ADVERTISEMENT

ಹುಳು ಬಾಧೆ; ಭತ್ತ ಬೆಳೆದ ರೈತ ಕಂಗಾಲು

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2017, 5:58 IST
Last Updated 20 ನವೆಂಬರ್ 2017, 5:58 IST

ಕೊಪ್ಪ: ಕೊಪ್ಪ ಹೋಬಳಿಯ ಹಲವು ಗ್ರಾಮಗಳಲ್ಲಿ ಭತ್ತದ ಬೆಳೆಗೆ ಸೈನಿಕ ಹುಳುವಿನ ಬಾಧೆ ಕಾಡುತ್ತಿದೆ. ಕಟಾವಿಗೆ ಬಂದಿರುವ ಭತ್ತದ ತೆನೆಗಳನ್ನು ನಾಶ ಮಾಡುತ್ತಿರುವ ಹುಳುಗಳಿಂದ ರೈತರು ಕಂಗಲಾಗಿದ್ದಾರೆ.

ಹೋಬಳಿಯ ಬೆಸಗರಹಳ್ಳಿ, ಕೆರೆಮೇಗಲದೊಡ್ಡಿ, ಈರೇಗೌಡನ ದೊಡ್ಡಿ. ಹೊಸಕೆರೆ, ಬೆಳತೂರು, ಮಹರ್ನವಮಿದೊಡ್ಡಿ. ಹರಳಹಳ್ಳಿ, ನಿಲುವಾಗಿಲು, ಎಸ್‌.ಐ. ಕೋಡಿಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಈ ಸಮಸ್ಯೆ ಎದುರಾಗಿದೆ.

ಭತ್ತದ ತೆನೆಗಳು ಹುಳುಗಳ ಪಾಲಾ ಗುತ್ತಿವೆ. ಕಂಬಳಿ ಹುಳುವಿನಂತಿರುವ ಸೈನಿಕ ಹುಳುಗಳು ಭತ್ತದ ಪೈರಿನ ಕಾಂಡದ ಬಳಿ ರಸ ಹಿರಿಕೊಂಡು ಭತ್ತವನ್ನು ಹುದುರಿಸುತ್ತಿವೆ. ಸದ್ಯ ಈಗ ರಾಕೆಟ್ ಎಂಬ ಔಷದಿಯನ್ನು ಸಿಂಪಡಿಸಲಾಗಿದೆ ಎನ್ನುತ್ತಾರೆ ರೈತರಾದ ನಾರಾಯಣ್‌, ವಿಜಯೇಂದ್ರ, ರಾಧಾಕೃಷ್ಣ. ರಾಕೆಟ್‌ ಎಂಬ ಔಷಧಿಯನ್ನು ಸಿಂಪಡಿಸುವುದರಿಂದ ಈ ಹುಳುಗಳ ಬಾಧೆಯನ್ನು ತಡೆಗಟ್ಟಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ರವಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.