ADVERTISEMENT

ಹೆದ್ದಾರಿ ಕಾಮಗಾರಿ ಆರಂಭ ಶೀಘ್ರ

ಮೈಸೂರು– ಬೆಂಗಳೂರು ಹೆದ್ದಾರಿ ಮೇಲ್ದರ್ಜೆಗೆ; ಡಾ.ಎಚ್.ಸಿ.ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2017, 9:20 IST
Last Updated 2 ಮಾರ್ಚ್ 2017, 9:20 IST

ಭಾರತೀನಗರ: ಬೆಂಗಳೂರು– ಮೈಸೂರು ಹೆದ್ದಾರಿಯ ಅಷ್ಟಪಥದ ಕಾಮಗಾರಿ ಶೀಘ್ರದಲ್ಲೇ ಆರಂಭಗೊಳ್ಳ ಲಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ತಿಳಿಸಿದರು.

ಇಲ್ಲಿನ ಭಾರತೀ ಕಾಲೇಜಿನಲ್ಲಿ ಬುಧವಾರ ಭಾರತೀ ಭವನ ಹಾಗೂ ಕುವೆಂಪು ಸಭಾಂಗಣ ಉದ್ಘಾಟಿಸಿ ಮಾತ ನಾಡಿದ ಅವರು, ಈ ಹೆದ್ದಾರಿ ವಿಸ್ತರಣೆ ಯಿಂದ ಸಂಚಾರದ ಒತ್ತಡ ನಿವಾರಣೆ ಯಾಗಲಿದೆ. ಅಲ್ಲದೆ, ಈ ಭಾಗದ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಹೇಳಿದರು.

ಅಂಬೇಡ್ಕರ್ ಅವರು ಶಿಕ್ಷಣ, ಸಮಾನತೆ, ರಾಜಕೀಯ ಮಹಿಳೆಯರಿಗೆ ದೊರಕಬೇಕೆಂಬ ಆಶಯ ಹೊತ್ತಿದ್ದರು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹಿಳೆಯ ರ ಅಭಿವೃದ್ಧಿಗಾಗಿ ಹಲವು ಯೋಜನೆ ಜಾರಿಗೊಳಿಸಿದೆ ಎಂದರು.

ಮಾಜಿ ಸಂಸದ ಡಾ.ಜಿ.ಮಾದೇ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಮಧು ಜಿ.ಮಾದೇಗೌಡ, ಬಿಇಟಿ ಕಾರ್ಯಾಧ್ಯಕ್ಷ ಬಿ.ಬಸವರಾಜು, ಕಾರ್ಯ ದರ್ಶಿಗಳಾದ ಬಿ.ಎಂ.ನಂಜೇ ಗೌಡ, ಸಿದ್ದೇಗೌಡ, ಜಿ.ಪಂ ಸದಸ್ಯ ಎ.ಎಸ್. ರಾಜೀವ್, ತಾ.ಪಂ ಸದಸ್ಯ ಗಿರೀಶ್, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಹರ್ಷ, ಮುದ್ದಯ್ಯ ಇತರರು ಇದ್ದರು.

ಕಾಮಗಾರಿ ವೀಕ್ಷಣೆ: ಮದ್ದೂರು– ಮಳವಳ್ಳಿ ಮುಖ್ಯರಸ್ತೆ ಕಾಮಗಾರಿ ವೀಕ್ಷಿಸಿದ ಸಚಿವರು, ಕಾಮಗಾರಿಯ ಕುರಿತು ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಪುತ್ರನಿಗೆ ಟಿಕೆಟ್ ಕೇಳಿಲ್ಲ; ಸಚಿವ
ಭಾರತೀನಗರ ‘ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಂದಿಗೂ ನಿರ್ಧಾರ ವಾಗಿಲ್ಲ’ ಎಂದು ಸಚಿವ ಎಚ್.ಸಿ.ಮಹದೇವಪ್ಪ ಇಲ್ಲಿ ಬುಧವಾರ ತಿಳಿಸಿದರು.

‘ಪುತ್ರನಿಗೆ ಟಿಕೆಟ್ ಕೇಳಿಲ್ಲ. ಆದ್ದರಿಂದ ನನ್ನ ಪುತ್ರ ಸ್ಪರ್ಧಿಸುವ ಪ್ರಶ್ನೆ ಬಾರದು. 2018ರ ಚುನಾವಣೆಯಲ್ಲೂ ಕಾಂಗ್ರೆಸ್ ಅಧಿಕಾರ ಪಡೆಯುವುದರಲ್ಲಿ ಅನುಮಾನವಿಲ್ಲ’ ಎಂದರು.

ಕಾಂಗ್ರೆಸ್ಸಿನಲ್ಲಿ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಇವೆಲ್ಲಾ ಊಹಾಪೋಹವಾಗಿದೆ. ಬಿಜೆಪಿಯವರು ಕಾಂಗ್ರೆಸ್ ಅಭಿವೃದ್ಧಿ ಸಹಿಸದೇ ಡೈರಿ ವಿವಾದ ಹುಟ್ಟು ಹಾಕಿದ್ದಾರೆ. ಈ ವಿಚಾರದಲ್ಲಿ ಜನರೇ ಸತ್ಯಾಸತ್ಯತೆ ನಿರ್ಧರಿಸಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT