ADVERTISEMENT

3 ತಿಂಗಳಲ್ಲಿ 5 ಕೆರೆಗಳ ಅಭಿವೃದ್ಧಿ: ಶಾಸಕ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2017, 6:19 IST
Last Updated 13 ಏಪ್ರಿಲ್ 2017, 6:19 IST

ಶ್ರೀರಂಗಪಟ್ಟಣ: ಮೂರು ತಿಂಗಳ ಒಳಗೆ ಕ್ಷೇತ್ರದ ಪ್ರಮುಖ 5 ಕೆರೆಗಳನ್ನು ಅಭಿವೃದ್ಧಿ ಮಾಡಲಾಗುವುದು ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.ತಾಲ್ಲೂಕಿನ ವಿವಿಧೆಡೆ ರಸ್ತೆ ಮತ್ತು ಕೆರೆಗಳ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

ನೇರಲಕೆರೆ ಗ್ರಾಮದ ಮರಿಯಯ್ಯನ ಕೆರೆಯನ್ನು ₹ 25 ಲಕ್ಷ, ಹುಲ್ಕೆರೆ ಗ್ರಾಮದ ಕೆರೆಯನ್ನು ₹ 30 ಲಕ್ಷ, ಪೀಹಳ್ಳಿ ಕೆರೆಯನ್ನು ₹ 30 ಲಕ್ಷ, ಬನ್ನಹಳ್ಳಿ ಕೆರೆಯನ್ನು ₹ 30 ಲಕ್ಷ ಹಾಗೂ ಜಕ್ಕನಹಳ್ಳಿ ಕೆರೆಯನ್ನು ₹ 50 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ.

ಸಣ್ಣ ನೀರಾವರಿ ಯೋಜನೆಯಡಿ ಈ ಕೆರೆಗಳ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡಿದ್ದು, ನೇರಲಕೆರೆ ಗ್ರಾಮದ ಮರಿಯಯ್ಯನ ಕೆರೆ ಅಭಿವೃದ್ಧಿಗೆ ಈಗಾಗಲೇ ಹಣ ಬಿಡುಗಡೆಯಾಗಿದೆ. 150/130 ಮೀಟರ್‌ ವಿಸ್ತೀರ್ಣದ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸು ವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.

ADVERTISEMENT

ತಾಲ್ಲೂಕು ಪಂಚಾಯಿತಿ ಸದಸ್ಯ ಎನ್‌.ಪಿ. ಸುರೇಶ್‌, ಗ್ರಾಮ ಪಂಚಾಯಿತಿ ಅಧ್ಯಕ್ಷ ಹೇಮಂತಕುಮಾರ್‌, ಮಾಜಿ ಅಧ್ಯಕ್ಷ ಗಣೇಶಸ್ವಾಮಿ, ಎಪಿಎಂಸಿ ನಿರ್ದೇಶಕ ಮರಿಗೌಡ, ಗಾಮನಹಳ್ಳಿ ಪ್ರಕಾಶ್‌, ಎಂಜಿನಿಯರ್‌ ಸಣ್ಣಕೋಡಿಗೌಡ, ಜೆ. ನವೀನ್‌ ಇದ್ದರು.

ತಾಲ್ಲೂಕಿನ ಚಿನ್ನೇನಹಳ್ಳಿ– ಮಲ್ಲೇಗೌಡನಕೊಪ್ಪಲು– ಗಣಂಗೂರು ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಬುಧವಾರ ಚಾಲನೆ ನೀಡಿದರು.

ಟಿ.ಎಂ.ಹೊಸೂರು ಗೇಟ್‌ನಿಂದ ಮಲ್ಲೇಗೌಡನಕೊಪ್ಪಲುವರೆಗೆ ರಸ್ತೆ ಹದಗೆಟ್ಟಿದ್ದು, ಅಭಿವೃದ್ಧಿಪಡಿಸುವಂತೆ ಸ್ಥಳೀಯರು ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಸಿ.ಮರಿಯಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ದೇವರಾಜು, ಮನ್‌ಮುಲ್‌ ನಿರ್ದೇಶಕ ಬಿ.ಬೋರೇ ಗೌಡ, ಸಿದ್ದೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಆನಂದ್‌, ಉಪಾಧ್ಯಕ್ಷೆ ಶಕುಂತಲಾ, ಸದಸ್ಯರಾದ ಜಿ.ಪಿ. ಸತೀಶ್‌, ಧರ್ಮ ರಾಜು, ರಾಘವ, ಎನ್‌.ನಂಜೇಗೌಡ, ಮಂಗಳಗೌರಮ್ಮ, ಎಂಪಿಸಿಎಸ್‌ ಅಧ್ಯಕ್ಷ ಎಲ್‌.ಸ್ವಾಮಿ, ಕಾರ್ಯದರ್ಶಿ ಮಂಜು ಆರಾಧ್ಯ, ವಿಎಸ್‌ಎಸ್‌ಎನ್‌ ಮಾಜಿ ಅಧ್ಯಕ್ಷ ಸಿ.ಎಸ್‌. ಬಸವರಾಜು, ಸುರೇಶ್‌, ರೇವಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.