ADVERTISEMENT

ಚಲುವರಾಯಸ್ವಾಮಿ ವಿರುದ್ಧ ಶ್ರೀಕಂಠೇಗೌಡ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 27 ಮೇ 2017, 5:43 IST
Last Updated 27 ಮೇ 2017, 5:43 IST

ಮಂಡ್ಯ: ‘ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಸಚಿವ ದಿವಂಗತ ಎಸ್‌.ಡಿ.ಜಯರಾಂ ಅವರ ನಡುವೆ ರಾಮಾಂಜನೇಯ ಸಂಬಂಧ ಇತ್ತು. ಅವರ ಬಗ್ಗೆ ಮಾತನಾಡುವ ನೈತಿಕತೆ ಶಾಸಕ ಎನ್‌.ಚಲುರಾಯಸ್ವಾಮಿ ಅವರಿಗೆ ಇಲ್ಲ’ ಎಂದು ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತ ನಾಡಿ, ‘ಎಚ್‌.ಡಿ. ದೇವೇಗೌಡ ಅವರನ್ನು ಜಿಲ್ಲೆಗೆ ಪರಿಚಯ ಮಾಡಿದ್ದೇ ಎಸ್‌.ಡಿ.ಜಯರಾಂ ಎಂದು ಚಲುವರಾಯಸ್ವಾಮಿ ಹೇಳಿಕೆ ನೀಡಿ ದ್ದಾರೆ. ಜಯರಾಂ ಕುಟುಂಬ ರಾಜ ಕೀಯವಾಗಿ ಬೆಳೆಯಲು ಮುಳ್ಳಾಗಿದ್ದ ಚಲುವರಾಯಸ್ವಾಮಿ ಈಗ ಮೊಸಳೆ ಕಣ್ಣೀರಿಡುತ್ತಿದ್ದಾರೆ. ಜಯರಾಂ ಕುಟುಂಬಕ್ಕೆ 4 ಬಾರಿ ಟಿಕೆಟ್‌ ತಪ್ಪಿಸಿದ್ದಕ್ಕೆ ನಾನೇ ಸಾಕ್ಷಿ. ಆ ಕುಟುಂಬ ರಾಜಕೀಯ ವಾಗಿ ಹಿಂದೆ ಸರಿಯಲು ಚಲುವರಾಯ ಸ್ವಾಮಿಯೇ ಕಾರಣ’ ಎಂದು ಹೇಳಿದರು.

‘ಪಕ್ಷದಿಂದ ಹೊರ ಹೋದ ನಂತರ ಚಲುವರಾಯಸ್ವಾಮಿ ಅವರಿಗೆ ನಮ್ಮ ಪಕ್ಷದ ಶಾಸಕ ಸ್ಥಾನ ಏಕೆ ಬೇಕು. ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಅಡ್ಡ ಮತದಾನ ಮಾಡಿದ ಅವರಿಗೆ ನಿಜವಾದ ಸ್ವಾಭಿಮಾನ ಇದ್ದರೆ ರಾಜೀನಾಮೆ ನೀಡಲಿ. ಸಿದ್ದರಾಮಯ್ಯ, ಶ್ರೀನಿವಾಸ್‌ ಪ್ರದಾದ್‌ರಂತೆ ರಾಜೀನಾಮೆ ನೀಡಿ ಹೊರ ಹೋಗಲಿ. ಪಕ್ಷದ ಅಭಿ ವೃದ್ಧಿಗೆ ಶ್ರಮಿಸಿದ ಬಿ.ಎಂ.ಫಾರೂಕ್‌ ಅವರ ವಿರುದ್ಧ ಅಡ್ಡ ಮತದಾನ ಮಾಡಿದ್ದು ಎಷ್ಟು ಸರಿ’ ಎಂದರು.

ADVERTISEMENT

‘ಮುಂಬರುವ ಚುನಾವಣೆಯಲ್ಲಿ ಜಯರಾಂ ಕುಟುಂಬದ ಅಶೋಕ್‌ ಜಯರಾಂಗೆ ಟಿಕೆಟ್‌ ನೀಡುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. ಅವರ ಕುಟುಂಬಕ್ಕೆ ರಾಜಕೀಯ ಪುನರ್ಜನ್ಯ ನೀಡಲು ಪಕ್ಷ ಇಂದಿಗೂ ಪ್ರಯತ್ನಿಸು ತ್ತಿದೆ. ಆದರೆ, ಚಲುವರಾಯಸ್ವಾಮಿ ಅವರ ಕುಟುಂಬವನ್ನು ರಾಜಕೀಯವಾಗಿ ಬೆಳೆಯಲು ಬಿಡಲಿಲ್ಲ.

ಚನ್ನರಾಯಪಟ್ಟಣ ದಲ್ಲಿ ಗುತ್ತಿಗೆದಾರರಾಗಿದ್ದ ಇವರನ್ನು ಮಂಡ್ಯ ಜಿಲ್ಲಾ ಪಂಚಾಯಿತಿಗೆ ಕರೆತಂದು ಗೆಲ್ಲಿಸಿ ಉಪಾಧ್ಯಕ್ಷ ಸ್ಥಾನ ನೀಡಿದ್ದು ಎಚ್.ಡಿ.ದೇವೇಗೌಡರು ಎಂಬುದನ್ನು ಅವರು ಮರೆಯಬಾರದು’ ಎಂದರು.ವಿಧಾನಪರಿಷತ್‌ ಸದಸ್ಯ ಅಪ್ಪಾಜಿಗೌಡ, ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್‌, ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕ ರಮೇಶ್‌, ಮುಖಂಡರಾದ ಜವರೇಗೌಡ, ಸಿದ್ದರಾಮೇಗೌಡ ಇದ್ದರು.

ಶ್ರೀಕಂಠೇಗೌಡರಿಗೆ ಏನು ಗೊತ್ತು?
ಮಂಡ್ಯ: ‘ನಾನು ಎಸ್‌.ಡಿ. ಜಯರಾಂ ಕುಟುಂಬಕ್ಕೆ ಅನ್ಯಾಯ ಮಾಡಿರುವ ಬಗ್ಗೆ ಆ ಕುಟುಂಬದ ಸದಸ್ಯರು ಹೇಳಬೇಕು. ಆ ಬಗ್ಗೆ ಮಾತನಾಡಲು ಕೆ.ಟಿ. ಶ್ರೀಕಂಠೇಗೌಡ ಯಾರು? ನಾನು ಜಯರಾಂ ಕುಟುಂಬದ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದೇನೆ. ಆ ಬಗ್ಗೆ ಶ್ರೀಕಂಠೇಗೌಡರಿಗೆ ಏನು ಗೊತ್ತು? ಆ ಕುಟುಂಬದ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ 2018ರ ಚುನಾವಣೆ ಯಲ್ಲಿ ಟಿಕೆಟ್‌ ನೀಡಲಿ’ ಎಂದು ಶಾಸಕ ಎನ್‌.ಚಲುವರಾಯಸ್ವಾಮಿ ಸವಾಲು ಹಾಕಿದರು.

‘ಜಿಲ್ಲೆಯಲ್ಲಿ ನಮ್ಮದೇ ರಾಜಕೀಯ’
ಪ್ರಜಾವಾಣಿ ವಾರ್ತೆ

ಕೊಪ್ಪ: ನಾವು ಜಿಲ್ಲಾ ಮಟ್ಟದಲ್ಲಿ ರಾಜಕೀಯ ಮಾಡುತ್ತೇವೆ. ಒಂದು ಕ್ಷೇತ್ರದಲ್ಲಿ ಮಾತ್ರ ಮಾಡುತ್ತಿಲ್ಲ ಎಂದು ಶಾಸಕ ಎನ್.ಚಲುವರಾಯಸ್ವಾಮಿ ಪರೋಕ್ಷವಾಗಿ ಜೆಡಿಎಸ್‌ ನಾಯಕರಿಗೆ ಟಾಂಗ್‌ ನೀಡಿದರು.

ಬಿದರಕೋಟೆಯಲ್ಲಿ ಮಾತನಾ ಡಿದ ಅವರು, ಚುನಾವಣೆ ವೇಳೆಗೆ ನಮ್ಮ ಸ್ಪಷ್ಟ ರಾಜಕೀಯ ನಿಲುವು ಜನತೆಗೆ ತಿಳಿಯುತ್ತದೆ. ಯಾರು ಜಿಲ್ಲೆಯ ನಾಯಕತ್ವ ವಹಿಸುತ್ತಾರೆ ಎಂಬುವುದು ತಿಳಿಯುತ್ತದೆ. ಯಾವುದೇ ರಾಜಕಾರಣಿ ತಮಟೆ ಬಡಿದುಕೊಂಡರೂ ಅಂತಿಮವಾಗಿ ಮತದಾರರೇ ತಮ್ಮಗಿಷ್ಟ ಬಂದ ಅಭ್ಯರ್ಥಿಗೆ ಮತ ನೀಡುತ್ತಾರೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸಮಾವೇಶ ಮಾಡುತ್ತಿರು ವುದು ಶಕ್ತಿ ಪ್ರದರ್ಶನ ತೋರಿಸುವ ಉದ್ದೇಶದಿಂದ ಅಲ್ಲ. ನಾನು, ಶಾಸಕ ರಮೇಶ್‌ ಬಾಬು ಬಂಡಿಸಿದ್ದೇಗೌಡ, ಸ್ಥಳೀಯ ಮುಖಂಡರು ಸೇರಿದಂತೆ 7 ಶಾಸಕರು ಸೇರಿಕೊಂಡು ಜಿಲ್ಲೆ ನಡೆದು ಬಂದ ಹಾದಿ, ನಮ್ಮಗಳ ಹೋರಾಟದ ಬಗ್ಗೆ ಮತದಾರಿಗೆ ತಿಳಿಸಿ, ಅವರ ವಿಶ್ವಾಸಗಳಿಸಬೇಕಾಗಿದೆ.

ಇದರಿಂದ ಸಮಾವೇಶ ಮಾಡಬೇಕು ಎಂಬುವುದು ನಮ್ಮ ಉದ್ದೇಶವಾಗಿದೆ. ಯಾವುದೇ ರೀತಿಯ ಶಕ್ತಿ ಪ್ರದರ್ಶನ ಮಾಡುವುದು ನಮ್ಮ ಉದ್ದೇಶವಲ್ಲ ಎಂದು ಸ್ಪಷ್ಟಪಡಿಸಿದರು.

ನನ್ನದು ನಾಗಮಂಗಲಕ್ಕೆ ಮಾತ್ರ ರಾಜಕೀಯ ಸಿಮಿತವಾಗಿಲ್ಲ, ಜಿಲ್ಲಾದ್ಯಂತ ರಾಜಕೀಯ ಮಾಡುತ್ತೇನೆ. ಅದರೆ, ನಾಮಮಂಗಲ ಸ್ವಕ್ಷೇತ್ರವಾದ ಕಾರಣ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಮದ್ದೂರಿವ ಸಿದ್ದರಾಜು ಜೆಡಿಎಸ್‌ ಸಂಘಟಿಸಿ ಅಧಿಕಾರ ಹಿಡಿದರು. ಅವರ ಪತ್ನಿ ಕಲ್ಪನಾ ಸಿದ್ದರಾಜು ಅವರಿಗೆ ಟಿಕೇಟ್‌ ನೀಡದೆ ವಂಚಿಸಿರುವುದು ಸರಿಯೇ? ಎಂದು ಜೆಡಿಎಸ್‌ ನಾಯಕರನ್ನು ಪರೋಕ್ಷವಾಗಿ ಪ್ರಶ್ನಿಸಿದರು.

ಶಾಸಕ ಜಿ.ಟಿ.ದೇವೇಗೌಡ ಅನರನ್ನು ಜೆಡಿಎಸ್ ಪಕ್ಷ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಅವರು ನಿಮ್ಮ ಹಾದಿಯೇ ಹಿಡಿಯಲಿದ್ದಾರೆಂದು ಎಂಬ  ಪ್ರಶ್ನೆಗೆ, ಅವರು ನಮ್ಮಗಿಂತ ಹಿರಿಯರಿದ್ದಾರೆ, ಅನುಭವಿಗಳಿದ್ದಾರೆ, ಅಂತವರ ಬಗ್ಗೆ ನಾನು ಮಾತನಾಡುವುದು ಸರಿಯಲ್ಲ ಎಂದಷ್ಟೇ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.