ADVERTISEMENT

ಶಾಲಾ ಮಕ್ಕಳಿಗೆ ಐದು ದಿನ ಹಾಲು: ಇಂದಿನಿಂದ ಜಾರಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 5:40 IST
Last Updated 17 ಜುಲೈ 2017, 5:40 IST

ಕುಷ್ಟಗಿ: ಕ್ಷೀರಭಾಗ್ಯ ಯೋಜನೆಯಲ್ಲಿ 1–10ನೇ ತರಗತಿವರೆಗಿನ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮೂರು ದಿನಗಳ ಬದಲಾಗಿ ಐದು ದಿನಗಳವರೆಗೆ ಹಾಲು ವಿತರಿಸಲು ಸರ್ಕಾರ ಕ್ರಮ ಕೈಗೊಂಡಿದ್ದು, ಜುಲೈ 17 ರಿಂದ ಜಾರಿಗೆ ಬರಲಿದೆ.

ಈ ಕುರಿತು ಎಲ್ಲ ಜಿಲ್ಲಾ ಪಂಚಾಯಿ ತಿಗಳು ಹಾಗೂ ಹಾಲು ಮಹಾಮಂಡಳಿ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರದ ಮೂಲಕ ವಿಷಯ ನೆನಪಿಸಿರುವ ಸಾರ್ವ ಜನಿಕ ಶಿಕ್ಷಣ ಇಲಾಖೆ ಆಯುಕ್ತರು, ನಿಗದಿತ ದಿನಗಳಲ್ಲಿ ಬದಲಾದ ಕ್ಷೀರ ಭಾಗ್ಯ ಯೋಜನೆ ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಈವರೆಗೆ ವಾರದ ಮೂರು ದಿನಗಳಲ್ಲಿ ಮಾತ್ರ ಹಾಲು ವಿತರಿಸಲಾಗುತ್ತಿತ್ತು. ಈಗ ಶನಿವಾರ (ಉರ್ದು ಶಾಲೆಗಳಲ್ಲಿ ಶುಕ್ರವಾರ ) ಹೊರತುಪಡಿಸಿ ಒಟ್ಟು ಐದು ದಿನ ಹಾಲು ವಿತರಿಸಲು ಸೂಚಿಸಿದ್ದಾರೆ.

ADVERTISEMENT

ಬಳ್ಳಾರಿ ಹಾಲು ಒಕ್ಕೂಟದಿಂದ ಕುಷ್ಟಗಿ ತಾಲ್ಲೂಕಿನಲ್ಲಿ ಈವರೆಗೆ ಪ್ರತಿ ತಿಂಗಳು 10 ಸಾವಿರ ಕೆ.ಜಿ ಪುಡಿ ವಿತರಣೆಯಾಗುತ್ತಿತ್ತು. ಈಗ ಹೆಚ್ಚುವರಿಯಾಗಿ 8,538 ಕೆ.ಜಿ ಪುಡಿ ವಿತರಿಸಲು ಶಿಕ್ಷಣ ಇಲಾಖೆ ಒಕ್ಕೂಟಕ್ಕೆ ಬೇಡಿಕೆ ಸಲ್ಲಿಸಿದೆ.

ಈಗಾಗಲೇ ಮೊದಲಿನ ಬೇಡಿಕೆಯಂತೆ ಹಾಲಿನಪುಡಿಯನ್ನು ಸರಬರಾಜು ಮಾಡಿದ್ದು ಹೆಚ್ಚುವರಿ ಪುಡಿ ಸರಬ ರಾಜಿಗೆ ಒಕ್ಕೂಟ ಸಿದ್ಧತೆ ಮಾಡಿ ಕೊಂಡಿದೆ ಎಂದು ಹಾಲು ಒಕ್ಕೂಟದ ಮೂಲಗಳು ತಿಳಿಸಿವೆ.

ಈ ಕುರಿತು ‘ಪ್ರಜಾವಾಣಿ’ಗೆ ವಿವರಿ ಸಿದ ಬಳ್ಳಾರಿ ರಾಯಚೂರು ಕೊಪ್ಪಳ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಕೃಷ್ಣೇಗೌಡ, ‘ನಿತ್ಯ ಸುಮಾರು 75 ಸಾವಿರ ಲೀಟರ್‌ ಹಾಲು ಹೆಚ್ಚುವರಿಯಾಗಿ ಉಳಿಕೆಯಾಗುತ್ತಿದ್ದು ಅದನ್ನೇ ಮದರ್‌ ಡೇರಿ ಮೂಲಕ ಪುಡಿ ಮಾಡಿಸಿ ವಿತರಿಸುತ್ತಿದ್ದೇವೆ.

ಬಳ್ಳಾರಿ ಒಕ್ಕೂಟದ ವ್ಯಾಪ್ತಿಯ ಶಾಲೆಗಳಿಗೆ ಕ್ಷೀರ ಭಾಗ್ಯ ಯೋಜನೆ ಯಲ್ಲಿ ವಿತರಿಸಬೇಕಿ ರುವ ಒಟ್ಟು ಹಾಲಿನ ಪುಡಿ ಬೇಡಿಕೆ 400 ಮೆಟ್ರಿಕ್‌ ಟನ್‌ ಇದ್ದು 200 ಮೆಟ್ರಿಕ್‌ ಟನ್‌ ಪುಡಿಯನ್ನು ಹೆಚ್ಚುವರಿ ಯಾಗಿ ಪೂರೈ ಸುವಂತೆ ಹಾಲು ಮಹಾ ಮಂಡಳಿಗೆ ಪತ್ರಬರೆದಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.