ADVERTISEMENT

ಡಬ್ಬಿಂಗ್‌ ವಿರುದ್ಧದ ಹೇಳಿಕೆ ಖಂಡಿಸಿ ಪ್ರತಿಭಟನೆ

ಕದಂಬ ಸೈನ್ಯ ಕಾರ್ಯಕರ್ತರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 7:08 IST
Last Updated 11 ಮಾರ್ಚ್ 2017, 7:08 IST
ಮಂಡ್ಯ: ಬೇರೆ ಭಾಷೆಗಳ ಸಿನಿಮಾ ಡಬ್ಬಿಂಗ್‌ ಮಾಡಬೇಕು ಎನ್ನುವವರ ನಾಲಿಗೆ ಕತ್ತರಿಸುತ್ತೇನೆ ಎಂದಿದ್ದ ನಟ ಬುಲೆಟ್‌ ಪ್ರಕಾಶ್‌ ಅವರ ಮಾತು ಖಂಡಿಸಿ ಕದಂಬ ಸೈನ್ಯ ಕಾರ್ಯಕರ್ತರು ಶುಕ್ರವಾರ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಪ್ರತಿಭಟಿಸಿದರು. 
 
ಡಬ್ಬಿಂಗ್‌ ಆಗಿರುವ ಚಿತ್ರ  ಪ್ರದರ್ಶಿಸುವ ಚಿತ್ರಮಂದಿರಕ್ಕೆ ಬೆಂಕಿ ಹಾಕುತ್ತೇನೆ ಎಂದು ಹೇಳಿಕೆ ನೀಡುವುದನ್ನು ಬಿಡಬೇಕು. ಬೇರೆ ಭಾಷೆಗಳ ಚಲನಚಿತ್ರ ಪ್ರದರ್ಶನವನ್ನು ಅದನ್ನು ಏಕೆ ಪ್ರಶ್ನಿಸುವುದಿಲ್ಲ ಎಂದು ಕೇಳಿದರು.
 
ಡಬ್ಬಿಂಗ್‌ನಿಂದ ಕನ್ನಡ ಸಂಸ್ಕೃತಿ ನಾಶ ಆಗುವುದಿಲ್ಲ. ಎಲ್ಲಾ ಭಾಷೆಯಲ್ಲಿಯೂ ಬೇರೆ ಭಾಷೆ ಚಿತ್ರಗಳು ಡಬ್ಬಿಂಗ್‌ ಆಗುತ್ತವೆ. ಕನ್ನಡಕ್ಕೆ ಏಕೆ ಬೇಡ ಎಂದು ಹೇಳಿದರು.
 
ಕದಂಬ ಸೈನ್ಯದ ರಾಜ್ಯ ಘಟಕದ ಅಧ್ಯಕ್ಷ ಬೇಕ್ರಿ ರಮೇಶ್‌್, ಉಮ್ಮಡಹಳ್ಳಿ ನಾಗೇಶ್‌, ಟೈಲರ್‌ ವೆಂಕಟಪ್ಪ, ಚಂದ್ರಶೇಖರ್‌, ಪಿ.ಮೋಹನ್‌, ಕೆ.ಸಿ.ಯೋಗೇಶ್‌  ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.