ADVERTISEMENT

ಯಥಾಸ್ಥಿತಿ ಕಾಪಾಡುವಲ್ಲಿ ವಿಫಲ: ದೂರು

ಹೊ.ಸ.ನ.ಮೂರ್ತಿ
Published 17 ನವೆಂಬರ್ 2017, 7:03 IST
Last Updated 17 ನವೆಂಬರ್ 2017, 7:03 IST

ಕನಕಗಿರಿ: ಸಮೀಪದ ತಿಪ್ಪನಾಳ ಗ್ರಾಮದ ಸರ್ವೆ ನಂಬರ್ 29/ಎ, 29/ಬಿ, 36, 35/1 ಹಾಗೂ 35/2 , 36/1ರ 49 ಎಕರೆ ಪ್ರದೇಶದಲ್ಲಿ ಯಥಾಸ್ಥಿತಿ ಕಾಪಾಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಡಿ. ಎಚ್‌. ಪೂಜಾರ ದೂರಿದರು.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಸೇರಿದಂತೆ ಜಿಲ್ಲೆಯ ವಿವಿಧ ಪ್ರಗತಿ ಪರ ಸಂಘಟನೆಗಳ ಆಶ್ರಯದಲ್ಲಿ 26 ದಲಿತ ಕುಟುಂಬಗಳು ಇಲ್ಲಿನ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರದಿಂದ ಆರಂಭಿಸಿದ ಧರಣಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ರಾಜ್ಯ ಸಂಚಾಲಕ ಸಿರಿಮನಿ ನಾಗರಾಜ ಮಾತನಾಡಿ ತಿಪ್ಪನಾಳ ಗ್ರಾಮದ ಭೂಮಿ ವಿವಾದ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ. 2ರಂದು ಬೆಂಗಳೂರಿನಲ್ಲಿ ಸಭೆ ಕರೆದಿದ್ದು ದಲಿತರಿಗೆ ನ್ಯಾಯ ಒದಗಿಸುವ ವಿಶ್ವಾಸ ಇದೆ ಎಂದರು.

ADVERTISEMENT

ಪ್ರಮುಖರಾದ ಸ್ವರ್ಣಭಟ್‌, ಮಂಜುಳಾ, ಪದ್ಮಾವತಿ, ಚನ್ನಮ್ಮ , ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹೇಮರಾಜ ವೀರಾಪುರ ಅವರು ಸಹ ಅಧಿಕಾರಿಗಳ ಕಾರ್ಯ ವೈಖರಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ನಾಗೇಶ ಬಡಿಗೇರ, ಸಾಗುವಳಿ ದಾರರಾದ ಪಾಮಣ್ಣ, ಪಂಪಾಪತಿ ಜಾಲಿಹಾಳ, ಸಣ್ಣ ನಾಗೇಶ ಬಡಿಗೇರ, ಹುಲಿಗೆಮ್ಮ, ಮರಿಯಮ್ಮ, ಸಿದ್ದಮ್ಮ ಪ್ರಮುಖರಾದ ನೀಲಕಂಠ ಬಡಿಗೇರ, ಪಾಂಡಪ್ಪ, ಬಸಪ್ಪ ಅರಳಿಗನೂರು, ಕುಮಾರಸ್ವಾಮಿ, ವೆಂಕಟೇಶ ಬಡಿಗೇರ, ರಮೇಶ ಇದ್ದರು,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.