ADVERTISEMENT

ಸರ್ಕಾರಿ ಶಾಲೆಯಲ್ಲಿ 11 ಕಂಪ್ಯೂಟರ್ ಕಳವು

​ಪ್ರಜಾವಾಣಿ ವಾರ್ತೆ
Published 4 ಜೂನ್ 2016, 6:35 IST
Last Updated 4 ಜೂನ್ 2016, 6:35 IST

ಕೊಪ್ಪ: ಇಲ್ಲಿಗೆ ಸಮೀಪದ ನಿಲುವಾಗಿಲು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳವು ನಡೆದಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ. ಕಿಟಕಿ ಸರಳು ಮುರಿದು ಒಳನುಗ್ಗಿರುವ ಕಳ್ಳರು 11 ಕಂಪ್ಯೂಟರ್, 6 ತಿಂಕ್ ಲೈಟರ್, 1 ಒಎಚ್‌ಪಿ ಕಳವು ಮಾಡಿ ಪರಾರಿಯಾಗಿದ್ದಾರೆ. ಕಳ್ಳತನ ಯಾವಾಗ ನಡೆದಿದೆ ಎಂಬ ಬಗ್ಗೆ ನಿಖರವಾಗಿ ತಿಳಿದುಬಂದಿಲ್ಲ.

ಬೇಸಿಗೆ ರಜೆ ನಂತರ ಶಾಲೆ ಪ್ರಾರಂಭ ಮಾಡಿದ ಬಳಿಕ ಕಳವು ಪ್ರಕರಣ ತಿಳಿದು ಬಂದಿದೆ. ಕಂಪ್ಯೂಟರ್ ಕೊಠಡಿಯಲ್ಲಿ ಕೆಲವು ಮೌಸ್ ಚಿಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಹಲವು ಸಿಪಿಯು ಕೊಠಡಿಯಲ್ಲಿಯೇ ಇವೆ.

ವಿಷಯ ತಿಳಿದ ನಂತರ ಪೊಲೀಸರು ಶ್ವಾನದಳದೊಂದಿಗೆ ಸ್ಥಳಕ್ಕೆ ಬಂದು ತಪಾಸಣೆ ನಡೆಸಿದರು. ಕಾರಿನಲ್ಲಿ 3 ಅಥವಾ 4 ಮಂದಿ ಬಂದು ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಎಸ್ಐ ರಾಜೇಗೌಡ, ಗ್ರಾ.ಪಂ. ಅಧ್ಯಕ್ಷೆ ಸಹನಾ ನಂಜೇಶ್, ಗ್ರಾಮದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.