ADVERTISEMENT

‘ಮೂರು ವರ್ಷ; ನೂರು ಯೋಜನೆ’

​ಪ್ರಜಾವಾಣಿ ವಾರ್ತೆ
Published 27 ಮೇ 2017, 7:39 IST
Last Updated 27 ಮೇ 2017, 7:39 IST

ಗಂಗಾವತಿ: ‘ಕೇಂದ್ರದ ಬಿಜೆಪಿ ಸರ್ಕಾರ ಕೇವಲ ಮೂರು ವರ್ಷ ಪೂರೈಸಿದೆ. ಆದರೆ ಚುನಾವಣೆ ಪೂರ್ವದಲ್ಲಿ ಕೊಟ್ಟ ಮಾತಿನಂತೆ ಮೋದಿ ಸರ್ಕಾರ ನಡೆಯುತ್ತಿದ್ದು, ನೂರು ಯೋಜನೆ ಜಾರಿಯಾಗಿವೆ’ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷೆ ಭಾರತಿಶೆಟ್ಟಿ ಹೇಳಿದರು.

‘ಕೇಂದ್ರ ಸರ್ಕಾರದ ಮೂರು ವರ್ಷ ಪೂರೈಸಿದ ಅಂಗವಾಗಿ ಇಲ್ಲಿನ ಕೆಇಬಿ ಕಾಲೊನಿ ಗಣೇಶ ದೇವಸ್ಥಾನದಲ್ಲಿ  ಪೂಜೆ ಸಲ್ಲಿಸಿ, ದೇವಸ್ಥಾನದ ಆವರಣ ಸ್ವಚ್ಛಗೊಳಿಸಿದರು. ಸಸಿ ನೆಟ್ಟರು.

ಬಳಿಕ ಭಾರತಿಶೆಟ್ಟಿ ಮಾತನಾಡಿ, ‘ನರೇಂಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ದೇಶದ ಚಿತ್ರಣ ಬದಲಾಗಿದೆ. ದೇಶ ಸದೃಢವಾಗುವತ್ತ ಹೆಜ್ಜೆ ಇಡುತ್ತಿದೆ. ದೇಶದ ಆಂತರಿಕ ಹಾಗೂ ಬಾಹ್ಯ ಭದ್ರತೆ ಹೆಚ್ಚಾಗಿದ್ದು, ಸೈನಿಕರಲ್ಲಿ ಆತ್ಮವಿಶ್ವಾಸ ಮೂಡುತ್ತಿದೆ. ಯೋಜನೆಗಳ ಮೂಲಕ ಪ್ರಧಾನಿ ಬಡ ಜನರನ್ನು ತಲುಪುತ್ತಿದ್ದಾರೆ.

ADVERTISEMENT

ಮುಂದಿನ ಏಳು ವರ್ಷಗಳಲ್ಲಿ ದೇಶದ ಭವಿಷ್ಯ ಬದಲಾಗಲಿದ್ದು, ಭಾರತ ಸೂಪರ್ ಪವರ್ ರಾಷ್ಟ್ರವಾಗಲಿದೆ’ ಎಂದರು. ಶ್ರೀಕೃಷ್ಣ ದೇವರಾಯ ವೃತ್ತದಲ್ಲಿ ಕೇಂದ್ರ ಸರ್ಕಾರದ ಸಾಧನೆ ಸಂಭ್ರಮ ಆಚರಿಸಲಾಯಿತು.

ಮಾಜಿ ಸಂಸದ ಶಿವರಾಮಗೌಡ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ,  ಮುಖಂಡ ತಿಪ್ಪೇರುದ್ರಸ್ವಾಮಿ ಮಾತನಾಡಿದರು. 

ಕಾಡಾ ಮಾಜಿ ಅಧ್ಯಕ್ಷ ಎಚ್.ಗಿರೇಗೌಡ, ಉದ್ಯಮಿ ಎಚ್‌.ಆರ್.ಚನ್ನಕೇಶವ, ಪದಾಧಿಕಾರಿಗಳಾದ ಸುಜಾತಾ ಪಾಟೀಲ್, ಮಧುರಾಕರ್ಣಂ, ಶೋಭಾನಗರಿ, ರಾಜೇಶ್ವರಿ ಸುರೇಶ, ಲಕ್ಷ್ಮಿದೇವಿ ಪೂಜಾರ, ಲಕ್ಷ್ಮಿ ಹೊರಪ್ಯಾಟಿ, ಸೈಯದ್ ಅಲಿ, ಶಿವರಾಜಗೌಡ, ವಿರೇಶ ಬಲ್ಕುಂದಿ, ಕಾಶಿನಾಥ ಚಿತ್ರಗಾರ, ಸಂಗಯ್ಯಸ್ವಾಮಿ, ಅಂಬಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.