ADVERTISEMENT

‘ಗ್ರಾಮೀಣ ಕಲೆಗಳನ್ನು ಉಳಿಸಿ, ಬೆಳೆಸಿ

ಮಾಲಗಿತ್ತಿ: ಗ್ರಾಮೀಣ ನಾಟಕೋತ್ಸವ

​ಪ್ರಜಾವಾಣಿ ವಾರ್ತೆ
Published 14 ಜನವರಿ 2018, 10:55 IST
Last Updated 14 ಜನವರಿ 2018, 10:55 IST
ಹನುಮಸಾಗರ ಸಮೀಪದ ಮಾಲಗಿತ್ತಿ ಗ್ರಾಮದಲ್ಲಿ ಈಚೆಗೆ ಮಾಜಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಕಲಾವಿದರನ್ನು ಸನ್ಮಾನಿಸಿದರು
ಹನುಮಸಾಗರ ಸಮೀಪದ ಮಾಲಗಿತ್ತಿ ಗ್ರಾಮದಲ್ಲಿ ಈಚೆಗೆ ಮಾಜಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಕಲಾವಿದರನ್ನು ಸನ್ಮಾನಿಸಿದರು   

ಹನುಮಸಾಗರ: ‘ಮರೆಯಾಗುತ್ತಿರುವ ಗ್ರಾಮೀಣ ಕಲೆಗಳನ್ನು ಉಳಿಸಿ, ಬೆಳೆಸುವಲ್ಲಿ ವಿವಿಧ ಕಲಾ ತಂಡಗಳು ಮತ್ತು ಗ್ರಾಮೀಣ ಕಲಾವಿದರು ಮಾಡುತ್ತಿರುವ ಪ್ರಯತ್ನ ಶ್ಲಾಘನೀಯ’ ಎಂದು ಮಾಜಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.

ಮಾಲಗಿತ್ತಿ ಗ್ರಾಮದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಭಗೀರಥ ಶಿಕ್ಷಣ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಈಚೆಗೆ ಆಯೋಜಿಸಲಾಗಿದ್ದ ನಾಟಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

‘ಅನಾದಿ ಕಾಲದಿಂದಲೂ ಗ್ರಾಮಸ್ಥರಿಗೆ ರಂಜನೆ ನೀಡುತ್ತಿರುವ ನಾಟಕಗಳು, ಜನಪದಗಳು, ಲಾವಣಿಗಳು, ಬಯಲಾಟ, ದೊಡ್ಡಾಟ, ದಪ್ಪಿನಾಟಕ, ಶ್ರೀಕೃಷ್ಣ ಪಾರಿಜಾದಂತಹ ಕಲಾ ಪ್ರಕಾರಗಳು ನಿಧಾನಕ್ಕೆ ಕಣ್ಮರೆಯಾಗುತ್ತಿವೆ’ ಎಂದರು.

ADVERTISEMENT

ಎಲ್ಲ ಕಲಾ ಪ್ರಕಾರಗಳು ಮರೆಯಾಗಲು ಟಿವಿ ಮುಖ್ಯ ಕಾರಣ. ಕಲಾಪ್ರಕಾರ ಉಳಿಸಿಕೊಂಡು ಕಲಾವಿ ದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯುವಕರು ಶ್ರಮಿಸಬೇಕು. ಈ ನಿಟ್ಟಿನಲ್ಲಿ ಅವರದ್ದು ಪ್ರಮುಖ ಪಾತ್ರವಿದೆ’ ಎಂದು ಅವರು ತಿಳಿಸಿದರು.

ಹಾಸ್ಯ ಕಲಾವಿದ ಜೀವನಸಾಬ ಬಿನ್ನಾಳ ಮಾತನಾಡಿದರು. ಜಮುರಾ ಸುತ್ತಾಟ ತಂಡದವರು ಶರಣಪಥ ಕ್ರಾಂತಿಪಥ ಹಾಗೂ ನವಿಲೂರ ನಿಲ್ದಾಣ ಎಂಬ ನಾಟಕಗಳನ್ನು ಪ್ರದರ್ಶಿಸಿದರು. ಹಾಸ್ಯ ಕಲಾವಿದ ಜೀವನಸಾಬ ಬಿನ್ನಾಳ ಜನಪದ ಪ್ರಸ್ತುತಪಡಿಸಿದರು

ತಾಪಂ ಸದಸ್ಯ ರಾವ್‌ಸಾಹೇಬ್‌ ದೇಸಾಯಿ ಅಧ್ಯಕ್ಷತೆವಹಿಸಿದ್ದರು. ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಪರಸಪ್ಪ ಗುಜಮಾಗಡಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿಂಗಪ್ಪ ಬಂಡರಗಲ್‌, ಪ್ರಮುಖರಾದ ದೇವೇಂದ್ರಪ್ಪ ತಳ್ಳಿಹಾಳ, ಬಸವರಾಜ ವಾಲಿಕಾರ, ನಾಗಪ್ಪ ತೆವರನ್ನವರ, ಕಲ್ಲಪ್ಪ ಕಂದಕೂರ, ಶರಣಗೌಡ ಪಾಟೀಲ, ಪಂಚಾಕ್ಷರಿ ಹಿರೇಮಠ, ಯಮನೂರಪ್ಪ ಹನುಮಸಾಗರ, ವೀರಯ್ಯ ಜ್ಯೋತಿ, ಶಿವಯ್ಯ ಗಡೇದಾರ, ದೇವೇಂದ್ರಪ್ಪ ದಂಡಿನ, ರಮೇಶ ಚವಾಣ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.