ADVERTISEMENT

40 ಹಾಸಿಗೆಗಳ ಹೆರಿಗೆ ವಾರ್ಡ್‌ಗೆ ಭೂಮಿಪೂಜೆ

ಜಿಲ್ಲಾಸ್ಪತ್ರೆಗೆ ದೇವಮ್ಮ ಪುಟ್ಟಚ್ಚಿ ಸಿದ್ದೇಗೌಡ ಸಾಂಸ್ಕೃತಿಕ ಟ್ರಸ್ಟ್‌ನಿಂದ ಕೊಡುಗೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 9:25 IST
Last Updated 20 ಜುಲೈ 2017, 9:25 IST

ಮಂಡ್ಯ: ಜಿಲ್ಲಾಸ್ಪತ್ರೆಯ ಆವರಣದಲ್ಲಿ ದೇವಮ್ಮ ಪುಟ್ಟಚ್ಚಿ ಸಿದ್ದೇಗೌಡ ಸಾಂಸ್ಕೃತಿಕ ಟ್ರಸ್ಟ್‌ನಿಂದ 40 ಹಾಸಿಗೆಗಳನ್ನೊಳಗೊಂಡ ಒಂದು ಅಂತಸ್ತಿನ ಕಟ್ಟಡ ಕಾಮಗಾರಿಗೆ ಟ್ರಸ್ಟ್‌ನ ಡಾ.ಕೆ.ಎಸ್‌.ಕೃಷ್ಣ ಮತ್ತು ಮೀನಾ ದಂಪತಿ ಬುಧವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ‘ಹಿಂದೆ ಡಯಾಲಿಸಿಸ್‌ಗೆ ಅನುಕೂಲ ಆಗಲೆಂದು ಯಂತ್ರಗಳನ್ನು ಜಿಲ್ಲಾಸ್ಪತ್ರೆಗೆ ಟ್ರಸ್ಟ್‌ ಮೂಲಕ ನೀಡಲಾಗಿತ್ತು. ಅದನ್ನು ರೋಗಿಗಳು ಬಳಸಿಕೊಳ್ಳುತ್ತಿದ್ದಾರೆ’ ಎಂದು ಹೇಳಿದರು.

ಪ್ರಸ್ತುತ ಹೆರಿಗೆ ವಾರ್ಡಿನ ಸಮಸ್ಯೆಯಿಂದಾಗಿ ಬಾಣಂತಿಯರಿಗೆ ತೊಂದರೆ ಆಗುತ್ತಿರುವುದು ಕಂಡು ಬಂದಿದೆ. ಅದನ್ನು ಬಗೆಹರಿಸಲು 40 ಹಾಸಿಗೆಗಳನ್ನು ಒಳಗೊಂಡ ಒಂದು ಕಟ್ಟಡ ನಿರ್ಮಿಸಲಾಗುವುದು. ಕಟ್ಟಡ ಕಾಮಗಾರಿ 6 ತಿಂಗಳಿನಲ್ಲಿ ಮುಗಿಯಲಿದ್ದು, ರೋಗಿಗಳ ಸೇವೆಗೆ ಅನುಕೂಲ ಆಗಲಿದೆ ಎಂದು ತಿಳಿಸಿದರು.

ADVERTISEMENT

ಸಮಾಜದಲ್ಲಿ ಪ್ರತಿಯೊಬ್ಬರೂ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಬಡವರಿಗೆ ನೆರವಾಗಲು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಂಘ–ಸಂಸ್ಥೆಗಳು ತೊಡಗಬೇಕು. ಆರೋಗ್ಯ ಸೇವೆಗೆ ಹೆಚ್ಚು ಒತ್ತು ನೀಡಬೇಕು ಎಂದು ಅಭಿಪ್ರಾಯಪಟ್ಟರು. ಮಿಮ್ಸ್‌ ನಿರ್ದೇಶಕ ಜಿ.ಎಂ.ಪ್ರಕಾಶ್‌, ಟ್ರಸ್ಟಿಗಳಾದ ಕೆ.ಎಸ್‌.ದೊರೆಸ್ವಾಮಿ, ಕೆ.ಎಸ್‌.ಶ್ರೀಕಂಠಸ್ವಾಮಿ, ಡಾ.ಜಯರಾಂ, ಡಾ.ಡಿ.ಉಷಾರಾಣಿ, ಗುತ್ತಿಗೆದಾರ ಬೋರೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.