ್ಷಕರಿಂದ ಮತ್ತೊಮ್ಮೆ ಉತ್ತಮ ತರಬೇತಿ ಪಡೆದು ಪರೀಕ್ಷೆ ಬರೆಯುತ್ತೇನೆ ಎಂದು ಮಲ್ಲಮ್ಮ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಲ್ಲಮ್ಮಳಿಗೆ ಗ್ರಾಮಸ್ಥರು ಧೈರ್ಯ ತುಂಬಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.