ADVERTISEMENT

ರಾಷ್ಟ್ರಪ್ರಶಸ್ತಿಗೆ ಮಕ್ಕಳಿಂದ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 20 ಮೇ 2017, 6:17 IST
Last Updated 20 ಮೇ 2017, 6:17 IST
ರಾಷ್ಟ್ರಪ್ರಶಸ್ತಿಗೆ ಮಕ್ಕಳಿಂದ ಅರ್ಜಿ ಆಹ್ವಾನ
ರಾಷ್ಟ್ರಪ್ರಶಸ್ತಿಗೆ ಮಕ್ಕಳಿಂದ ಅರ್ಜಿ ಆಹ್ವಾನ   

ಯಾದಗಿರಿ: 2017ನೇ ಸಾಲಿಗೆ ಕಲೆ, ಸಾಂಸ್ಕೃತಿಕ, ಯಾವುದೇ ಕ್ಷೇತ್ರದಲ್ಲಿ ನಾವೀನ್ಯತೆ, ರಾಷ್ಟ್ರೀಯ ಮಟ್ಟದಲ್ಲಿ ತಾರ್ಕಿಕ ಸಾಧನೆ, ಕ್ರೀಡೆ, ಸಮಾಜ ಸೇವೆ, ಸಂಗೀತ ಮತ್ತು ಕೇಂದ್ರ ಆಯ್ಕೆ ಸಮಿತಿಯ ನಿರ್ಧಾರದ ಪ್ರಕಾರ ಮಾನ್ಯತೆಗೆ ಯೋಗ್ಯವಾದ ಯಾವುದೇ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವಂತಹ ಮಕ್ಕಳಿಗೆ ರಾಷ್ಟ್ರ ಪ್ರಶಸ್ತಿ ನೀಡಲಾಗುತ್ತಿದ್ದು, ಅಂತಹ ಮಕ್ಕಳಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅರ್ಜಿ ಆಹ್ವಾನಿಸಿದೆ.

ಭಾರತದಲ್ಲಿ ನೆಲೆಸಿರುವ ಮತ್ತು ಮೇಲ್ಕಂಡ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿರುವ 5ರಿಂದ 18 ವರ್ಷದೊಳಗಿನ (01-08-1999) ನಂತರ ಹುಟ್ಟಿದ ಮಕ್ಕಳು ಅರ್ಹರಾಗಿರುತ್ತಾರೆ. ಈ ರಾಷ್ಟ್ರಮಟ್ಟದ ಪ್ರಶಸ್ತಿಯು ಒಂದು ಚಿನ್ನದ ಪದಕ, ₹20 ಸಾವಿರ ನಗದು, ₹10 ಸಾವಿರ ಮೌಲ್ಯದ ಪುಸ್ತಕ ವೋಚರ್ ಮತ್ತು ಪ್ರಶಸ್ತಿ ಪತ್ರ ಹಾಗೂ 35 ಬೆಳ್ಳಿ ಪದಕ (ಪ್ರತಿ ರಾಜ್ಯ ಕೇಂದ್ರಾಡಳಿತ ಪ್ರದೇಶಕ್ಕೆ ಒಂದು ಬೆಳ್ಳಿ ಪದಕ) ₹10 ಸಾವಿರ ನಗದು, ₹3 ಸಾವಿರ ಮೌಲ್ಯದ ಪುಸ್ತಕ ಪತ್ರ ಒಳಗೊಂಡಿರುತ್ತದೆ.

ಪ್ರಶಸ್ತಿಗೆ ಆಯ್ಕೆಯಾಗುವಂತಹ ಮಕ್ಕಳು ಅಪ್ರತಿಮ ಪ್ರತಿಭೆಯುಳ್ಳವರಾಗಿರಬೇಕು. ಅಸಾಧಾರಣ ಎಂದು ಅವರ ಸಾಧನೆಯನ್ನು ಸಮರ್ಥಿಸಲು ಪೂರಕ ದಾಖಲೆಗಳನ್ನು ಒದಗಿಸಬೇಕು. ಮಕ್ಕಳ ವಯಸ್ಸಿನ ಪ್ರಮಾಣಪತ್ರವನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಪ್ರಶಸ್ತಿಗೆ ಅರ್ಜಿಯನ್ನು ಸಂಬಂಧಿಸಿದ ಜಿಲ್ಲೆಯ ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸ್ತ್ರೀ-ಶಕ್ತಿ ಭವನದಲ್ಲಿ ಪಡೆದು, ಆಂಗ್ಲ ಭಾಷೆಯಲ್ಲಿ ದ್ವಿಪ್ರತಿಯಲ್ಲಿ ಭರ್ತಿ ಮಾಡಿದ ಅರ್ಜಿಗಳನ್ನು ಇದೇ ಮೇ 31ರೊಳಗೆ ಸಂಬಂಧಪಟ್ಟ ಜಿಲ್ಲಾ ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೊಠಡಿ ಸಂಖ್ಯೆ ಸಿ-17 ಜಿಲ್ಲಾ ಆಡಳಿತ ಭವನ ಸಂಕಿರ್ಣ ಚಿತ್ತಾಪುರ ರಸ್ತೆ ,ಯಾದಗಿರಿ ಕಚೇರಿಗೆ ಸಲ್ಲಿಸಲು ಕೋರಿದ್ದಾರೆ. ನಿಗದಿತ ದಿನಾಂಕ ಮೀರಿಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.