ADVERTISEMENT

12ರಂದು ಗಂಗಾಧರೇಶ್ವರ ರಥೋತ್ಸವ

ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ: ವಸ್ತುಪ್ರದರ್ಶನ, ಸಾಮೂಹಿಕ ವಿವಾಹ, ರಾಸು ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2017, 10:02 IST
Last Updated 6 ಮಾರ್ಚ್ 2017, 10:02 IST
12ರಂದು ಗಂಗಾಧರೇಶ್ವರ ರಥೋತ್ಸವ
12ರಂದು ಗಂಗಾಧರೇಶ್ವರ ರಥೋತ್ಸವ   
ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿಯ ಗಂಗಾಧರೇಶ್ವರ ರಥೋತ್ಸವವು ಮಾರ್ಚ್‌ 12ರಂದು ಜರುಗಲಿದ್ದು, ಅದರ ಅಂಗವಾಗಿ ವಿವಿಧ ಪೂಜಾ ಕಾರ್ಯಕ್ರಮಗಳು ಈಗಾಗಲೇ ಆರಂಭಗೊಂಡಿವೆ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
 
ಆದಿಚುಂಚನಗಿರಿ ಮಠದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರ್ಚ್‌ 6ರಂದು ಸಂಜೆ 7 ಗಂಟೆಗೆ ಚಂದ್ರಮೌಳೇಶ್ವರಸ್ವಾಮಿ ಉತ್ಸವ ಹಾಗೂ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ನಡೆಯಲಿದೆ ಎಂದರು.
 
ಮಾರ್ಚ್‌ 7ರಂದು ಸಂಜೆ 7ಕ್ಕೆ ಮಲ್ಲೇಶ್ವರ ಸ್ವಾಮಿ ಉತ್ಸವ ಹಾಗೂ ಕಬಡ್ಡಿ ಪಂದ್ಯಾವಳಿ ಸಮಾರೋಪ ಸಮಾರಂಭ ನಡೆಯಲಿದ್ದು, ಸಚಿವರಾದ ಡಿ.ಕೆ.ಶಿವಕುಮಾರ್‌, ರಮೇಶಕುಮಾರ್‌, ಸಂಸದ ಸಿ.ಎಸ್‌.ಪುಟ್ಟರಾಜು ಭಾಗವಹಿಸಲಿದ್ದಾರೆ. 
 
ಮಾರ್ಚ್‌ 8ರಂದು ಬೆಳಿಗ್ಗೆ 10.30ಕ್ಕೆ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಆರಂಭಗೊಳ್ಳಲಿದ್ದು, ಸಚಿವರಾದ ಎಂ.ಕೃಷ್ಣಪ್ಪ, ಕೃಷ್ಣಬೈರೇಗೌಡ, ರಾಜತಾಂತ್ರಿಕ ಅಧಿಕಾರಿ ನವೀನ್‌ ಕುಮಾರ್‌ ಭಾಗವಹಿಸಲಿದ್ದಾರೆ. ಸಂಜೆ 7 ಗಂಟೆಗೆ ಸಿದ್ದೇಶ್ವರಸ್ವಾಮಿ ಉತ್ಸವ ಜರುಗಲಿದೆ ಎಂದರು.
 
ಮಾರ್ಚ್‌ 9ರಂದು ಬೆಳಿಗ್ಗೆ 10.30ಕ್ಕೆ ರಾಸುಗಳ ಪ್ರದರ್ಶನ ಉದ್ಘಾಟನೆ ನಡೆಯಲಿದ್ದು, ಸಚಿವರಾದ ಎ.ಮಂಜು, ಎಸ್‌. ಮಲ್ಲಿಕಾರ್ಜುನ್‌ ಭಾಗವಹಿಸ ಲಿದ್ದಾರೆ. ವಿವಿಧ ತಳಿಯ ರಾಸುಗಳು ಭಾಗವಹಿಸಲಿವೆ. ಸಂಜೆ 7ಕ್ಕೆ ಕಾಲ ಭೈರವೇಶ್ವರಸ್ವಾಮಿ  ಹೂವಿನ ಪಾಲಕಿ. ನಿರ್ಮಲಾನಂದನಾಥ ಸ್ವಾಮೀಜಿ ಮುತ್ತಿನ ಪಾಲಕಿ ಉತ್ಸವ ಜರುಗಲಿದೆ.
 
10ರಂದು ಬೆಳಿಗ್ಗೆ 8 ಗಂಟೆಗೆ ಕಾಲಭೈರವೇಶ್ವರಸ್ವಾಮಿಗೆ ಸುವರ್ಣ ಕವಚ ಅಲಂಕಾರ ಪೂಜೆ, ಗಂಗಾಧರೇಶ್ವರ ಸ್ವಾಮಿಗೆ ರಜತ ನಾಗಾಭರಣ ಅಲಂಕಾರ ಪೂಜೆ, ನಂತರ ಸಾಮೂಹಿಕ ವಿವಾಹ ಮಹೋತ್ಸವ ನಡೆಯಲಿದೆ. ಸಚಿವರಾದ ಟಿ.ಬಿ. ಜಯಚಂದ್ರ, ಕೆ.ಜೆ. ಜಾರ್ಜ್‌, ಎಚ್‌.ಸಿ. ಮಹದೇವಪ್ಪ ಮತ್ತಿತರರು ಭಾಗವ ಹಿಸಲಿದ್ದಾರೆ. ರಾತ್ರಿ 8ಕ್ಕೆ ಶ್ರೀಗಳ ಜ್ವಾಲಾ ಪೀಠಾರೋಹಣ, ಸಿದ್ದಸಿಂಹಾಸನ ಪೂಜೆ, ಚಂದ್ರಮಂಡೋಲತ್ಸವ ನಡೆಯಲಿದೆ.
 
11ರಂದು ರಾತ್ರಿ 8ಕ್ಕೆ ಸರ್ವಧರ್ಮ ಸಮ್ಮೇಳನ ನಡೆಯಲಿದ್ದು, ಸಂಸದ ಎಚ್‌.ಡಿ.ದೇವೇಗೌಡ, ಸಚಿವ ಎಂ.ಬಿ. ಪಾಟೀಲ ಭಾಗವಹಿಸಲಿದ್ದಾರೆ. ವಿವಿಧ ಧರ್ಮ ಗುರುಗಳು ಉಪನ್ಯಾಸ ನೀಡಲಿದ್ದಾರೆ. ನಂತರ ಕಾಲಭೈರವೇಶ್ವರ ತಿರುಗುಣಿ ಉತ್ಸವ, ಪುಷ್ಕರಿಣಿಯಲ್ಲಿ ತೆಪ್ಪೋತ್ಸವ ನಡೆಯಲಿದೆ ಎಂದು ಹೇಳಿದರು.
 
12ರಂದು ಬೆಳಿಗ್ಗೆ 4 ಗಂಟೆಗೆ ಗಂಗಾಧರ ಸ್ವಾಮಿ ರಥೋತ್ಸವ, ನಿರ್ಮಲಾನಂದ ಸ್ವಾಮೀಜಿ ಅವರ ಅಡ್ಡಪಾಲಕಿ ಉತ್ಸವ ನಡೆಯಲಿದೆ. ಸಂಜೆ 6.30ಕ್ಕೆ ಗಿರಿ ಪ್ರದಕ್ಷಿಣೆ, ಸೋಮೇ ಶ್ವರಸ್ವಾಮಿ ಉತ್ಸವ ನಡೆಯಲಿದೆ ಎಂದು ತಿಳಿಸಿದರು. ಮಠದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.