ADVERTISEMENT

ಬರ ಪರಿಸ್ಥಿತಿ ನಿರ್ವಹಿಸಲು ಸಿದ್ಧರಾಗಿ– ಶಾಸಕ

ಗಣರಾಜ್ಯೋತ್ಸವ ಕಾರ್ಯಕ್ರಮ: ಅಧಿಕಾರಿಗಳಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2017, 9:42 IST
Last Updated 27 ಜನವರಿ 2017, 9:42 IST
ಬರ ಪರಿಸ್ಥಿತಿ ನಿರ್ವಹಿಸಲು ಸಿದ್ಧರಾಗಿ– ಶಾಸಕ
ಬರ ಪರಿಸ್ಥಿತಿ ನಿರ್ವಹಿಸಲು ಸಿದ್ಧರಾಗಿ– ಶಾಸಕ   

ಶ್ರೀರಂಗಪಟ್ಟಣ: ಈ ಬಾರಿ ತೀವ್ರ ಬರ ಗಾಲ ಎದುರಾಗಿದ್ದು, ಬರ ಪರಿಸ್ಥಿತಿ ಎದುರಿಸಲು ತಾಲ್ಲೂಕುಮಟ್ಟದ ಅಧಿ ಕಾರಿಗಳು ಸನ್ನದ್ಧರಾಗಿರಬೇಕು ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಸೂಚಿಸಿದರು.

ಪಟ್ಟಣದ ಸರ್ಕಾರಿ ಜೂನಿಯರ್‌ ಕಾಲೇಜು ಹಿಂಭಾಗದ ತಾಲ್ಲೂಕು ಕ್ರೀಡಾಂಗಣದಲ್ಲಿ ಗುರುವಾರ ತಾಲ್ಲೂಕು ಆಡಳಿತ ಏರ್ಪಡಿಸಿದ್ದ 68ನೇ ಗಣ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೇಸಿಗೆಗೆ ಮುನ್ನವೇ ಕುಡಿಯುವ ನೀರಿನ ಬವಣೆ ಶುರುವಾಗಿದೆ. ಮುಂದಿನ ದಿನಗಳಲ್ಲಿ ತೀವ್ರ ಸಮಸ್ಯೆ ಸೃಷ್ಟಿಯಾಗಲಿದೆ. ಸಮಸ್ಯೆ ಕಾಣಿಸಿಕೊಂಡ ತಕ್ಷಣವೇ ಸ್ಥಳೀಯರು ಮತ್ತು ಅಧಿಕಾರಿ ವರ್ಗ ನನ್ನ ಗಮನಕ್ಕೆ ತರಬೇಕು. ಮೇವು ಬ್ಯಾಂಕ್‌ಗೆ ತಾಲ್ಲೂಕು ಆಡಳಿತ ಹೆಚ್ಚು ಮೇವು ಸಂಗ್ರಹಿಸಬೇಕು. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಪರಿಸ್ಥಿತಿಯನ್ನು ಎದುರಿಸುವ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬಬೇಕು ಎಂದು ಸಲಹೆ ನೀಡಿದರು.

ತಹಶೀಲ್ದಾರ್‌ ಕೆ.ಕೃಷ್ಣ ಐತಿಹಾಸಿಕ ಬತೇರಿಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಸಂವಿಧಾನಗಳ ಆಶಯಗಳನ್ನು ಸಾಕಾರಗೊಳಿಸಲು ಸಂಘಟಿತ ಪ್ರಯತ್ನ ನಡೆಸಬೇಕು ಎಂದರು.

ಪಟ್ಟಣದ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಯಿತು. ತಾಲ್ಲೂಕು ಕ್ರೀಡಾಂಗಣದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ದೇಶಭಕ್ತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಸಿ. ಮರಿಯಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಬಸವರಾಜು, ಕಾರ್ಯನಿರ್ವಾಹಕ ಅಧಿಕಾರಿ ಎಂ.ಎನ್‌. ಮಹದೇವಸ್ವಾಮಿ, ಬಿಇಒ ಸಿ.ಎಂ.ಹೊನ್ನರಾಜು, ಕಸಾಪ ತಾಲ್ಲೂಕು ಅಧ್ಯಕ್ಷ ಸಿದ್ದಲಿಂಗು, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಜೆ.ಶ್ರೀನಿವಾಸ್‌, ತಾಲ್ಲೂಕು ಪಂಚಾಯಿತಿ ಸದಸ್ಯರಾದ ವಾಸು, ರಾಮಕೃಷ್ಣ, ಬಿ.ಎಚ್‌. ಕೋಮಲ, ಪುರಸಭೆ ಸದಸ್ಯ ಎಸ್‌.ನಂದೀಶ್‌ ಇತರರು ಇದ್ದರು.

ಗಂಜಾಂ:  ಗಂಜಾಂನ ಸರ್ದಾರ್‌ಖಾನ್‌ ಮಸೀದಿಯಲ್ಲಿ ಟಿಪ್ಪು ನೌ ಜವಾನ್‌ ಯೂತ್‌ ಕಮಿಟಿ ಏರ್ಪಡಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಏಜಾಸ್‌ಪಾಷ ಧ್ವಜಾರೋಹಣ ನೆರವೇರಿಸಿದರು. ಧರ್ಮಗುರು ಸದ್ದಾಂ ಹುಸೇನ್‌, ಸಲೀಂ, ಮುಜಾಮಿಲ್‌, ನಯಾಜ್‌ ಪಾಷ, ಇಮ್ರಾನ್‌ ಷರೀಫ್‌, ನಾಸಿರ್‌, ಮನ್ಸೂರ್‌ ಇತರರು ಇದ್ದರು.

ನಾಡ ಕಚೇರಿ: ತಾಲ್ಲೂಕಿನ ಗೌರಿಪುರ ನಾಡ ಕಚೇರಿಯಲ್ಲಿ ನಡೆದ ಗಣ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉಪ ತಹಶೀಲ್ದಾರ್‌ ನಾಗರಾಜು ಧ್ವಜಾ ರೋಹಣ ಮಾಡಿದರು. ಡಿ.ಬಸವ ರಾಜು, ರಾಜಣ್ಣ, ಶಂಕರ್‌ ಇದ್ದರು.

ಹಂಗರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾ.ಪಂ.ಸದಸ್ಯ ಉಮೇಶ್‌ ಧ್ವಜಾರೋಹಣ ನೆರವೇರಿಸಿದರು. ಮುಖ್ಯಶಿಕ್ಷಕ ವಿಶ್ವೇಶ್ವರಯ್ಯ, ವಾಣಿಶ್ರೀ, ಎಸ್‌ಡಿಎಂಸಿ ಅಧ್ಯಕ್ಷ ಮರೀಗೌಡ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.