ADVERTISEMENT

ನಿಗೂಢ ರೋಗ; 20 ಕುರಿಗಳ ಸಾವು

ಸಾವನ್ನಪ್ಪುವ ಮೊದಲು ಬಾಯಿ, ಮೂಗಿನಲ್ಲಿ ರಕ್ತ ಸೋರಿಕೆ; ಕುರಿಗಾರರ ಆತಂಕ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2017, 6:58 IST
Last Updated 14 ಫೆಬ್ರುವರಿ 2017, 6:58 IST
ಶ್ರೀರಂಗಪಟ್ಟಣ ತಾಲ್ಲೂಕು ಮಹದೇವಪುರ ಬಳಿ ಬೀಡುಬಿಟ್ಟಿರುವ, ಶಿರಾ ತಾಲ್ಲೂಕು ತರೂರು ಗ್ರಾಮದ ಕುರಿಗಾಹಿಗಳ ಮಂದೆಯಲ್ಲಿದ್ದ ಕುರಿಗಳು ಭಾನುವಾರ ಮುಂಜಾನೆ ಕಾಯಿಲೆಯಿಂದ ಮೃತಪಟ್ಟಿವೆ
ಶ್ರೀರಂಗಪಟ್ಟಣ ತಾಲ್ಲೂಕು ಮಹದೇವಪುರ ಬಳಿ ಬೀಡುಬಿಟ್ಟಿರುವ, ಶಿರಾ ತಾಲ್ಲೂಕು ತರೂರು ಗ್ರಾಮದ ಕುರಿಗಾಹಿಗಳ ಮಂದೆಯಲ್ಲಿದ್ದ ಕುರಿಗಳು ಭಾನುವಾರ ಮುಂಜಾನೆ ಕಾಯಿಲೆಯಿಂದ ಮೃತಪಟ್ಟಿವೆ   

ಶ್ರೀರಂಗಪಟ್ಟಣ: ತಾಲ್ಲೂಕಿನ ಮಹದೇವಪುರ ಬಳಿ ಬೀಡುಬಿಟ್ಟಿದ್ದ ಶಿರಾ ತಾಲ್ಲೂಕು ತರೂರು ಗ್ರಾಮದ ಕುರಿಗಾಹಿಗಳ 20 ಕುರಿಗಳು ಭಾನುವಾರ ಮುಂಜಾನೆ ಮೃತಪಟ್ಟಿವೆ.

ಗ್ರಾಮಕ್ಕೆ ಅನತಿ ದೂರದ ಮೇಳಾಪುರ ಸಂಪರ್ಕ ರಸ್ತೆ ಪಕ್ಕದಲ್ಲಿ ಬೀಡುಬಿಟ್ಟಿರುವ ತರೂರು ಗ್ರಾಮದ ಶಿವರಾಜು, ರಂಗನಾಥ, ಪೂಜಾರಪ್ಪ ಮತ್ತು ಮಹಾಲಿಂಗಪ್ಪ ಎಂಬುವವರಿಗೆ ಸೇರಿದ ಕುರಿಗಳು ನಿಗೂಢವಾಗಿ ಅಸು ನೀಗಿವೆ. ಇನ್ನೂ 10ಕ್ಕೂ ಹೆಚ್ಚು ಕುರಿಗಳು ಅಸ್ವಸ್ಥಗೊಂಡಿವೆ. ಕೇವಲ 24 ಗಂಟೆಗಳಲ್ಲಿ ಇಷ್ಟು ಕುರಿಗಳು ಮೃತಪಟ್ಟಿರುವುದು ಕುರಿಗಳ ಮಾಲೀಕರಲ್ಲಿ ಆತಂಕ ಹುಟ್ಟಿಸಿದೆ. ಸ್ಥಳಕ್ಕೆ ಅರಕೆರೆ ಠಾಣೆ ಪೊಲೀಸರು ಭೇಟಿ ನೀಡಿ ಮಹಜರು ನಡೆಸಿದ್ದಾರೆ.

‘ಭಾನುವಾರ ಮುಂಜಾನೆ ನೋಡಿದಾಗ 15ಕ್ಕೂ ಹೆಚ್ಚು ಕುರಿಗಳು ಸತ್ತು ಬಿದ್ದಿದ್ದವು. ನಂತರ ಇನ್ನೂ 5 ಕುರಿಗಳು ಕಣ್ಣ ಮುಂದೆಯೇ ಸಾವನ್ನಪ್ಪಿದವು. ಗಂಟೆಗೆ ಒಂದೊಂದರಂತೆ ಕುರಿಗಳು ಸಾಯುತ್ತಿವೆ. ಸಾಯುವ ಮುನ್ನ ಬಾಯಿ ಮತ್ತು ಮೂಗಿನಲ್ಲಿ ರಕ್ತ ಸೋರುತ್ತಿದೆ.

ಯಾವ ಕಾಯಿಲೆಯಿಂದ ಕುರಿಗಳು ಸಾಯುತ್ತಿವೆ ಎಂಬುದು ಗೊತ್ತಿಲ್ಲ’ ಎಂದು ಶಿವರಾಜು ಹೇಳುತ್ತಾರೆ. ವಿಷಯ ತಿಳಿಸಿದರೂ ಪಶುಪಾಲನಾ ಇಲಾಖೆಯ ಅಧಿಕಾರಿಗಳು ಅಥವಾ ಸಿಬ್ಬಂದಿ ಭೇಟಿ ನೀಡದೇ ಇರುವುದಕ್ಕೆ ಕುರಿಗಾಹಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT