ADVERTISEMENT

ಸವಾಲು ಎದುರಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2015, 9:33 IST
Last Updated 1 ಆಗಸ್ಟ್ 2015, 9:33 IST

ಮಂಡ್ಯ: ಪತ್ರಿಕೋದ್ಯಮ ಶರವೇಗದಲ್ಲಿ ಬೆಳೆದಿದ್ದರೂ ಸಮಸ್ಯೆಗಳು ಪರಿಹಾರವಾಗಿಲ್ಲ. ಜತೆಗೆ, ಕ್ಷೇತ್ರದಲ್ಲಿನ ಸವಾಲುಗಳನ್ನು ಎದುರಿಸಲು ಎದೆಗಾರಿಕೆ ಬೇಕು ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಎ. ಪೊನ್ನಪ್ಪ ಹೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಮುದ್ರಣಕಾರರ ವಿವಿಧೋದ್ದೇಶ ಸಹಕಾರ ಸಂಘ ನಗರದ ಗಾಂಧಿ ಭವನದಲ್ಲಿ ಗುರುವಾರ ಏರ್ಪಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಸುದ್ದಿಗೆ ಆದ್ಯತೆ ನೀಡುವ ಧಾವಂತದಲ್ಲಿ ಮಾಧ್ಯಮಗಳು ಎಡವುತ್ತಿವೆ. ಈಚೆಗೆ ಮಾಜಿ ರಾಷ್ಟ್ರಪತಿ ನಿಧನರಾದಾಗ ರಜೆಯ ಘೋಷಣೆ ಬಗ್ಗೆ ಮಾಧ್ಯಮಗಳ ವರದಿ ಜನರಲ್ಲಿ ಗೊಂದಲ ಉಂಟು ಮಾಡಿತ್ತು. ಇದು ಸಮಾಜದ ಸ್ವಾಸ್ಥ್ಯ ಹಾಳು ಮಾಡಿ ವ್ಯಕ್ತಿ ನಿಂದನೆಗೆ ಆಸ್ಪದವಾಗಲಿದೆ ಎಂದದರು.

ರೈತ ಮುಖಂಡ ಕೆ.ಎಸ್‌. ನಂಜುಂಡೇಗೌಡ ಮಾತನಾಡಿ, ಅವೈಜ್ಞಾನಿಕ ಕೈಗಾರಿಕಾ ನೀತಿಯೇ ರೈತರ ಪ್ರಸ್ತುತ ಪರಿಸ್ಥಿತಿಗೆ ಕಾರಣವಾಗಿದೆ ಎಂದು ದೂರಿದರು. ದೇಶಕ್ಕೆ ಅನ್ನ ನೀಡಿದ ರೈತನನ್ನು ಕಡೆಗಣಿಸುತ್ತಿರುವುದು ಶೋಚನೀಯ ಎಂದರು. ನಂತರ ಗಾಂಧಿವಾದಿ ಸುರೇಂದ್ರ ಕೌಲಗಿ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾಧಿಕಾರಿ ಅಜಯ್‌ ನಾಗಭೂಷಣ್‌, ಜಾನಪದ ಪರಿಷತ್‌ ಅಧ್ಯಕ್ಷ ತಿಮ್ಮೇಗೌಡ, ಸಹಕಾರ ಸಂಘದ ಸಂಸ್ಥಾಪನಾ ಅಧ್ಯಕ್ಷ ಕೌಡ್ಲೆ ಚೆನ್ನಪ್ಪ, ಸೌಭಾಗ್ಯಾ ಮಹದೇವು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.