ADVERTISEMENT

ಕುಡಿಯುವ ನೀರಿಗೂ ಬಂದಿದೆ ‘ಬರ’

ಬಸವರಾಜ ಹವಾಲ್ದಾರ
Published 15 ಏಪ್ರಿಲ್ 2017, 5:14 IST
Last Updated 15 ಏಪ್ರಿಲ್ 2017, 5:14 IST
ಮಂಡ್ಯ ತಾಲ್ಲೂಕಿನ ಹನಗನಹಳ್ಳಿ ಗ್ರಾಮದಲ್ಲಿ ನೀರಿಗಾಗಿ ಕಾಯುತ್ತಿರುವ ಮಹಿಳೆಯರ ದಂಡು
ಮಂಡ್ಯ ತಾಲ್ಲೂಕಿನ ಹನಗನಹಳ್ಳಿ ಗ್ರಾಮದಲ್ಲಿ ನೀರಿಗಾಗಿ ಕಾಯುತ್ತಿರುವ ಮಹಿಳೆಯರ ದಂಡು   

ಮಂಡ್ಯ: ಬರ, ಬೇಸಿಗೆಯ ಬಿಸಿಲಿನ ತಾಪ, ಅಂತರ್ಜಲ ಮಟ್ಟದ ಕುಸಿತ, ಖಾಲಿಯಾದ ಕೆರೆಗಳಿಂದಾಗಿ ಜನರು ಹಾಗೂ ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಜೀವಜಲಕ್ಕಾಗಿ ಜಿಲ್ಲೆಯಲ್ಲಿ ಹಾಹಾಕಾರ ಉಂಟಾಗಿದೆ.

ಏಪ್ರಿಲ್‌ ಆರಂಭದ ವೇಳೆಗೆ ಜಿಲ್ಲೆಯ 98 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. 86 ಗ್ರಾಮಗಳಿಗೆ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ 3,77 ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ಎದುರಾಗಬಹುದು ಎಂದು ಅಂದಾಜಿಸಲಾಗಿದೆ.
ಜಿಲ್ಲೆಯಲ್ಲಿ ಈ ವರ್ಷ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ 8,31 ಕೊಳವೆಬಾವಿಗಳನ್ನು ಕೊರೆಯಿಸಲಾಗಿದೆ. ಅದರಲ್ಲಿ 5,53 ಕೊಳವೆಬಾವಿಗಳಲ್ಲಿ ನೀರು ಬಂದಿದ್ದು, ಉಳಿದ 2,78 ಕೊಳವೆಬಾವಿಗಳು ವಿಫಲವಾಗಿದೆ.

ನಾಗಮಂಗಲ ತಾಲ್ಲೂಕಿನಲ್ಲಿ 69, ಮದ್ದೂರು ತಾಲ್ಲೂಕಿನಲ್ಲಿ 13, ಕೆ.ಆರ್‌. ಪೇಟೆ ತಾಲ್ಲೂಕಿನಲ್ಲಿ ನಾಲ್ಕು, ಪಾಂಡವಪುರ ತಾಲ್ಲೂಕಿನಲ್ಲಿ ಒಂಬತ್ತು, ಮಂಡ್ಯ ತಾಲ್ಲೂಕಿನಲ್ಲಿ ಮೂರು ಗ್ರಾಮಗಳಿಗೆ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಪೂರೈಸಲಾಗುತ್ತಿದೆ.

ADVERTISEMENT

ಜಿಲ್ಲೆಯ 86 ಗ್ರಾಮಗಳಲ್ಲಿ ಸರ್ಕಾರ ಕೊರೆಯಿಸಿದ್ದ ಕೊಳವೆಬಾವಿಗಳ ಜಲಮೂಲ ಬತ್ತಿ ಹೋಗಿದ್ದು, ಜನರ ಕೊಳವೆಬಾವಿಗಳಿಂದ ಕುಡಿಯುವ ನೀರು ಪೂರೈಸಲಾಗುತ್ತಿದೆ. ಮಳವಳ್ಳಿ ತಾಲ್ಲೂಕಿನಲ್ಲಿ 22, ಮಂಡ್ಯದಲ್ಲಿ 14, ಕೆ.ಆರ್‌. ಪೇಟೆಯಲ್ಲಿ 14, ಮದ್ದೂರಿನಲ್ಲಿ ಐದು, ನಾಗಮಂಗದಲ್ಲಿ 19, ಪಾಂಡವಪುರದಲ್ಲಿ ಒಂಬತ್ತು ಹಾಗೂ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಮೂರು ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ.

ಮುಂದಿನ ದಿನಗಳಲ್ಲಿ ಮಂಡ್ಯ ತಾಲ್ಲೂಕಿನ 108, ನಾಗಮಂಗಲ ತಾಲ್ಲೂಕಿನ 85, ಕೆ.ಆರ್‌. ಪೇಟೆ ತಾಲ್ಲೂಕಿನ 83, ಮದ್ದೂರು ತಾಲ್ಲೂಕಿನ 51, ಮಳವಳ್ಳಿ ತಾಲ್ಲೂಕಿನ 21, ಪಾಂಡವಪುರ ತಾಲ್ಲೂಕಿನ 14 ಹಾಗೂ ಶ್ರೀರಂಗಪಟ್ಟಣ ತಾಲ್ಲೂಕಿನ 15 ಹಳ್ಳಿಗಳಲ್ಲಿ ನೀರಿನ ತೊಂದರೆ ಎದುರಾಗಬಹುದು ಎಂದು ಅಂದಾಜಿಸಲಾಗಿದೆ.

ಗ್ರಾಮದಲ್ಲಿನ ಬಾವಿಗಳು ಬತ್ತಿ ಹೋಗುತ್ತಿವೆ. ಕೆರೆಯಲ್ಲಿ ನೀರಿಲ್ಲದೇ ತಿಂಗಳುಗಳೇ ಕಳೆದಿವೆ. ಜನರಿಗಷ್ಟೇ ಅಲ್ಲ, ಜಾನುವಾರುಗಳಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕೊಡ ಹಿಡಿದುಕೊಂಡು ಟ್ಯಾಂಕರ್‌ ಕಾಯುವುದೇ ಜನರ ಕೆಲಸವಾಗಿದೆ.ಮಂಡ್ಯ ನಗರದಲ್ಲಿ ಮೂರು ದಿನಕ್ಕೊಮ್ಮೆ,  ಶ್ರೀರಂಗಪಟ್ಟಣ ತಾಲ್ಲೂಕಿನ ಮಹದೇವಪುರದಲ್ಲಿ ಐದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.